Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಅಡುಗೆ ಮನೆಗೆ ಹೊಸ ಭಾಷ್ಯ ಬರೆದ ಟಿಟಿಕೆ

ಸಣ್ಣ ಗೂಡಿನಂತಿರುವ ಅಡುಗೆ ಮನೆಯಿಂದ ಹಿಡಿದು ಓಪನ್ ಕಿಚನ್, ಮಾರ್ಡನ್ ಕಿಚನ್ ಹೀಗೆ ವಿವಿಧ ಸ್ತರದ ಅಡುಗೆಮನೆಗಳಿಗೆ ತಕ್ಕಂತೆ ಕುಕ್ಕರ್ ಗಳನ್ನು ವಿನ್ಯಾಸಗೊಳಿಸುವಲ್ಲಿ ಪ್ರೆಸ್ಟೀಜ್ ಕಂಪೆನಿ ಎತ್ತಿದ ಕೈ.
ಆಪಲ್ ಅಲ್ಯೂಮಿನಿಯಂ ಫ್ರೆಷರ್ ಕುಕ್ಕರ್ ಗಳು ನಾಲ್ಕು ವಿವಿಧ ಶ್ರೇಣಿಗಳಲ್ಲಿ ಲಭ್ಯವಿದ್ದು, ಹಸಿರು ಹಾಗೂ ಕೆಂಪು ಬಣ್ಣದ ಕುಕ್ಕರ್ ಗಳು ಲಲನೆಯರ ಮನಗೆಲ್ಲುವುದು ಗ್ಯಾರಂಟಿ ಎನ್ನುತ್ತಾರೆ ಟಿಟಿಕೆ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಚಂದ್ರು.
ಸುರಕ್ಷತೆಗೆ ಹೆಚ್ಚು ಒತ್ತು ನೀಡಿ, ವೇಟ್ ವಾಲ್ವ್ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದ್ದು, ಹಿಡಿಕೆಯು ಗ್ರಾಹಕಸ್ನೇಹಿಯಾಗಿದೆ. ಸುರಕ್ಷತೆ ಹಾಗೂ ಸೌಂದರ್ಯಪೂರ್ಣವಾದ ಈ ಫ್ರೆಷರ್ ಕುಕ್ಕರ್ ಗಳು ರು.980 ರಿಂದ ರು.1450 ಆಗುತ್ತದೆ. ಪ್ರೆಸ್ಟೀಜ್ ಸ್ಮಾರ್ಟ್ ಕಿಚನ್ ಷೋರೂಮ್ ಗಳಲ್ಲದೆ ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ಲಭ್ಯವಿರುತ್ತದೆ.
ಪ್ರೆಷರ್ ಕುಕ್ಕರ್ ಮಾರುಕಟ್ಟೆಯ ಅಗ್ರಸ್ಥಾನದಲ್ಲಿರುವ ಟಿಟಿಕೆ, ಹೊಸ ವಿನ್ಯಾಸಗಳ ಮೂಲಕ ಹೆಚ್ಚೆಚ್ಚು ಜನರನ್ನು ತಲುಪಲು ಉದ್ದೇಶಿಸಿದೆ. ಆಕರ್ಷಕ ವಿನ್ಯಾಸ ಹಾಗೂ ಸುಲಭ ಬಳಕೆ ವಿಧಾನ ಉಳ್ಳ ಪರಿಕರಗಳನ್ನೇ ಯುವಜನತೆ ಹೆಚ್ಚು ಇಷ್ಟಪಡುತ್ತಾರೆ ಎಂದು ಚಂದ್ರು ಕಾರ್ಲೊ ಹೇಳುತ್ತಾರೆ.
ಟಿಟಿಕೆ ಪ್ರೆಸ್ಟೀಜ್ ಬಗ್ಗೆ ಇಂದಿಷ್ಟು:
1200 ಕೋಟಿ ರು ತೂಕುವ ಟಿಟಿಕೆ ಸಮೂಹದ ಭಾಗವಾಗಿರುವ ಟಿಟಿಕೆ ಪ್ರೆಸ್ಟೀಜ್ ಲಿ.ಭಾರತದ ಅಡುಗೆಮನೆ ಪರಿಕರ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ.
ಪ್ರೆಷರ್ ಕುಕ್ಕರ್, ನಾನ್ ಸ್ಟಿಕ್ ಕುಕ್ ವೇರ್, ಗ್ಯಾಸ್ ಸ್ಟವ್, ಮಾರ್ಡನ್ ಕಿಚನ್ ಸೆಟ್ ಇವು ಪ್ರೆಸ್ಟೀಜ್ ನ ಪ್ರಮುಖ ಉತ್ಪನ್ನಗಳು. ಪ್ರೆಸ್ಟೀಜ್ ಸ್ಮಾರ್ಟ್ ಕಿಚನ್ ಮಳಿಗೆ ದೇಶದ ಪ್ರಮುಖ ವ್ಯಾಪಾರ ಕೇಂದ್ರಗಳಾಗಿವೆ.
ರೂರ್ಕಿ, ಕೊಯಮತ್ತೂರು ಅಲ್ಲದೆ ಹೊಸೂರಿನಲ್ಲಿ ತಯಾರಿಕಾ ಘಟಕ ಹೊಂದಿರುವ ಟಿಟಿಕೆ, ಯುಕೆಯ ಮೆಯರ್ ಪ್ರೆಸ್ಟೀಜ್ ನ ಸಹಯೋಗದೊಂದಿಗೆ ಪಶ್ಚಿಮ ಏಷ್ಯಾ ಹಾಗೂ ಆಫ್ರಿಕಾದ ಅಡುಗೆಮನೆಗಳನ್ನು ತಲುಪಿದೆ.
ISO 9001 ಪ್ರಮಾಣ ಪತ್ರ ಪಡೆದ ಭಾರತದ ಪ್ರಥಮ ಅಡುಗೆಪರಿಕರ ತಯಾರಿಕಾ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಟಿಟಿಕೆ ಪ್ರೆಸ್ಟೀಜ್ ಪಡೆದಿದೆ. ಇದಲ್ಲದೆ ಜರ್ಮನಿಯ PED / CE ಪ್ರಮಾಣ ಪತ್ರ ಕೂಡಾ ತನ್ನದಾಗಿಸಿಕೊಂಡಿದೆ. ಬಿಎಸ್ ಇ ಹಾಗೂ ಎನ್ ಎಸ್ ಸಿ ಸ್ಯೂಚಂಕದಲ್ಲೂ ಪ್ರೆಸ್ಟೀಜ್ ಷೇರುಗಳ ಏರಿಳಿತ ಕಾಣಸಿಗುತ್ತದೆ.



Click it and Unblock the Notifications
