Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನೀರು ದೋಸೆಯನ್ನು ಚಿಕನ್ ಸುಕ್ಕಾ ಜೊತೆ ಸವಿಯಿರಿ!
ಸಾಮಾನ್ಯವಾಗಿ ಕರ್ನಾಟಕದ ಕರಾವಳಿಯಲ್ಲಿ ಹೆಚ್ಚು ಪ್ರಚಲಿತವಾಗಿರುವ ನೀರು ದೋಸೆಯು ಬರೀ ಅಕ್ಕಿಯಿಂದ ಮಾಡುವ ದೋಸೆಯಾಗಿದೆ. ಅದರಲ್ಲೂ ತುಳುವರು ಈ ದೋಸೆಯ ಫ್ಯಾನ್ ಎಂದೇ ಹೇಳಬಹುದು.
ಹಿಟ್ಟನ್ನು ತುಸು ನೀರಾಗಿ ಕಡೆದು ತೆಳ್ಳಗೆ ಕಾವಲಿಯಲ್ಲಿ ಹುಯ್ದು ಈ ದೋಸೆಯನ್ನು ತಯಾರಿಸುತ್ತಾರೆ. ಅದರಲ್ಲೂ ತುಳುವರು ಈ ದೋಸೆಯ ಫ್ಯಾನ್ ಎಂದೇ ಹೇಳಬಹುದು. ಹಿಟ್ಟನ್ನು ತುಸು ನೀರಾಗಿ ಕಡೆದು ತೆಳ್ಳಗೆ ಕಾವಲಿಯಲ್ಲಿ ಹುಯ್ದು ಈ ದೋಸೆಯನ್ನು ತಯಾರಿಸುತ್ತಾರೆ.

ಈ ದೋಸೆಯನ್ನು ತೆಂಗಿನ ಹಾಲು, ಚಟ್ನಿ, ನಾನ್ ವೆಜ್ ಜೊತೆ ಸವಿಯಬಹುದು, ಅದರಲ್ಲೂ ಚಿಕನ್ ಸುಕ್ಕಾ ಜೊತೆ ಸವಿಯಲು ಇನ್ನೂ ರುಚಿಕರವಾಗಿರುತ್ತದೆ. ದೊಸೆಯಲ್ಲಿ ವಿವಿಧ ಪ್ರಕಾರದ ಪ್ರಯೋಗಗಳನ್ನು ಮಾಡುವವರನ್ನು ಹುರಿಸದುಂಬಿಸಲೆಂದೇ ಬೋಲ್ಡ್ ಸ್ಕೈ ಇಂದು ಬಿಸಿ ಬಿಸಿಯಾದ ನೀರು ದೋಸೆಗಳನ್ನು ನಿಮ್ಮ ಮುಂದಿಡುತ್ತಿದೆ. ಬನ್ನಿ ನೀವೂ ಈ ನೀರು ದೋಸೆಯನ್ನು ಪ್ರಯತ್ನಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೀವೂ ಪ್ರಯತ್ನಿಸಿ ಗರಿಗರಿಯಾದ 10 ವಿಧದ ದೋಸೆ
ಬೇಕಾಗುವ ಸಾಮಾಗ್ರಿಗಳು:
ಪ್ರಮಾಣ - 3
* ಅಕ್ಕಿ 2 ಕಪ್
* ತೆಂಗಿನಕಾಯಿ(ಸ್ವಲ್ಪ)
* ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
* ರಾತ್ರಿ ಹೊತ್ತು ಮಲಗುಚ ಮುಂಚೆ ಅಕ್ಕಿಯನ್ನು ನೆನೆ ಹಾಕಿಡಿ. ನಂತರ ಬೆಳಗ್ಗೆ ಅಕ್ಕಿಯನ್ನು ತೆಂಗಿನ ಕಾಯಿ ಜೊತೆ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ
* ತದನಂತರ ಅದನ್ನು ಪಾತ್ರೆಗೆ ಹಾಕಿ ಹಿಟ್ಟಿಗೆ ನೀರು ಹಾಗೂ ಉಪ್ಪು ಹಾಕಿ ಕಲೆಸಿ.
* ಈ ಹಿಟ್ಟು ನೀರು- ಸ್ವಲ್ಪ ನೀರಾಗಿರಲಿ.
* ನಂತರ ದೋಸೆ ಕಾವಲಿಯಿಟ್ಟು, ಸ್ವಲ್ಪ ಎಣ್ಣೆ ಹಚ್ಚಿ ಒಂದು ಸೌಟು ದೋಸೆ ಹಿಟ್ಟನ್ನು ಹುಯ್ಯಿರಿ.
* ತವಾವನ್ನು ಮತ್ತೊಂದು ಪಾತ್ರೆಯಿಂದ ಮುಚ್ಚಿ. ದೋಸೆ ಬೆಂದ ನಂತರ ತ್ರಕೋನ ಆಕಾರದಲ್ಲಿ ಮಡಚಿ ತಟ್ಟೆಗೆ ಹಾಕಿ.
* ಬಿಸಿ ಬಿಸಿಯಾದ ನೀರು ದೋಸೆ ಎರಡೇ ನಿಮಿಷದಲ್ಲಿ ರೆಡಿ.
ಇತರ ಟಿಪ್ಸ್:
* ಅಕ್ಕಿಯನ್ನು ರುಬ್ಬುವಾಗ ಸ್ವಲ್ಪ ಕೆಂಪು ಮೆಣಸು, ಕೊತ್ತೊಂಬರಿ, ಹಾಕಿದರೆ ದೋಸೆ ಇನ್ನಷ್ಟು ರುಚಿಕರವಾಗಿರುತ್ತದೆ.
* ಬಿಸಿ ಬಿಸಿ ನೀರು ದೋಸೆಯನ್ನು ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಲು ಇನ್ನೂ ರುಚಿಕರವಾಗಿರುತ್ತದೆ
* ದೋಸೆ ತುಂಬಾ ಮೃದುವಾಗಿರಲು ನೀರು ಹಾಕುವಾಗ ಬಿಸಿ ನೀರನ್ನು ಹಾಕಿ.
* ಹಿಟ್ಟು ಅರೆಯುವಾಗ ನೀರಿನ ಬದಲು ತೆಂಗಿನಕಾಯಿಯ ನೀರನ್ನು ಹಾಕಿದರೆ ದೋಸೆ ಹೆಚ್ಚು ರುಚಿಕರವಾಗಿರುತ್ತದೆ.



Click it and Unblock the Notifications
