Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮೈಸೂರಿನ ಪ್ರಮೀಳೆಯರ ಪಾಕ ಪ್ರದರ್ಶನ

ಮೈಸೂರು ಜಿಲ್ಲೆಯ ವಿಶೇಷ ಖಾದ್ಯಗಳ ತಯಾರಿಕೆ ಕುರಿತಾದ ಕಾರ್ಯಕ್ರಮ ಒಂದು ವಾರಗಳ ಕಾಲ ಪ್ರಸಾರ ಕಾಣಲಿದ್ದು ಆರಂಭದ ದಿನವಾದ ಭಾನುವಾರ ಮೈಸೂರಿನ ಸುಪ್ರಸಿದ್ದ ತಾರಾ ಹೋಟೆಲ್‌ಗಳ ವಿವಿಧ ಬಾಣಸಿಗರು ತಾವು ತಯಾರಿಸುವ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸುವ ಬಗೆ ಪರಿಚಯಿಸಿದ್ದಾರೆ. ಈ ಪೈಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಮೈಸೂರ್ ಪಾಕ್ , ಮೈಸೂರಿನಲ್ಲಿ ಹೇಗೆ ತಯಾರಾಗುತ್ತದೆ ಹಾಗೂ ಅದರ ವಿಶೇಷಗಳೇನು ಎಂಬುದರ ಮಾಹಿತಿಯೂ ನೀಡಲಾಗುತ್ತದೆ.
ಮೈಸೂರು ಜಿಲ್ಲೆಯಿಂದ ಐವರನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದ್ದು ಮೈಸೂರು ಸೀಮೆಯ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಮೈಸೂರು ನಗರದಲ್ಲಿ ಜನಪ್ರಿಯವಾಗಿರುವ ವಿಶೇಷ ಆಹಾರ ಪದಾರ್ಥಗಳ ತಯಾರಿಕೆಯ ಬಗೆಯನ್ನು ಅವರು ಪರಿಚಯಿಸಲಿದ್ದಾರೆ. ಈ ಐದು ಜನರ ನಡುವೆ ಆರೋಗ್ಯಕರವಾದ ಸ್ಪರ್ಧೆಯೂ ಸಹ ಇದ್ದು ಡಿಸೆಂಬರ್ 4ರ ಶುಕ್ರವಾರದವರೆಗೂ ವಿವಿಧ ಹಂತದ ಸ್ಪರ್ಧೆಗಳು ನಡೆಯಲಿವೆ. ಡಿಸೆಂಬರ್ 5ರಂದು ಅಂತಿಮ ಹಂತದ ಸ್ಪರ್ಧೆ ಇದ್ದು ಅತ್ಯುತ್ತಮ ಆಹಾರ ಪದಾರ್ಥ ತಯಾರಿಸಿದವರನ್ನು ಮೈಸೂರ್ ಡಿಸ್ಟ್ರಿಕ್ಟ್ ಕುಕ್ರಿ ಕ್ವೀನ್ ಎಂಬ ಬಿರುದಿತ್ತು ಬಹುಮಾನ ನೀಡಲಾಗುವುದು.
ಈ ಸರಣಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಹಾರ ಪದಾರ್ಥಗಳ ವಿಶೇಷ ಹಾಗೂ ವೈಶಿಷ್ಟ್ಯಗಳನ್ನು ಪರಿಚಯಿಸಲಿದ್ದು ಪ್ರತಿ ದಿನ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.
ಈ ಕಾರ್ಯಕ್ರಮ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಸಂಪರ್ಕಿಸಿ :
ಮಧುಸೂಧನ್.ವಿ
99002 89844



Click it and Unblock the Notifications
