For Quick Alerts
ALLOW NOTIFICATIONS  
For Daily Alerts

ಯಮ್ಮಿ ಗೋಧಿ ರವೆ ಉಪ್ಮಾ ರೆಸಿಪಿ!

|

ತೂಕ ಇಳಿಸುವುದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಪದಾರ್ಥಗಳನ್ನು ನಾವು ಬಳಸುತ್ತೇವೆ. ಇಂದಿನ ಯವ ಜನಾಂಗವಂತೂ ಹಲವಾರು ವಿಧಧ ಆಹಾರಗಳನ್ನು ಸೇವಿಸಿ ಡಯೆಟ್ ಮಂತ್ರವನ್ನು ಜಪಿಸುತ್ತಿರುತ್ತಾರೆ. ನಿಮ್ಮ ಡಯೆಡ್ ಯೋಜನೆಯನ್ನು ಸರಳ ಮತ್ತು ಆರೋಗ್ಯಕರವನ್ನಾಗಿಸಲು ನಾವಿಲ್ಲಿ ಒಂದು ರೆಸಿಪಿಯನ್ನು ನೀಡುತ್ತಿದ್ದೇವೆ.

ನಿಮಗೆಲ್ಲರಿಗೂ ತಿಳಿದಂತೆ ಹೆಚ್ಚಾಗಿ ಉಪ್ಮಾವನ್ನು ರವೆಯಿಂದ ಮಾಡುತ್ತೇವೆ. ಆದರೆ ಈ ಲೇಖನದಲ್ಲಿ ನಾವಿಂದು ಗೋಧಿ ರವೆ ಬೆರೆತ ಉಪ್ಮಾ ತಯಾರಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ವೇಗವಾಗಿ ತೂಕ ಇಳಿಸಲು ಈ ಎರಡೂ ಅಂಶಗಳು ಸಹಕಾರಿ. ಅಧಿಕ ತೂಕವನ್ನು ಇಳಿಸಲೇಬೇಕೆಂಬ ಪಣ ತೊಟ್ಟವರು ಈ ಆರೋಗ್ಯಕಾರಿ ಗೋಧಿ ರವಾ ಉಪ್ಮಾವನ್ನು ನಿಮ್ಮ ಬೆಳಗ್ಗಿನ ತಿಂಡಿಯನ್ನಾಗಿಸಿ.

ಈ ಉಪ್ಮಾ ತಯಾರಿಯಲ್ಲಿ ಬಳಸಲಾಗುವ ಸಾಮಾಗ್ರಿಗಳು ನಿಮ್ಮ ತೂಕವನ್ನು ಏರಿಸದೇ ವ್ಯವಸ್ಥಿತವಾಗಿರಿಸುತ್ತದೆ. ತೂಕ ಹೆಚ್ಚಾಗುತ್ತದೆಂಬ ಭಯವನ್ನು ದೂರಮಾಡುವ ಈ ಸರಳ ರೆಸಿಪಿ ತುಂಬಾ ರುಚಿಕರ ಮತ್ತು ಆಹ್ಲಾದಕರ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಾಲಿಫ್ಲವರ್ ಪಲಾವ್ ರೆಸಿಪಿ

ಬನ್ನಿ ಹಾಗಿದ್ದರೆ ಗೋಧಿ ರವೆ ಉಪ್ಮಾವನ್ನು ಹೇಗೆ ತಯಾರಿಸಬಹುದೆಂಬುನ್ನು ಮುಂದೆ ಓದಿ:

Wheat/ Godhuma Rava Upma Recipe

ಪ್ರಮಾಣ: 4
ಸಿದ್ಧತೆಯ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು
.ಗೋಧಿ ರವೆ - 1 ಕಪ್
.ಈರುಳ್ಳಿ - 1 (ಕತ್ತರಿಸಿದ್ದು)
.ಟೊಮೇಟೋ - 1 (ಕತ್ತರಿಸಿದ್ದು)
.ನೀರು - 2 ಕಪ್‌ಗಳು
.ಮಿಂಟ್ ಎಲೆಗಳು - ಒಂದು ಗೊಂಚಲು (ಆಯ್ಕೆಯ)
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - 2 ಸ್ಪೂನ್
.ಸಾಸಿವೆ - 1 ಸ್ಪೂನ್
.ಉದ್ದಿನ ಬೇಳೆ - 1 ಸ್ಪೂನ್
.ಹಸಿಮೆಣಸು - 1 (ಕತ್ತರಿಸಿದ್ದು)
.ಕರಿಬೇವಿನೆಲೆ - ಮುಷ್ಟಿಯಷ್ಟು
.ಇಂಗು - 1/4 ಸ್ಪೂನ್

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಯಾದ ವೆಜಿಟೇಬಲ್ ಚೀಸ್ ಸ್ಯಾಂಡ್‌ವಿಚ್!

