Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕಡಿಮೆ ಕ್ಯಾಲೋರಿಯ ರವೆ ವಾಂಗೀಬಾತ್!

ಬೇಕಾಗುವ ಸಾಮಾಗ್ರಿಗಳು:
ಸಣ್ಣ ರವೆ - 1 ಕಪ್
ದೊಡ್ಡ ರವೆ 1/2 ಕಪ್
ಬದನೆಕಾಯಿ 2
ಹಸಿಮೆಣಸಿನ ಕಾಯಿ 4
ಕರಿಬೇವಿನ ಎಲೆ
ಸಾಸಿವೆ 1 ಚಮಚ
ಗೋಡಂಬಿ 10-15
ವಾಂಗೀಬಾತ್ ಪುಡಿ 3-4 ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು 2 ಚಮಚ
ಎಣ್ಣೆ
ತುರಿದ ತೆಂಗಿನ ಕಾಯಿ 1/2 ಕಪ್
ನೀರು 3 ಕಪ್
ತಯಾರಿಸುವ ವಿಧಾನ:
1. ಬಾಣಲೆಯಲ್ಲಿ ಸಣ್ಣ ರವೆ ಮತ್ತು ದಪ್ಪ ರವೆ ಎರಡನ್ನೂ ಪ್ರತ್ಯೇಕವಾಗಿ ಹುರಿದು ಒಂದು ಪಾತ್ರೆಯಲ್ಲಿ ಹಾಕಿಡಬೇಕು. .
2. ಬೇರೊಂದು ಪಾತ್ರೆಯಲ್ಲಿ ನೀರು ಹಾಕಿ ನೀರನ್ನು ಚೆನ್ನಾಗಿ ಕುದಿಯಲು ಇಡಬೇಕು.
3. ಬದನೆಕಾಯಿಯನ್ನು ತೊಳೆದು ಕತ್ತರಿಸಿ ಒಂದು ಬದಿಯಲ್ಲಿ ಇಡಬೇಕು.
4. ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಸಾಸಿವೆಯನ್ನು ಹಾಕಬೇಕು, ಸಾಸಿವೆ ಚಟಾಪಟ ಶಬ್ದ ಬರುವಾಗ ಗೋಡಂಬಿ, ಹಸಿಮೆಣಸಿನ ಕಾಯಿ, ಕರಿಬೇವಿನ ಎಲೆ ಹಾಕಿ 2-3 ನಿಮಿಷ ಹುರಿದು ನಂತರ ಬದನೆಕಾಯಿ, ರುಚಿಗೆ ತಕ್ಕ ಉಪ್ಪು ಹಾಕಿ 10 ನಿಮಿಷದ ಕಾಲ ಹುರಿಯಬೇಕು. ಈ ಮಿಶ್ರಣವನ್ನು ಆಗಾಗ ಸೌಟ್ ನಿಂದ ತಿರುಗಿಸುತ್ತಾ ಇರಬೇಕು. ಬದನೆಕಾಯಿ ಬೆಂದ ನಂತರ ಅದಕ್ಕೆ ಹುರಿದ ರವೆ, ವಾಂಗೀಬಾತ್ ಪುಡಿ ಹಾಕಿ ಅಗತ್ಯಕ್ಕೆ ತಕ್ಕ ನಿರು ಹಾಕಿ ಚೆನ್ನಾಗಿ ತಿರುಗಿಸಿ ಬೇಯಿಸಬೇಕು. ಉಪ್ಪು ಸಾಲಾದಿದ್ದರೆ ಸ್ವಲ್ಪ ಉಪ್ಪು ಸೇರಿಸಬೇಕು.
5. ರವೆ ಬೆಂದ ನಂತರ ಅದಕ್ಕೆ ತುರಿದ ತೆಂಗಿನ ಕಾಯಿ ಚೆನ್ನಾಗಿ ತಿರುಗಿಸಿ 2 ನಿಮಿಷ ಕಾಲ ಬಿಸಿಮಾಡಬೇಕು.
6. ನಂತರ ಬೆಂದ ರವೆಯನ್ನು ಉರಿಯಿಂದ ತೆಗೆದು ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರವೆ ವಾಂಗೀಬಾತ್ ರೆಡಿ.



Click it and Unblock the Notifications
