Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಘಮಘಮಿಸುವ ಸಾಂಬಾರ್ ಪುಡಿ ರೆಸಿಪಿ
ಸಾಂಬಾರ್ ಪುಡಿ ಚೆನ್ನಾಗಿದ್ದರೆ ಮಾತ್ರ ಸಾಂಬರ್ ನ ರುಚಿ ಹೆಚ್ಚುವುದು.ಇಲ್ಲದಿದ್ದರೆ ಯಾವುದೇ ತರಕಾರಿ ಹಾಕಿ ಮಾಡಿದರೂ ಸಾರು ರುಚಿ ಅನಿಸುವುದಿಲ್ಲ. ಸಾಂಬಾರ್ ಪುಡಿಗೆ ಬಳಸುವ ಸಾಮಾಗ್ರಿಗಳಲ್ಲಿ ಸಾಂಬಾರ್ ನ ರುಚಿ ಅಡಗಿದೆ.
ಸಾಂಬರ್ ಪುಡಿಯನ್ನು ಹೊರಗಿನಿಂದ ತರುವ ಬದಲು ಸಾಂಬಾರ್ ನ ರುಚಿ ಹೆಚ್ಚಿಸುವ ಮತ್ತು ಅಡುಗೆ ಘಮಘಮಿಸುವಂತೆ ಮಾಡುವ ಸಾಂಬಾರ್ ಪುಡಿಯನ್ನು ಮನೆಯಲ್ಲಿಯೇ ಮಾಡಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಕೊತ್ತಂಬರಿ ಬೀಜ ಅರ್ಧ ಕಪ್
* ಜೀರಿಗೆ 1 ಕಪ್
* ಒಣ ಮೆಣಸು 20-25
* ಮೆಂತೆ 2 ಚಮಚ
* ಉದ್ದಿನ ಬೇಳೆ 3 ಚಮಚ
* ಕರಿ ಬೇವಿನ ಎಲೆ 8-10
* ಚಕ್ಕೆ 1
* ಎಣ್ಣೆ
ತಯಾರಿಸುವ ವಿಧಾನ:
* ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಒಣ ಮೆಣಸನ್ನು ಹುರಿದು ನೀರಿನಂಶವಿಲ್ಲದ ಪಾತ್ರೆಯಲ್ಲಿ ಹಾಕಿಡಬೇಕು.
* ಈಗ ಪುನಃ ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಅದರಲ್ಲಿ ಮೆಂತೆ, ಕೊತ್ತಂಬರಿ ಬೀಜ, ಜೀರಿಗೆ, ಕರಿ ಬೇವಿನ ಎಲೆ, ಚಕ್ಕೆ, ಉದ್ದಿನ ಬೇಳೆ ಇವುಗಳನ್ನು ಹಾಕಿ ಹುರಿದು ಒಣ ಮೆಣಸು ಹಾಕಿದ ಪಾತ್ರೆಯಲ್ಲಿ ಹಾಕಿ ಇವುಗಳ ಬಿಸಿ ಆರಲು ಇಡಿ.
* ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ತೇವಾಂಶವಿಲ್ಲದ ಡಬ್ಬಿಯಲ್ಲಿಡಿ. ಈ ಸಾಂಬಾರ್ ಪುಡಿ ಮಾಡಿ ಸಾಂಬರ್ ಗೆ ಹಾಕಿದರೆ ಅಂಗಡಿಯ ಸಾಂಬಾರ್ ಪುಡಿ ಹಾಕಿ ತಯಾರಿಸುವ ಅಡುಗೆಗಿಂತ ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