ಮಾಡುವ ವಿಧಾನ:
1. ಪ್ರಶ್ಶರ್ ಕುಕ್ಕರ್‌ನಲ್ಲಿ, ಸಣ್ಣ ಉರಿಯಲ್ಲಿ, ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಕುಕ್ಕರ್‌ಗೆ ಸಾಸಿವೆ, ಉದ್ದಿನ ಬೇಳೆ, ಹಸಿಮೆಣಸು, ಕರಿಬೇವಿನೆಲೆ ಮತ್ತು ಇಂಗು ಸೇರಿಸಿ. ಈ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ. ಮತ್ತು 5 ನಿಮಿಷದವರೆಗೆ ಅದು ಬೇಯಲಿ.

2.ಸಾಮಾಗ್ರಿಗಳನ್ನು ಚೆನ್ನಾಗಿ ಹುರಿದ ನಂತರ, ಕುಕ್ಕರ್‌ಗೆ ಈರುಳ್ಳಿ ಹಾಕಿ ಮತ್ತು ಅದು ಚಿನ್ನ ಕಂದು ಮಿಶ್ರಿತ ಬಣ್ಣ ಬರುವವರೆಗೆ ಹುರಿಯಿರಿ.

3.ಇದೀಗ ಕುಕ್ಕರ್‌ಗೆ ಟೊಮೇಟೋ ಸೇರಿಸಿ ಮತ್ತು ಟೋಮೇಟೋ ಮೆತ್ತಗಾಗುವರಗೆ ಸೌಟಾಡಿಸಿ.

4.ಇದೀಗ ಕುಕ್ಕರ್‌ಗೆ ಮಿಂಟ್ ಎಲೆಗಳನ್ನು ಹಾಕಿ ಚಪ್ಪಟೆ ಸ್ಪೂನ್‌ನಲ್ಲಿ ಮಿಶ್ರ ಮಾಡಿ.

5. ಸಾಮಾಗ್ರಿಗಳನ್ನು ಚೆನ್ನಾಗಿ ಕಲಸುತ್ತಿರಿ. ಈಗ ಕುಕ್ಕರ್‌ಗೆ ನೀರು ಹಾಕಿ. ಮಂದಗತಿಯಲ್ಲಿ ನೀರು ಕುದಿಯುವವರೆಗೆ ಕಾಯಿರಿ. ಉಪ್ಪು ಬೆರೆಸಿ.

6.ನೀರು ಕುದಿಯುತ್ತಿದ್ದಂತೆ, ಗೋಧಿ ರವೆಯನ್ನು ಕುಕ್ಕರ್‌ಗೆ ಸೇರಿಸಿ ಮತ್ತು ಸಣ್ಣ ಉರಿಯಲ್ಲಿ ವಿಶಲ್ ಬರುವಂತೆ ಸಾಮಾಗ್ರಿಗಳು ಬೇಯಲಿ. ಆವಿ ತಣ್ಣಗಾದನಂತರ, ತ್ವರಿತವಾಗಿ ಕಲಸಿ.

ಗೋಧಿ ರವೆ ಉಪ್ಮಾ ಸವಿಯಲು ಸಿದ್ಧವಾಗಿದೆ. ತುಪ್ಪ ಅಥವಾ ಸಕ್ಕರೆಯೊಂದಿಗೆ ಈ ಗೋಧಿ ರವೆ ಉಪ್ಮಾವನ್ನು ನಿಮಗೆ ಸವಿಯಬಹುದು.

English summary

Wheat/ Godhuma Rava Upma Recipe

As we know, upma was mainly made out of sooji, but today since the world is running after ingredients which contains little or no calories, wheat and rava seems to do the trick to keep one fit and loose those pounds in a hurry.
Story first published: Wednesday, March 19, 2014, 14:05 [IST]
X
Desktop Bottom Promotion