For Quick Alerts
ALLOW NOTIFICATIONS  
For Daily Alerts

ಗಣೇಶ ಹಬ್ಬಕ್ಕೆ ಕಾಯಿ ಮೋದಕ ರೆಸಿಪಿ

Posted By:
|

ನಮ್ಮೆಲ್ಲರ ನೆಚ್ಚಿನ ಗಣೇಶ ಹಬ್ಬ ಸಮೀಪಿಸುತ್ತಿದೆ. ಸೆಪ್ಟೆಂಬರ್‌ 10ಕ್ಕೆ ಗಣೇಶ ಹಬ್ಬವನ್ನು ಆಚರಿಸಲಾಗುವುದು. ಗಣೇಶ ಹಬ್ಬಕ್ಕೆ ಮೋದಕ ಇಲ್ಲದೇ ಹಬ್ಬ ಆಚರಿಸಲು ಸಾಧ್ಯವೇ? ಗಣೇಶನಿಗೆ ಮೋದಕಗಳೆಂದರೆ ತುಂಬಾ ಪ್ರಿಯವಾದದ್ದು. ಗಣೇಶ ಹಬ್ಬದಂದು ವಿಧ-ವಿಧವಾದ ಮೋದಕಗಳನ್ನು ತಯಾರಿಸಲಾಗುವುದು. ನಾವಿಲ್ಲಿ ಕಾಯಿ ಮೋದಕದ ರೆಸಿಪಿ ನೀಡಿದ್ದೇವೆ.

coconut modak recipe

ಇದು ತುಂಬಾ ಸರಳವಾದ ರೆಸಿಪಿಯಾಗಿದ್ದು, ಈ ಮೋದಕವನ್ನು ಬೆಲ್ಲ ಹಾಕಿ, ಹಬೆಯಲ್ಲಿ ಬೇಯಿಸಿ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Coconut Modak Recipe, ಗಣೇಶ ಹಬ್ಬಕ್ಕೆ ಕಾಯಿ ಮೋದಕ ರೆಸಿಪಿ
Coconut Modak Recipe, ಗಣೇಶ ಹಬ್ಬಕ್ಕೆ ಕಾಯಿ ಮೋದಕ ರೆಸಿಪಿ
Prep Time
1 Hours0 Mins
Cook Time
15M
Total Time
1 Hours15 Mins

Recipe By: Reena TK

Recipe Type: sweet

Serves: 10

Ingredients
  • ಬೇಕಾಗುವ ಸಾಮಗ್ರಿ

    2 ಕಪ್ ಅಕ್ಕಿ ಹಿಟ್ಟು

    1 ಕಪ್ ನೀರು

    1 ಚಮಚ ತುಪ್ಪ

    1/2 ಚಮಚ ಉಪ್ಪು

    ಮೋದಕ ಒಳಗೆ ತುಂಬಲು

    2 ಕಪ್ ತೆಂಗಿನ ತುರಿ

    1 ಕಪ್ ಬೆಲ್ಲದ ಪುಡಿ

    1 ಚಮಚ ತುಪ್ಪ

    1/2 ಚಮಚ ಏಲಕ್ಕಿ

Red Rice Kanda Poha
How to Prepare
  • ತಯಾರಿಸುವ ವಿಧಾನ:

    * ಮೊದಲಿಗೆ ಮೋದಕದ ಒಳಗೆ ತುಂಬಲು ರೆಡಿ ಮಾಡಬೇಕು.

    * ನಂತರ ಮೋದಕ ಹಿಟ್ಟು ತಯಾರಿಸಬೇಕು.

    * ಮೋದಕ ತಯಾರಿಸುವುದು

    * ಮೋದಕ ಬೇಯಿಸುವುದು

Instructions
  • ಸಲಹೆ: ನೀವು ಮೋದಕ ಮಾಡುವಾಗ ತುಂಬಾ ನುಣ್ಣನೆ ಪುಡಿ ಮಾಡಿದ ಹಿಟ್ಟು ಹಾಕಿ. (ಮೋದಕ ತಯಾರಿಸಲು ಹಿಟ್ಟು ಸಿಗುತ್ತದೆ, ಅದರಿಂದಲೂ ಮಾಡಬಹುದು. * ಹಿಟ್ಟು ಸ್ವಲ್ಪ ಬಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟಿ ತಟ್ಟಿ ಮೋದಕ ತಯಾರಿಸಿ. * ಮೋದಕ ಹಿಟ್ಟು ತೆಳುವಾಗಿರಲಿ. ತುಂಬಾ ದಪ್ಪವಿದ್ದರೆ ಅಷ್ಟು ರುಚಿಯಿರಲ್ಲ.
Nutritional Information
  • ಸರ್ವ್ - 1 ಮೋದಕ
  • ಕ್ಯಾಲೋರಿ - 140ಕ್ಯಾ
  • ಕೊಬ್ಬು - 4.4 ಗ್ರಾಂ
  • ಕಾರ್ಬ್ಸ್ - 20ಗ್ರಾಂ
  • ನಾರಿನಂಶ - 2ಗ್ರಾಂ

