Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬ್ರಹ್ಮಚಾರಿಗಳಿಗೆ ನೂಡಲ್ಸ್ ಸ್ಪೆಷಲ್
ದಿನ ಬೆಳಗಾದರೆ ಏನಪ್ಪ ತಿಂಡಿ ಮಾಡೋದು ಅಂತ ತಲೆಬಿಸಿಯಾಗುತ್ತೆ ಅಲ್ವಾ? ಈವತ್ತು ಸ್ವಲ್ಪ ಸ್ಪೆಷಲ್ ಆಗಿರೋ ತಿಂಡಿ ಟ್ರೈ ಮಾಡಲು ರೆಡಿಯಾಗಿ. ನಿಮಗೆ ನೂಡಲ್ಸ್ ಇಷ್ಟ ಅನ್ನೋದಾದ್ರೆ ಖಂಡಿತವಾಗಿ ಈ ತಿಂಡಿ ಇಷ್ಟವಾಗುತ್ತೆ.
ಇದು ಮನೆಯಲ್ಲಿ ಒಬ್ಬರೇ ಇರುವವರು ಸುಲಭವಾಗಿ ಮಾಡಿಕೊಳ್ಳಬಹುದಾದ ತಿಂಡಿ. ಈ ಬಿಸಿ ಬಿಸಿಯಾದ ಸಿಹಿ ಮಿಶ್ರಿತ ತಿಂಡಿ ನಿಮ್ಮ ನಾಲಿಗೆಯಲ್ಲಿ ನೀರೂರಿಸುತ್ತೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ಹಾಗಿದ್ದರೆ ತಡಯಾಕೆ ಪ್ರಯತ್ನಸಿ.

ಬೇಕಾದ ಸಾಮಗ್ರಿಗಳು
1. ನೂಡಲ್ಸ್- 500ಗ್ರಾಂ
2. ಈರುಳ್ಳಿ- 1 (ಹೆಚ್ಚಿಕೊಳ್ಳಿ)
3. ಟೊಮೊಟೊ- 1 (ಹೆಚ್ಚಿಕೊಳ್ಳಿ)
4. ಸಕ್ಕರೆ- 1/2 ಚಮಚ
5. ಬಟಾಣಿ ಕಾಳುಗಳು- 2 ಟೀಚಮಚ
6. ಕ್ಯಾರೆಟ್ಸ್- 1 (ತುರಿದುಕೊಳ್ಳಿ)
7. ಸೊಯಾ ಸಾಸ್- 1 ಟೀಚಮಚ
8. ನಿಂಬೆರಸ- 1/2 ಟೀಚಮಚ
9. ನೀರು - 1 ಕಪ್
10. ಹುರಿಯಲು ಎಣ್ಣೆ
ಮಾಡುವ ವಿಧಾನ
ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಟೊಮೊಟೊ ಸೇರಿಸಿ ಮಂದ ಉರಿಯಲ್ಲಿ ಇವೆಲ್ಲ ಚೆನ್ನಾಗಿ ಬೇಯುವವರೆಗೆ ಹುರಿಯಿರಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ 5 ನಿಮಿಷಗಳವರೆಗೆ ಕುದಿಸಿ. ನೀರು ಕುದಿ ಬಂದಾಗ ಅದಕ್ಕೆ ಬಟಾಣಿ ಮತ್ತು ಕ್ಯಾರೆಟ್ ಸೇರಿಸಿ 5 ನಿಮಿಷಗಳವರೆಗೆ ಬೇಯಲು ಬಿಡಿ. ಈಗ ನ್ಯೂಡಲ್ಸ್ ಹಾಕಿ ಇನ್ನೂ ಸ್ವಲ್ಪ ನೀರು ಹಾಕಿ. ನ್ಯೂಡಲ್ಸ್ ಬೆಂದ ನಂತರ ಸ್ವಲ್ಪ ಸಕ್ಕರೆ ಬೆರೆಸಿ ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ ಬಿಡಿ. 6 ನಿಮಿಷದ ನಂತರ ಸೋಯಾ ಸಾಸ್ ಮತ್ತು ನಿಂಬೆ ರಸ ಅದಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿ.
ನೂಡಲ್ಸ್ ಮೃದುವಾಗಿ ಪರಿಮಳ ಬೀರುತ್ತಿದ್ದರೆ ನಿಮ್ಮ ತಿಂಡಿ ಸಿದ್ಧವಾಯಿತೆಂದು ಅರ್ಥ. ನಿಮ್ಮ ಬಿಸಿ ಬಿಸಿಯಾದ ಸಿಹಿಯಾದ ನೂಡಲ್ಸ್ ಅನ್ನು ಟೊಮೊಟೊ ಅಥವ ಬೆಳ್ಳುಳ್ಳಿ ಸಾಸ್ ನೊಂದಿಗೆ ಸವಿಯಿರಿ.



Click it and Unblock the Notifications
