Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಬೆಳಗಿನ ಉಪಹಾರಕ್ಕೆ ಬಟಾಣಿ ಪಲಾವ್
ಭಾರತೀಯ ತಿಂಡಿ ಮತ್ತು ಊಟದಲ್ಲಿ ಅನ್ನವನ್ನು ಮುಖ್ಯವಾಗಿ ಬಳಸುವುದನ್ನು ಕಾಣಬಹುದು. ಹಲವು ಅನ್ನದಿಂದ ಮಾಡಬಹುದಾದ ಅಡುಗೆಗಳನ್ನು ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಿಕೊಂಡಿರುವುದನ್ನು ಕಾಣಬಹುದು. ಅನ್ನದ ಬೇರೆ ಬೇರೆ ರೀತಿಯ ಬಾತ್ ಗಳನ್ನು ಮತ್ತು ಪಲಾವ್ ಗಳನ್ನು ಮಾಡುತ್ತಾರೆ.
ಚಳಿಗಾಲದಲ್ಲಿ ಬಟಾಣಿಗಳು ಈಗಾಗಲೇ ಮಾರುಕಟ್ಟೆಗೆ ಬಂದಾಗಿದೆ. ಬಟಾಣಿಗಳಲ್ಲಿ ಹಲವು ಆರೋಗ್ಯಕಾರಿ ಗುಣಗಳಿವೆ. ಬಟಾಣಿ ಪಲಾವ್ ಅನ್ನು ಬೆಳಗಿನ ಉಪಹಾರಕ್ಕೆ ಮತ್ತು ಮಧ್ಯಾಹ್ನ ಊಟದ ಡಬ್ಬಿಗೆ ಕೂಡ ಹಾಕಿಕೊಳ್ಳಬಹುದು. ಇಂದು ನಾವು ಈ ಬಟಾಣಿ ಪಲಾವ್ ಮಾಡುವ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

ಬೇಕಾಗುವ ಸಾಮಗ್ರಿಗಳು
1.ಬಾಸ್ಮತಿ ಅಕ್ಕಿ- 1 ಕಪ್
2. ಬಟಾಣಿ- 1/2 ಕಪ್
3. ಕ್ಯಾರೆಟ್- 1 (ತುರಿದುಕೊಳ್ಳಿ)
4. ಲವಂಗ- 2-3
5. ಬೇ ಲೀಫ್- 1
6. ಉಪ್ಪು ರುಚಿಗೆ ತಕ್ಕಷ್ಟು
7. ತುಪ್ಪ- 1 ಟೀಚಮಚ
ಮಾಡುವ ವಿಧಾನ
1. ಬಾಸ್ಮತಿ ಅಕ್ಕಿಯನ್ನು ತೊಳೆದು ನೀರಿನಲ್ಲಿ 1 ಗಂಟೆ ಕಾಲ ನೆನಸಿಡಿ.
2. ತುಪ್ಪವನ್ನು ಕುಕ್ಕರಿನಲ್ಲಿ ಹಾಕಿ ಕರಗಿದ ನಂತರ ಬೇ ಎಲೆಗಳು, ಲವಂಗ ಸೇರಿಸಿ.
3. ಇದಕ್ಕೆ ನೆನೆಸಿಟ್ಟ ಅಕ್ಕಿ, ಕ್ಯಾರೆಟ್, ಬಟಾಣಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ 2 ನಿಮಿಷಗಳವರೆಗೆ ಮಂದ ಉರಿಯಲ್ಲಿಟ್ಟುಕೊಂಡು ಕಲಸುತ್ತಿರಿ.
4. ನಂತರ ಅದರ ಮೇಲೆ ಉಪ್ಪನ್ನು ಉದುರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ. ಅವುಗಳು ಬೇಯಲು ಎಷ್ಟು ಬೇಕೋ ಅಷ್ಟು ನೀರು ಹಾಕಿ.
5. ಕುಕ್ಕರಿನ ಮುಚ್ಚಳ ಮುಚ್ಚಿ ಎರಡು ಬಾರಿ ಕೂಗಿಸಿ.
ಆವಿಯಾರಿದ ನಂತರ ತೆಗೆದು ಬಿಸಿ ಪಲಾವ್ ಅನ್ನು ಕರಿ ಅಥವ ಸಲಾಡ್ ನೊಂದಿಗೆ ಸವಿಯಿರಿ.



Click it and Unblock the Notifications