ಮೋದಕ ಒಳಗೆ ತುಂಬಲು
* ಕಡಾಯಿಯನ್ನು ಬಿಸಿ ಮಾಡಿ ಒಂದು ಚಮಚ ತುಪ್ಪ ಹಾಕಿ.
* ಈಗ ಅದರಲ್ಲಿ 2 ಕಪ್ ತೆಂಗಿನ ತುರಿ ಹಾಕಿ ಹುರಿಯಿರಿ. ತೆಂಗಿನಕಾಯಿಯಿಂದ ಒಳ್ಳೆಯ ವಾಸನೆ ಬರುವವರೆಗೆ ಫ್ರೈ ಮಾಡಿ.
* ಈಗ 1 ಕಪ್ ಬೆಲ್ಲ ಹಾಕಿ ಮಿಕ್ಸ್ ಮಾಡಿ
* ಬೆಲ್ಲ ಕರಗಿ, ತೆಂಗಿನಕಾಯಿ ಹಾಕಿ ಮಿಶ್ರ ಮಾಡಿ, ಅದು ಗಟ್ಟಿಯಾಗುವವರೆಗೆ ಸೌಟ್‌ನಿಂದ ಆಡಿಸುತ್ತಾ ಬೇಯಿಸುತ್ತಾ ಇರಿ.
* ಮಿಶ್ರಣ ಗಟ್ಟಿಯಾದ ಬಳಿಕ ಉರಿ ಆಫ್‌ ಮಾಡಿ ತೆಗೆದಿಡಿ.

ಮೋದಕ ಹಿಟ್ಟು ತಯಾರಿಸುವುದು ಹೇಗೆ?
* ಒಂದು ದೊಡ್ಡ ಕಡಾಯಿ ತೆಗೆದು ಅದರಲ್ಲಿ 1 ಕಪ್ ನೀರು ಹಾಕಿ.
* ನೀರನ್ನು ಬಿಸಿ ಮಾಡಿ, ಅದರಲ್ಲಿ 1 ಚಮಚ ತುಪ್ಪ, 1/2 ಚಮಚ ಉಪ್ಪು ಹಾಕಿ.
* ನೀರು ಚೆನ್ನಾಗಿ ಕುದಿಯಲಿ.
* ನೀರು ಕುದಿಯಲಾರಂಭಿಸಿದಾಗ ಅಕ್ಕಿ ಹಿಟ್ಟು ಹಾಕಿ, ಅಕ್ಕಿ ಹಿಟ್ಟು ಮೆಲ್ಲನೆ ಸುರಿಯಿರಿ, ಸುರಿಯುವಾಗ ಹಿಟ್ಟು ಗಂಟು ಕಟ್ಟದಿರಲು ಸೌಟ್‌ನಿಂದ ತಿರುಗಿಸುತ್ತಾ ಇರಿ.
* ಉರಿ ಕಡಿಮೆ ಮಾಡಿ ಹಿಟ್ಟನ್ನು ತಿರುಗಿಸುತ್ತಲೇ ಬೇಯಿಸಿ.
* ನಂತರ ಉರಿಯಿಂದ ಇಳಿಸಿ ಒಂದು 5 ನಿಮಿಷ ತಣ್ಣಗಾಗಲು ಇಡಿ.

ಮೋದಕ ಮಾಡುವ ವಿಧಾನ
* ಮೊದಲಿಗೆ ನೀವು ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆ ಮಾಡಿ.
* ಈಗ ಉಂಡೆ ತೆಗೆದು ಕೈಯಲ್ಲಿ ತಟ್ಟಿ, ಮಧ್ಯದಲ್ಲಿ ಸ್ವಲ್ಪ ಗುಂಡಿ ಮಾಡಿ, ಅದರೊಳಗೆ ತೆಂಗಿನಕಾಯಿ ಮಿಶ್ರಣ ಹಾಕಿ ಅದರ ತುದಿ ಕ್ಲೋಸ್ ಮಾಡಿ ಅದರ ತುದಿ ಹಿಡಿದು ತಿರುಗಿಸಿ.
* ಈಗ ಎಲ್ಲಾ ಹಿಟ್ಟನ್ನುಅವುಗಳನ್ನು ಹಬೆಯಲ್ಲಿ ಬೇಯಿಸಿ.
ಹಬೆಯಲ್ಲಿ ಬೇಯಿಸುವಾಗ ಬಾಳೆ ಎಲೆ ಮೇಲೆ ಈ ಮೋದಕಗಳನ್ನು ಇಟ್ಟು 10-15 ನಿಮಿಷ ಬೇಯಿಸಿ.

[ 5 of 5 - 94 Users]
Story first published: Wednesday, September 8, 2021, 15:45 [IST]
X
Desktop Bottom Promotion