Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಸ್ಪೌರ್ಟ್ಸ ಮಸಾಲ ಆರೋಗ್ಯಕರ ಬೆಳಗಿನ ಉಪಹಾರ
ಬೆಳಗಿನ ಉಪಹಾರ ದಿನದಾರಂಭದಲ್ಲಿ ಬಹಳ ಮುಖ್ಯವಾದುದು. ಇದನ್ನು ತಪ್ಪಿಸುವುದು ಒಳ್ಳೆಯದಲ್ಲ. ಬಹಳಷ್ಟು ಕೆಲಸಕ್ಕೆ ಮಹಿಳೆಯರು ಸಮಯದ ಅಭಾವದಿಂದಾಗಿ ಇದನ್ನು ತಪ್ಪಿಸುತ್ತಾರೆ. ಯಾಕೆ ಹೀಗೆ ಮಾಡಬೇಕು. ಸುಲಭವಾಗಿ ತಯಾರಿಸಬಹುದಾದ ಹಲವು ಬೆಳಗಿನ ಉಪಹಾರಗಳಿವೆ.
ಸ್ಪೌರ್ಟ್ಸ್ ಮಸಾಲ ಇಂತಹದೊಂದು ತಿಂಡಿ. ನಮಗೆಲ್ಲ ತಿಳಿದಿರುವಂತೆ ಮೊಳಕೆ ಕಟ್ಟಿದ ಕಾಳುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಲಭಗೊಳಿಸುತ್ತದೆ. ಆದ್ದರಿಂದ ಇದನ್ನು ಬೆಳಗಿನ ಹೊತ್ತು ತಿನ್ನುವುದು ಒಳ್ಳೆಯದು. ಈಗ ಮಾರುಕಟ್ಟೆಯಲ್ಲಿ ಮೊಳಕೆ ಕಟ್ಟಿದ ಕಾಳುಗಳು ಸಿಗುವುದರಿಂದ ಇದನ್ನು ಮಾಡುವುದು ಇನ್ನೂ ಸುಲಭ. ಇದನ್ನು ಕೇವಲ 15 ನಿಮಿಷಗಳಲ್ಲಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು
1. ಕಾಳುಗಳು- 1 ಕಪ್
2. ಈರುಳ್ಳಿ- 1/2 (ಸಣ್ಣದಾಗಿ ಹೆಚ್ಚಿಕೊಳ್ಳಿ)
3. ಹಸಿಮೆಣಸಿನಕಾಯಿ- 1 (ಕತ್ತರಿಸಿಕೊಳ್ಳಿ)
4. ಟೊಮೊಟೊ- 1/2 (ಕತ್ತರಿಸಿಕೊಳ್ಳಿ)
5. ನಿಂಬೆ ರಸ- 2 ಟೀಚಮಚ
6. ಚಾಟ್ ಮಸಾಲ- 1 ಟೀಚಮಚ
7. ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
1. ಕಾಳುಗಳನ್ನು ಬಿಸಿನೀರಿನಲ್ಲಿ ತೊಳೆದುಕೊಳ್ಳಿ.
2. ಇದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಟೊಮೊಟೊ ಸೇರಿಸಿ ಚೆನ್ನಾಗಿ ಕಲಸಿ.
3. ನಂತರ ಉಪ್ಪು, ಚಾಟ್ ಮಸಾಲ ಹಾಕಿ ಚೆನ್ನಾಗಿ ಮಿಶ್ರ ಮಾಡಿ.
4. ಕೊನೆಯಲ್ಲಿ ನಿಂಬೆ ರಸವನ್ನು ಸೇರಿಸಿ. ನಿಂಬೆ ರಸವನ್ನು ಹಾಕಿದ ನಂತರ ಹೆಚ್ಚು ಹೊತ್ತು ಇಡಬೇಡಿ. ಏಕೆಂದರೆ ಉಪ್ಪು ಮತ್ತು ನಿಂಬೆ ರಸ ಬೆರೆತು ನೀರು ಬಿಟ್ಟುಕೊಳ್ಳುತ್ತದೆ.
ಆರೋಗ್ಯಕ್ಕೆ ಬಹಳ ಒಳ್ಳೆಯದಾದ ಈ ಡಯೆಟ್ ಫುಡ್ ಈಗ ತಿನ್ನಲು ಸಿದ್ಧ.



Click it and Unblock the Notifications
