Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತುಪ್ಪ ಹಾಕಿಯೇ ಮಾಡಿ ವಿಶ್ವ ಶ್ರೇಷ್ಠ ಮಸಾಲೆ ದೋಸೆ

ಮಸಾಲೆ ದೋಸೆಯನ್ನು ಅಂಗಡಿಗಳಲ್ಲಿ ತಯಾರಿಸುವಾಗ ಯಾವುದಾದರೂ ಒಂದು ಅಡುಗೆ ಎಣ್ಣೆ ಅಥವಾ ಹಳೆಯ ಬೆಣ್ಣೆ ಹಾಕಿ ಮಸಾಲೆ ದೋಸೆಯೆಂದು ಕೊಡುತ್ತಾರೆ. ಇಂತಹ ರುಚಿ ನೋಡಿ ಮೋಸ ಹೋಗದಿರಿ. ಮಸಾಲೆ ದೋಸೆಯ ನಿಜವಾದ ಸವಿ ನೋಡಬೇಕೆಂದರೆ ಅದಕ್ಕೆ ಶುದ್ಧವಾದ ತುಪ್ಪ ಹಾಕಬೇಕು. ಅಂತಹ ಮಸಾಲೆ ದೋಸೆ ರುಚಿ ನೋಡಬೇಕೆಂದರೆ ಮನೆಯಲ್ಲಿಯೇ ತಯಾರಿಸುವುದು ಒಳ್ಳೆಯದು. ಬನ್ನಿ, ವಿಶ್ವ ಪ್ರಸಿದ್ಧವಾದ ಮಸಾಲೆ ದೋಸೆಯನ್ನು ರುಚಿಕರವಾಗಿ ಮಾಡುವ ವಿಧಾನ ತಿಳಿಯೋಣ:
ಬೇಕಾಗುವ ಸಾಮಾಗ್ರಿಗಳು:
* 4 ಕಪ್ ಅಕ್ಕಿ
* 1 ಕಪ್ ಉದ್ದಿನಬೇಳೆ
* ಹಿಡಿಯಷ್ಟು ಮೆಂತೆಕಾಳು
* ಎರಡು ಚಮಚದಷ್ಟು ಕಡಲೆಬೇಳೆ
* ಮುಷ್ಟಿಯಷ್ಟು ಗಟ್ಟಿ ಅವಲಕ್ಕಿ (ದೋಸೆ ಮೆತ್ತಗಾಗಲು)
* ಚಿಟಿಕೆಯಷ್ಟು ಸೋಡಾ
* ರುಚಿಗೆ ಸ್ವಲ್ಪ ಉಪ್ಪು
* ಶುದ್ಧವಾದ ತುಪ್ಪ
ತಯಾರಿಸುವ ವಿಧಾನ:
1. ಅಕ್ಕಿ, ಮೆಂತೆ ಕಾಳು ಉದ್ದಿನ ಬೇಳೆ, ಕಡಲೆ ಬೇಳೆ, ಅವಲಕ್ಕಿ ಇವುಗಳನ್ನು 6 ತಾಸು ನೀರಿನಲ್ಲಿ ನೆನೆಸಿಡಬೇಕು. ಅವಲಕ್ಕಿಯನ್ನು ಬೇರೆ ಬಟ್ಟಲಿನಲ್ಲಿ ನೆನೆಸಿಡಿ.
2. ನಂತರ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ನೆನೆಸಿದ ಅವಲಕ್ಕಿ ಹಾಕಿ ರಾತ್ರಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ, ಚಿಟಿಕೆಯಷ್ಟು ಸೋಡಾ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಒಂದು ಪಾತ್ರೆಯಲ್ಲಿ ಹಾಕಬೇಕು, ಹಿಟ್ಟು ಹಾಕುವ ಪಾತ್ರೆ ಸ್ವಲ್ಪ ದೊಡ್ಡದಿರಲಿ, ಇಲ್ಲದಿದ್ದರೆ ಅದು ಉಬ್ಬಿ , ಹಿಟ್ಟು ಪಾತ್ರೆಯಿಂದ ಹೊರಚೆಲ್ಲುವುದು.
3. ಮರುದಿನ ಬೆಳಗ್ಗೆ ದೋಸೆ ಉಯ್ಯುವ ಮುನ್ನ ಸೌಟ್ ನಿಂದ ತಿರುಗಿಸಿ , ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಬಹುದು.
4. ನಂತರ ದೋಸೆ ಕಾವಲಿಯನ್ನು ಬಿಸಿ ಮಾಡಿ ಅದರ ಮೇಲೆ ತುಪ್ಪ ಸವರಿ ದೋಸೆ ಹಿಟ್ಟು ಹುಯ್ದು ಒಂದು ಬದಿ ಕೆಂಪಗಾದ ಮೇಲೆ ಅದರೊಳಗೆ ಆಲೂಗಡ್ಡೆ ಪಲ್ಯವನ್ನು ಜೋಪಾನವಾಗಿ ಸುರುಳಿ ಸುತ್ತಿ ಇಟ್ಟರೆ ಮಸಾಲೆ ದೋಸೆ ತಯಾರು. ಪಕ್ಕದಲ್ಲಿ ಕೊಬ್ಬರಿ ಚಟ್ನಿ, ಒಂದು ಬಟ್ಟಲಲ್ಲಿ ಬಿಸಿಬಿಸಿ ಸಾಂಬಾರು, ಜೊತೆಗಿಷ್ಟು ಬೆಣ್ಣೆ ಇದ್ದುಬಿಟ್ಟರೆ ಇದರ ರುಚಿ ಅಮೋಘವಾಗಿರುತ್ತದೆ.



Click it and Unblock the Notifications
