Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮನಸು ಎಂದೆಂದಿಗೂ ಉಲ್ಲಾಸದಿಂದಿರಲು ಬೀನ್ಸ್

ನಾರಿನಂಶ ಬೀನ್ಸ್ ಗಳಲ್ಲಿ ಅಧಿಕವಾಗಿರುತ್ತದೆ. ಬೇಯಿಸಿದ ಒಂದು ಕಪ್ ಸೋಯಾ ಬೀನ್ಸ್ ನಲ್ಲಿ ಉಳಿದ ಪೋಷಕಾಂಶಗಳ ಜೊತೆಗೆ 15 ಗ್ರಾಂನಷ್ಟು ನಾರಿನಂಶ ಮತ್ತು 29 ಗ್ರಾಂನಷ್ಟು ಪ್ರೊಟೀನ್ ಇರುತ್ತದೆ. ನಾರಿನಂಶವಿರುವುದರಿಂದ ಬೀನ್ಸ್ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ, ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸುತ್ತದೆ. ಮಧುಮೇಹ ಮತ್ತು ಹೃದ್ರೋಗ ಬಾರದಂತೆ ಬೀನ್ಸ್ ಗಳು ಅಡ್ಡಗಾಲು ಹಾಕುತ್ತವೆ.
ದೇಹದಲ್ಲಿ ಜೀವಕೋಶಗಳು ಉತ್ಪತ್ತಿಯಾಗಲು ಪೊಟ್ಯಾಶಿಯಂ ಬೇಕೇಬೇಕು. ಕಿಡ್ನಿ ಬೀನ್ಸ್ ಗಳಲ್ಲಿ ಪೊಟ್ಯಾಶಿಯಂ ಹೆಚ್ಚಾಗಿರುತ್ತದೆ. ಮಹಿಳೆಯರ ಮೂಳೆ ಗಟ್ಟಿಯಾಗುವಲ್ಲಿ, ಸ್ನಾಯುಗಳು ಹುರಿಗೊಳ್ಳುವಲ್ಲಿ ಮತ್ತು ನರಮಂಡಲ ಸರಿಯಾಗಿ ಕೆಲಸ ಮಾಡುವಲ್ಲಿ ಕಿಡ್ನಿ ಬೀನ್ಸ್ ಸಹಕರಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದನ್ನು ಕಿಡ್ನಿ ಬೀನ್ಸ್ ಶೇ.65ರಷ್ಟು ತಡೆಯುತ್ತದೆ.
ಮೂರು ದಿನಗಳ ಕ್ಯಾಜುಯಲ್ ರಜಾ ಇರುವಾಗ ಕೂಡ ಆರೋಗ್ಯ ಉತ್ತಮವಾಗಿರುವಂತೆ ಕಿಡ್ನಿ ಬೀನ್ಸ್ ನೋಡಿಕೊಳ್ಳುತ್ತದೆ. ಇದನ್ನು ನಿಯಮಿತವಾಗಿ ತಿಂದರೆ ಗರ್ಭಕೋಶದ ಕ್ಯಾನ್ಸರ್ ಹತ್ತಿರವೂ ಸುಳಿಯುವುದಿಲ್ಲ. ಮತ್ತೆ, ಹಸಿವನ್ನು ಇಂಗಿಸುತ್ತದೆ, ನಿದ್ರಾಹೀನತೆಯನ್ನು ತೊಲಗಿಸುತ್ತದೆ, ಮನಸು ಉಲ್ಲಾಸವಾಗಿರುವಂತೆ ನೋಡಿಕೊಳ್ಳುತ್ತದೆ. ಇನ್ನೇನು ಬೇಕು?
ಸೈಡ್ ಎಫೆಕ್ಟ್ : ಎಂಥ ಕಷ್ಟವನ್ನೂ ನಗುನಗುತ್ತ ಸ್ವೀಕರಿಸುವ ಮನೋಬಲ ದಕ್ಕುತ್ತದೆ. Next ಒಣ ಹಣ್ಣುಗಳು



Click it and Unblock the Notifications
