Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಏನ್ ಇವತ್ ಬದ್ನೇಕಾಯಿ ಚಟ್ನಿನಾ!

ಇವಿಷ್ಟು ಸಿದ್ಧವಿರಲಿ :
ದೊಡ್ಡ ಗಾತ್ರದ ಬದನೇಕಾಯಿ -2
ಸಾಸಿವೆ -2 ಟೀ ಚಮಚ
ಇಂಗು - ಸ್ವಲ್ಪ
ಉದ್ದಿನಬೇಳೆ - 4 ಟೇಬಲ್ ಚಮಚ
ಹಸಿಮೆಣಸಿನಕಾಯಿ - 7 ರಿಂದ 8
ನಿಂಬೆಹಣ್ಣಿನ ಗಾತ್ರದ ಕ್ಲೀನಾದ ಹುಣಿಸೇಹಣ್ಣು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಹೆಂಗ್ ಮಾಡೋದು:
ಬದನೆಕಾಯಿಯನ್ನು ಬೆಂಕಿಯ ಮೇಲಿಟ್ಟು ಸ್ವಲ್ಪ ಕಪ್ಪಗಾಗುವವರೆಗೆ (ಕಾಯಿ ಮೆತ್ತಗಾಗುವವರೆಗೆ )ಸುಟ್ಟು ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿಡಿ. ಬೆಂಕಿ ಎಂದರೆ, ಇಕ್ಕಳದಲ್ಲಿ ಬದನೆಕಾಯಿ ಇಟ್ಟು ಗ್ಯಾಸ್ ಉರಿಯಲ್ಲಿ ಸುಡುವುದು. ಸಾಸಿವೆ ಮತ್ತು ಇಂಗಿನ ಪುಡಿಯನ್ನು ಲೈಟಾಗಿ ಹುರಿಯಿರಿ. ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಿ. ಮಿಕ್ಸಿಗೆ ಉಪ್ಪು, ಹುಣಿಸೇಹಣ್ಣು, ಹಸಿಮೆಣಸಿನಕಾಯಿ, ಸಾಸಿವೆ, ಇಂಗು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮೋಟಾರ್ ಆನ್ ಮಾಡಿ.
ಸ್ವಲ್ಪ ಹೊತ್ತು ಮಿಕ್ಸಿ ತಿರುಗಿದ ನೆತರ ಅದಕ್ಕೆ ಬದನೆಕಾಯಿಯನ್ನು ಹಾಕಿ ಎರಡು ನಿಮಿಷ ರುಬ್ಬಿರಿ. ಕೊನೆಗೆ, ಉದ್ದಿನಬೇಳೆಯನ್ನು ಹಾಕಿ ಇನ್ನು ಒಂದು ನಿಮಿಷ ಕಾಲ ಕಟಾಯಿಸಿ. ಚಪಾತಿ, ರೊಟ್ಟಿ, ಪುಲ್ಕ, ಅಕ್ಕಿ, ರಾಗಿ,ಜೋಳದ ರೊಟ್ಟಿಗೆ ಬದನೆಕಾಯಿಯ ಚಟ್ನಿ ರುಚಿಗೆ ಕೂಡಿಬರುತ್ತದೆ. ಡಾಭಾದಿಂದ ರೋಟಿ ತಂದು ಮನೆಯಲ್ಲಿ ಚಟ್ನಿ ಮಾಡುವುದು ನನಗೆ ಅಭ್ಯಾಸವಾಗಿದೆ.



Click it and Unblock the Notifications
