Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಖಾರಾ ಖಾರಾ ಮಿರ್ಚಿ ಚಟ್ನಿ ಮಾಡಿ ಸವಿಯಿರಿ

ಬಿಸಿ ಅನ್ನದೊಂದಿಗೆ ಬೆರೆಸಿ ತಿಂದರಂತೂ ರುಚಿಗೆ ಪಾರವೇ ಇಲ್ಲದಂತೆ. ಹಸಿಮೆಣಸಿನ ಕಾಯಿಯಿಂದ ರುಚಿಕರವಾದ ಚಟ್ನಿ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
ಮೆಣಸಿನ ಕಾಯಿ ಚಟ್ನಿಗೆ ಏನೇನು ಬೇಕು?
* 100 ಗ್ರಾಂ ಹಸಿರು ಮೆಣಸಿನ ಕಾಯಿ
* ನಿಂಬೆಹಣ್ಣಿನ ಗಾತ್ರದ ಹುಣಸೆ ಹಣ್ಣು
* 50 ಗ್ರಾಂ ಬೆಲ್ಲ
* 1/2 ಹೋಳು ತೆಂಗಿನ ತುರಿ
* ರುಚಿಗೆ ತಕ್ಕಷ್ಟು ಉಪ್ಪು
* ಎಣ್ಣೆ, ಸಾಸಿವೆ, ಇಂಗು
ಹಸಿರು ಮೆಣಸಿನ ಕಾಯಿ ಚಟ್ನಿ ತಯಾರಿಸುವ ವಿಧಾನ:
* ಮೊದಲು ಹಸಿರು ಮೆಣಸಿನ ಕಾಯಿಯ ತೊಟ್ಟನ್ನು ಬಿಡಿಸಿಕೊಂಡು ಅದರೊಳಗಿನ ಬೀಜವನ್ನು ಅರ್ಧ ಭಾಗ ತೆಗೆದುಬಿಡಬೇಕು.
* ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಅದರಲ್ಲಿ ಮೆಣಸಿನಕಾಯಿಯನ್ನು ಹುರಿದುಕೊಳ್ಳಬೇಕು.
* ನಂತರ ಹಸಿರು ಮೆಣಸಿನಕಾಯಿ, ತೆಂಗಿನ ತುರಿ, ಹುಣಸೆ ಹಣ್ಣು, ಉಪ್ಪು, ಬೆಲ್ಲ ಸೇರಿಸಿ ಹದವಾಗಿ ರುಬ್ಬಿಕೊಳ್ಳಬೇಕು.
* ಕೊನೆಗೆ ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಸಾಸಿವೆ, ಇಂಗಿನಿಂದ ಚಟ್ನಿಗೆ ಒಗ್ಗರಣೆ ಹಾಕಿ ಎಲ್ಲವನ್ನೂ ಬೆರೆಸಿದರೆ ಖಾರ ಖಾರವಾದ ಹಸಿರು ಮೆಣಸಿನ ಕಾಯಿ ಚಟ್ನಿ ತಿನ್ನಲು ತಯಾರಾಗಿರುತ್ತೆ.



Click it and Unblock the Notifications
