Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದಟ್ಸ್ ಪಾಕಶಾಲೆ : ಬೆಳ್ಳುಳ್ಳಿ ಚಟ್ನಿಪುಡಿ
Chutney
oi-Staff
By Super
ಇವಿಷ್ಟು ಬೇಕೇ ಬೇಕು:
ಸಾಧಾರಣ ಗಾತ್ರದ ಬೆಳ್ಳುಳ್ಳಿ: 4 ರಿಂದ 5
ಕಡಲೆ ಬೇಳೆ: 100 ಗ್ರಾಂ
ಉದ್ದಿನ ಬೇಳೆ: 75 ಗ್ರಾಂ
ಒಣ ಮೆಣಸಿನಕಾಯಿ: 5 0ಗ್ರಾಂ
ಒಣ ಕೊಬ್ಬರಿ ತುರಿ: 2 ಮುಷ್ಟಿ ತುಂಬಾ
ಬೆಲ್ಲ: 100 ಗ್ರಾಂ
ಹುಣಸೆ ಹಣ್ಣು: 1 ನಿಂಬೆ ಹಣ್ಣಿನ ಗಾತ್ರ
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: 1ಸೌಟು
ತುಪ್ಪ : 1 ಟೀ ಚಮಚ
ತಯಾರಿಸುವ ವಿಧಾನ :
ಬೆಳ್ಳುಳ್ಳಿ ಹೊಟ್ಟು ಬಿಡಿಸಿ ಇಟ್ಟುಕೊಳ್ಳಿ. ಕಾದ ಬಾಣಲೆಗೆ 1 ಟೀ ಚಮಚ ತುಪ್ಪ ಹಾಕಿ ಬೆಳ್ಳುಳ್ಳಿ ತೊಳೆಗಳನ್ನು ಹುರಿಯಿರಿ. ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸಿನಕಾಯಿಗಳನ್ನು 1 ಸೌಟು ಎಣ್ಣೆ ಹಾಕಿ ಹುರಿಯಿರಿ. ಒಣಕೊಬ್ಬರಿ, ಹುಣಸೆ ಹಣ್ಣನ್ನು ಸ್ವಲ್ಪ ಬೆಚ್ಚಗೆ ಮಾಡಿ. ಬೆಲ್ಲ ಹಾಗೂ ಹುರಿದಿಟ್ಟಿರುವ ಎಲ್ಲ ಪದಾರ್ಥಗಳು ತಣ್ಣಗಾದ ಬಳಿಕ ಮಿಕ್ಸರ್ ನಲ್ಲಿ ಹಾಕಿ ತರಿತರಿಯಾಗಿರುವಂತೆ ಪುಡಿ ಮಾಡಿಕೊಳ್ಳಿ. ಬೆಳ್ಳ್ಳುಳ್ಳಿ ಚಟ್ನಿಪುಡಿ ಸಿದ್ಧವಾದಂತೆ.
(ದಟ್ಸ್ ಕನ್ನಡ ಪಾಕಶಾಲೆ)
Comments
English summary



Click it and Unblock the Notifications
