Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪುದೀನಾ ಚಟ್ನಿಪುಡಿ ರೆಸಿಪಿ

ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ದಾಖಲಾಗುವ ಆಗುಂಬೆಯಲ್ಲಿ ಹುಟ್ಟಿ ಬೆಳೆದು ತೀರ್ಥಹಳ್ಳಿಯಲ್ಲಿ ಕಾಲೇಜು ವ್ಯಾಸಂಗ ಪೂರೈಸಿ ಈಗ ಬಾರ್ಸಿಲೋನ ನಿವಾಸಿಯಾಗಿರುವ ಕನ್ನಡತಿ ತಾರಾಮಣಿ. ಚಟ್ನಿಪುಡಿ ಉಪ್ಪಿನಕಾಯಿ ಇಲ್ಲದೇ ಒಂದು ದಿನವೂ ಅವರು ಊಟವೇ ಮಾಡುವುದಿಲ್ಲವಂತೆ. ಊರಿನಲ್ಲಿದ್ದಾಗ ಅಮ್ಮ ಮಾಡುತ್ತಿದ್ದರು ಈಗ ಇಲ್ಲಿ ನಾನೇ ಮಾಡುತ್ತೇನೆ ವ್ಯತ್ಯಾಸ ಅಷ್ಟೇ ಎಂದು ಇಮೇಲ್ ನಲ್ಲಿ ತಿಳಿಸಿರುವ ಅವರು ಜತೆಗೆ ಚಟ್ನಿಪುಡಿ ಮಾಡುವ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಪ್ರಯತ್ನಿಸಿ ನೋಡೋಣ.
ಬೇಕಾಗುವ ಪದಾರ್ಥಗಳು
ಎರಟು ಕಟ್ಟು ಪುದೀನಾ
ಒಂದು ಕಪ್ ಕಡಲೆಬೇಳೆ
ಒಂದು ಕಪ್ ಉದ್ದಿನಬೇಳೆ
ಒಂದು ಕಪ್ ಒಣಕೊಬ್ಬರಿ ತುರಿ
ಒಂದು ಕಪ್ ಕೆಂಪ್ ಮೆಣ್ಸಿನ್ ಕಾಯಿ
ರುಚಿಗೆ ತಕ್ಕಷ್ಟು ಉಪ್ಪು
ರುಚಿಗೆ ತಕ್ಕಷ್ಟು ಹುಣಿಸೆಹಣ್ಣಿನ ಪೇಸ್ಟ್
ಸಣ್ಣ ತುಂಡು ಬೆಲ್ಲ
ಇಷ್ಟ ಪಟ್ಟರೆ ಚಿಟಿಕೆ ಇಂಗು
ತಯಾರಿಸುವ ವಿಧಾನ
ಪುದೀನಾ ಸೊಪ್ಪಿನ ಎಲೆಗಳನ್ನು ಬಿಡಿಸಿ ಬಿಸಿಲಲ್ಲಿ ಇಡಬೇಕು. ಚೆನ್ನಾಗಿ ಒಣಗಿದ ಎಲೆಗಳು ನೋಡುವುದಕ್ಕೆ ಕಪ್ಪಾಗಿ ಕಂಡರೂ ಗರಿಗರಿಯಾಗಿರುತ್ತವೆ. ಬೇಳೆಗಳು, ಕೊಬ್ಬರಿ, ಮೆಣಸಿನಕಾಯಿಯನ್ನು ಚೂರು ಎಣ್ಣೆ ಹಾಕಿಕೊಂಡು ಒಂದೊಂದನ್ನೂ ಪ್ರತ್ಯೇಕವಾಗಿ (seperate) ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.
ಹುರಿದ ಪದಾರ್ಥಗಳನ್ನು ಒಂದೊಂದಾಗಿ ಮಿಕ್ಸಿಗೆ ಹಾಕುತ್ತಾ ಬರಬೇಕು. ಮೊದಲು ಕಡಲೆಬೇಳೆಯನ್ನು ಪುಡಿಮಾಡಿ ತಟ್ಟೆಗೆ ಹಾಕಿಕೊಳ್ಳಿ. ನಂತರ ಉದ್ದಿನಬೇಳೆ ಹಾಕಿ ರುಬ್ಬಿ ಸಣ್ಣಗೆ ಪುಡಿಯಾದ ನಂತರ ತೆಗೆದು ತಟ್ಟೆಗೆ ಹಾಕಿ. ಆನಂತರದಲ್ಲಿ ಮೆಣಸಿನಕಾಯಿ ಪ್ಲಸ್ ಉಪ್ಪು ಪ್ಲಸ್ ಹುಣಿಸೆ ಪೇಸ್ಟನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಮಿಕ್ಸಿಯಿಂದ ತೆಗೆದು ತಟ್ಟೆಗೆ ಹಾಕಿ.
ಕೊನೆಗೆ ಕೊಬ್ಬರಿ ಪ್ಲಸ್ ಪುದೀನಾ ಎಲೆಗಳನ್ನು ಹಾಕಿ ರುಬ್ಬಿಕೊಂಡು ಹೊರತೆಗೆಯಿರಿ. ಮೇಲೆ ಹೇಳಿದ ಯಾವುದೇ ಪದಾರ್ಥಗಳು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಹಿಟ್ಟಿನಂತಾಗಬಾರದು. ಅಂತಿಮವಾಗಿ ಎಲ್ಲಾ ಪದಾರ್ಥಗಳನ್ನು ಕೈಯಲ್ಲಿ ಅಥವಾ ಸೌಟಿನಲ್ಲಿ ಚೆನ್ನಾಗಿ ಕಲಸಿಡಬೇಕು. ಸ್ವಲ್ಪ ಬಾಯಿಗೆ ಹಾಕಿಕೊಂಡು ಉಪ್ಪು ಖಾರಾ ಪರೀಕ್ಷೆ ಮಾಡಿ. ಅಗತ್ಯ ಎನಿಸಿದರೆ ಉಪ್ಪು ಅಥವಾ ಬೆಲ್ಲ ಸೇರಿಸಿ ಮತ್ತೆ ಪುಡಿಮಾಡಿ ಬೆರೆಸಿರಿ.
ನಾನಾ ಬಗೆಯ ಸೊಪ್ಪಿನ ಎಲೆಗಳನ್ನು ಬಳಸಿ ಇದೇ ವಿಧಾನ ಅನುಸರಿಸಿ ಚಟ್ನಿಪುಡಿ ಮಾಡಬಹುದು. ಸಾಮಾನ್ಯವಾಗಿ ಕರಿಬೇವಿನ ಚಟ್ನಿಪುಡಿಯನ್ನು ಬಹಳಷ್ಟು ಜನ ಮಾಡುತ್ತಾರೆ. ನೀವು ಪುದೀನ ಅಥವಾ ಒಣಗಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಾಡಿಕೊಳ್ಳಬಹುದು.



Click it and Unblock the Notifications
