Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಸಳೆ ಸೊಪ್ಪಿನ ರಾಯತದ ರುಚಿ ನೋಡಿ
Chutney
oi-Sumalatha
By Sumalatha

ಬಸಳೆ ಸೊಪ್ಪಿನ ರಾಯತಗೆ ಬೇಕಾಗುವ ಪದಾರ್ಥಗಳು:
* ಒಂದು ಬಟ್ಟಲು ತೊಳೆದಿಟ್ಟ ಬಸಳೆ ಸೊಪ್ಪು
*1 ಕಪ್ ತಾಜಾ ತೆಂಗಿನ ತುರಿ
* 2-3 ಹಸಿರು ಮೆಣಸಿನಕಾಯಿ
* 1 ಚಮಚ ಜೀರಿಗೆ
* ರುಚಿಗೆ ತಕ್ಕಷ್ಟು ಉಪ್ಪು
* 1 ಕಪ್ ಗಟ್ಟಿ ಮೊಸರು
* 1/2 ಚಮಚ ಸಾಸಿವೆ
* ಎಣ್ಣೆ
ಬಸಳೆ ಸೊಪ್ಪಿನ ರಾಯತ ಮಾಡುವುದು ಹೇಗೆ?
* ಮೊದಲು ಕುಕ್ಕರ್ ನಲ್ಲಿ ಕತ್ತರಿಸಿದ ಬಸಳೆ ಸೊಪ್ಪನ್ನು 10 ನಿಮಿಷ ಬೇಯಿಸಿ ನೀರು ಬಸಿದು ಒಂದೆಡೆ ಇಡಬೇಕು.
* ಒಂದು ಕಪ್ ಮೊಸರಿಗೆ ಬೇಯಿಸಿದ ಬಸಳೆ ಸೊಪ್ಪನ್ನು ಬೆರೆಸಬೇಕು.
* ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಅದರಲ್ಲಿ ಮೆಣಸಿನಕಾಯಿ, ತೆಂಗಿನ ತುರಿ ಮತ್ತು ಜೀರಿಗೆಯನ್ನು ಹಾಕಿ ಹುರಿಯಬೇಕು. ಈ ಮಿಶ್ರಣವನ್ನು ರುಬ್ಬಿಕೊಳ್ಳಬೇಕು.
* ಈ ಮಿಶ್ರಣದೊಂದಿಗೆ ಉಪ್ಪನ್ನು ಮೊಸರಿಗೆ ಬೆರೆಸಿ ಚೆನ್ನಾಗಿ ತಿರುಗಿಸಬೇಕು.
* ಸಾಸಿವೆಯಿಂದ ಒಗ್ಗರಣೆ ನೀಡಿದರೆ ಬಸಳೆ ಸೊಪ್ಪಿನ ರಾಯತ ತಿನ್ನಲು ಸಿದ್ಧವಾಗಿರುತ್ತೆ.
ಈ ರಾಯತವನ್ನು ಪಲಾವ್, ಬಿಸಿ ಬೆಳೆ ಬಾತ್ ಜೊತೆಗೂ ತಿನ್ನಬಹುದು.ಪರೋಟಾ, ಚಪಾತಿ ಜೊತೆಗೂ ಒಳ್ಳೆ ಕಾಂಬಿನೇಶನ್.
Comments
English summary
Red Vine Spinach Raita | Basale Soppu Raita | ಬಸಳೆ ಸೊಪ್ಪಿನ ರಾಯತ
Story first published: Tuesday, December 13, 2011, 12:11 [IST]
Other articles published on Dec 13, 2011



Click it and Unblock the Notifications
