Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಯಮ್ಮೀ... ಯಮ್ಮೀ... ಚಿಕನ್ ಚಾಪ್ಸ್ ರೆಸಿಪಿ
ಚಿಕನ್ ಚಾಪ್ಸ್ ನೋಡುವಾಗಲೇ ಬಾಯಲ್ಲಿ ನೀರೂರುತ್ತೆ ಅಲ್ವಾ? ರೆಸ್ಟೋರೆಂಟ್ಗೆ ಹೋಗಿ ತಿಂದರೆ ಒಂದು ನಾಲ್ಕು ಪೀಸ್ಗೆ ನೀವು ನೂರು-ಇನ್ನೂರು ಕೊಡಬೇಕಾಗುತ್ತೆ.

ಆದರೆ ಮನೆಯಲ್ಲಿಯೇ ಮಾಡುವುದಾದರೆ 200 ರುಪಾಯಿ ಸಾಮಗ್ರಿ ಇದ್ದರೆ ಸಾಕು ಮನೆಯಲ್ಲಿರುವ 4-5 ಜನ ಸವಿಯಲು ಚಿಕನ್ ಚಾಪ್ಸ್ ಮಾಡಬಹುದು. ಈ ಚಿಕನ್ ಚಾಪ್ಸ್ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: snacks
Serves: 4
-
ಬೇಕಾಗುವ ಸಾಮಗ್ರಿ
300 ಗ್ರಾಂ ಚಿಕನ್ (minced)
1 ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
2 ಹಸಿ ಮೆಣಸಿನಕಾಯಿ
1 ಮೊಟ್ಟೆ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
2 ಚಮಚ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ
1/4 ಚಮಚ ಅರಿಶಿಣ ಪುಡಿ
1/2 ಚಮಚ ಕೊತ್ತಂಬರಿ ಪುಡಿ
ರುಚಿಗೆ ತಕ್ಕ ಉಪ್ಪು
ಡೀಪ್ ಫ್ರೈಗೆ ಮಾಡಲು ಎಣ್ಣೆ
ಬ್ರೆಡ್ ಚೂರುಗಳು
-
ಚಿಕನ್ ಚಾಪ್ಸ್ ಮಾಡುವುದು ಹೇಗೆ?
* ಒಂದು ಬೌಲ್ನಲ್ಲಿ ಮಿನ್ಸ್ಡ್ ಚಿಕನ್ (ತುಂಬಾ ಚಿಕ್ಕ -ಚಿಕ್ಕ ತುಂಡು), ಈರುಳ್ಳಿ, ಹಸಿ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಟ್ಟೆ, ಕೊತ್ತಂಬರಿ-ಪುದೀನಾ ಸೊಪ್ಪು, ಸ್ವಲ್ಪ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು, ಸ್ವಲ್ಪ ನಿಂಬೆರಸ ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಈ ಮಿಶ್ರಣವನ್ನು 15 ನಿಮಿಷ ಫ್ರಿಡ್ಜ್ನಲ್ಲಿಡಿ
* ಈಗ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಅದೇ ಸಮಯದಲ್ಲಿ ಚಿಕನ್ ಚಾಪ್ಸ್ ಮಿಶ್ರಣದಿಂದ ದೊಡ್ಡ-ದೊಡ್ಡ ನಿಂಬೆ ಹಣ್ಣಿನ ಗಾತ್ರದ ಉಂಡೆ ಕಟ್ಟಿ, ಅದನ್ನು ಕೈಯಲ್ಲಿಯೇ ರೋಲ್ ಮಾಡಿ.
* ನಂತರ ಬ್ರೆಡ್ ಚೂರುಗಳಲ್ಲಿ ಹೊರಳಾಡಿಸಿ ನಂತರ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ.
* ಈ ರೆಡಿಯಾದ ಬಿಸಿ-ಬಿಸಿ ಚಿಕನ್ ಚಾಪ್ಸ್ ಅನ್ನು ಟೊಮೆಟೊ ಸಾಸ್ ಅಥವಾ ಪುದೀನಾ ಚಟ್ನಿ ಅಥವಾ ಮಯೋನೈಸ್ ಜೊತೆ ಸವಿಯಿರಿ.
- ಇಲ್ಲಿ 300 ಗ್ರಾಂ ಚಿಕನ್ ಚಾಪ್ಸ್ಗೆ ಸಾಕಾಗುವಷ್ಟು ಸಾಮಗ್ರಿ ಹೇಳಿದ್ದೇವೆ, ನೀವು ಚೆನ್ನಾಗಿ ತಿನ್ನಬೇಕೆಂದರೆ ಅರ್ಧ ಕೆಜಿಯಲ್ಲಿ ಮಾಡಿರೆ ಸಾಕಾಗುವುದು
- Calories: - 138cal
- Fat: - 7g
- Protein: - 17g
- Carbs: - 3g



Click it and Unblock the Notifications
