Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬ್ರೇಕ್ ಫಾಸ್ಟ್‌ಗೆ ಬಿಸಿ ಬಿಸಿಯಾದ ದೋಸೆ ರೆಸಿಪಿ
ದೋಸೆ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ?, ಅದರಲ್ಲೂ ಕರ್ನಾಟಕದ ಬೆಳಗಿನ ಉಪಹಾರಕ್ಕೆ ದೋಸೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ. ದೋಸೆಗಳಲ್ಲಿಯೂ ಕೂಡ ಅನೇಕ ರೀತಿಯ ವೈವಿಧ್ಯತೆ ಇದ್ದು, ಅದು ತನ್ನದೇ ಆದ ವಿಶಿಷ್ಟ ರುಚಿಯನ್ನು ಹೊಂದಿದೆ.
ಹಾಗಾಗಿ ಬೋಲ್ಡ್ ಸ್ಕೈ ಇಂದು ನಿಮಗಾಗಿ ವಿಭಿನ್ನ ಶೈಲಿಯ ದೋಸೆಯನ್ನು ಪರಿಚಯಿಸುತ್ತಿದ್ದು, ಒಂದೊಂದು ಬಗೆಯ ದೋಸೆಯು ತನ್ನದೇ ಆದ ರುಚಿಯನ್ನು ಹೊಂದಿದ್ದು, ಇದರಲ್ಲಿ ನೀವು ಮಾಡಿರದ ದೋಸೆ ಇದ್ದರೆ ಅದನ್ನು ಟ್ರೈ ಮಾಡಿ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ:
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪೆಸರಟ್ಟು ದೋಸೆ ಆಂಧ್ರ ಸ್ಪೆಷಲ್

ರಾಗಿ ದೋಸೆ:
ಅರೆ, ಇದೇನಿದು? ರಾಗಿ ಜ್ಯೂಸ್, ರಾಗಿ ರೊಟ್ಟಿ, ಕೇಳಿದ್ದೇವೆ ಆದರೆ ರಾಗಿ ದೋಸೆ? ಹೌದು, ನೋಡುವುದಕ್ಕೆ ಮಸಾಲೆ ದೋಸೆನಂತಿರುವ ರಾಗಿ ದೋಸೆಯು ಆರೋಗ್ಯದ ಮೇಲೆ ಧನಾತ್ಮಕವಾದ ಪರಿಣಾಮ ಬೀರುತ್ತದೆ. ಬೆಳಗಿನ ಉಪಹಾರಕ್ಕೆ ಹೇಳಿ ಮಾಡಿಸಿದಂತಿರುವ ರಾಗಿ ದೋಸೆಯು, ನಿಮ್ಮ ನಾಲಿಗೆಯ ರುಚಿಯನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.!
ನೀರು ದೋಸೆ:
ಸಾಮಾನ್ಯವಾಗಿ ನೀರು ದೋಸೆ ಕರಾವಳಿ ಭಾಗದ ಜನರ ಅಚ್ಚು ಮೆಚ್ಚಿನ ದೋಸೆಯಾಗಿದೆ. ದೋಸೆ ಹಿಟ್ಟನ್ನು ತೆಳ್ಳಗೆ ಮಾಡಿ ಈ ದೋಸೆಯನ್ನು ತಯಾರಿಸಲಾಗುತ್ತದೆ. ಬಿಸಿ ಬಿಸಿಯಾದ ಈ ದೋಸೆಯನ್ನು ಹಸಿ ಮೆಣಸು ಹಾಗೂ ತೆಂಗಿನ ಕಾಯಿಯ ಚಡ್ನಿ, ಅಥವಾ ಚಿಕನ್ ಸುಕ್ಕಾ ಜೊತೆ ಸವಿಯಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೆಳ್ಳಗೆ-ಬೆಳ್ಳಗಿನ ನೀರು ದೋಸೆ
ರವೆ ದೋಸೆ:
ದಿನಾ ಒಂದೇ ರೀತಿಯ ದೋಸೆ ತಿಂದು ನಿಮಗೆ ಬೋರ್ ಎನಿಸಿರಬೇಕು, ಹಾಗಾಗಿ ನಿಮ್ಮ ಬೆಳಗಿನ ಬ್ರೇಕ್ ಫಾಸ್ಟ್ ಸ್ವಲ್ಪ ವಿಭಿನ್ನವಾದ ಡಿಶ್‌ನೊಂದಿಗೆ ಮುಂದುವರಿಸಲು ಬಯಸುವಿರಾದರೆ ರವೆ ದೋಯನ್ನು ಒಮ್ಮೆ ಟ್ರೈ ಮಾಡಿ. ದೇಹದ ಕ್ಯಾಲೊರಿಯನ್ನು ಕಡಿಮೆಗೊಳಿಸುವ ಹಾಗೂ, ಹೃದಯದ ಸ್ವಾಸ್ಥ್ಯಕ್ಕೂ ರಾಮಬಾಣವಾಗಿರುವ ಈ ದೋಸೆಯನ್ನು ಮನೆಯಲ್ಲೇ ಪ್ರಯತ್ನಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಉಷ್ಣ ದೇಹಿಗಳಿಗೆ ಹಿತಕರವಾದ ರಾಗಿ ದೋಸೆ
ಮಸಾಲೆ ದೋಸೆ:
ಮಸಾಲೆ ದೋಸೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ದೋಸೆ ಕಾವಲಿಯನ್ನು ಬಿಸಿ ಮಾಡಿ ಅದರ ಮೇಲೆ ತುಪ್ಪ ಸವರಿ ದೋಸೆ ಹಿಟ್ಟು ಹುಯ್ದು ಒಂದು ಬದಿ ಕೆಂಪಗಾದ ಮೇಲೆ ಅದರೊಳಗೆ ಆಲೂಗಡ್ಡೆ ಪಲ್ಯವನ್ನು ಜೋಪಾನವಾಗಿ ಸುರುಳಿ ಸುತ್ತಿ ಇಟ್ಟರೆ ಮಸಾಲೆ ದೋಸೆ ತಯಾರು. ಪಕ್ಕದಲ್ಲಿ ಕೊಬ್ಬರಿ ಚಟ್ನಿ, ಒಂದು ಬಟ್ಟಲಲ್ಲಿ ಬಿಸಿಬಿಸಿ ಸಾಂಬಾರು, ಜೊತೆಗಿಷ್ಟು ಬೆಣ್ಣೆ ಇದ್ದುಬಿಟ್ಟರೆ ಇದರ ರುಚಿ ಅಮೋಘವಾಗಿರುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತುಪ್ಪ ಹಾಕಿಯೇ ಮಾಡಿ ವಿಶ್ವ ಶ್ರೇಷ್ಠ ಮಸಾಲೆ ದೋಸೆ



Click it and Unblock the Notifications
