Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರವೆಪೊಂಗಲ್ ಸುಲಭ ಮತ್ತು ಟೇಸ್ಟಿ
ತಮಿಳುನಾಡಿನ ಪೊಂಗಲ್ ರುಚಿ ನೋಡಿದ್ದೀರಿ ಅಲ್ವಾ? ಈವತ್ತು ನಿಮಗೆ ಪೊಂಗಲ್ ನ ಇನ್ನೊಂದು ಸ್ಪೆಷಲ್ ರವೆ ಪೊಂಗಲ್ ಬಗ್ಗೆ ತಿಳಿಸುತ್ತಿದ್ದೇವೆ. ಇದನ್ನು ಮಾಡಲು ಸುಲಭ ಮತ್ತು ರುಚಿ ಕೂಡ ಸೂಪರ್. ಬೆಳಗಿನ ಉಪಹಾರಕ್ಕೆ ರವೆ ಬಳಸಿ ಉಪ್ಪಿಟ್ಟು ಮಾಡುವ ಬದಲು ಈ ಹೊಸರುಚಿಯನ್ನು ಮನೆಮಂದಿಗೆ ಉಣಿಸಿ.

ಬೇಕಾಗುವ ಸಾಮಗ್ರಿಗಳು
1. ರವೆ - 1/2 ಕಪ್ ( ಹುರಿದಿಟ್ಟುಕೊಳ್ಳಿ)
2.ಹೆಸರುಕಾಳು- 1/2 ಕಪ್( ಬೇಯಿಸಿಕೊಳ್ಳಿ)
3. ತುಪ್ಪ- 2 ಟೀಚಮಚ
4. ಕರಿಮೆಣಸು - 1/4 ಟೀಚಮಚ
5. ಜೀರಿಗೆ- 1/4 ಚಮಚ
6. ಗೋಡಂಬಿ- ಸ್ವಲ್ಪ
7. ಕರಿಬೇವು- ಸ್ವಲ್ಪ
8. ಶುಂಠಿ- 1/4 ಟೀಚಮಚ (ತುರಿದುಕೊಳ್ಳಿ)
9. ನೀರು- 3 ಕಪ್
ಮಾಡುವ ವಿಧಾನ
ಮೊದಲಿಗೆ ಹೆಸರುಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ರವೆಯನ್ನು ಹುರಿದುಕೊಳ್ಳಿ. ನಂತರ ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಿಸಿ ಮೆಣಸು ಮತ್ತು ಗೋಡಂಬಿಯನ್ನು ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಜೀರಿಗೆ ಸೇರಿಸಿ. ಅದಕ್ಕೆ 3 ಕಪ್ ನೀರು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ. ನೀರು ಕುದಿ ಬಂದಾಗ ಅದಕ್ಕೆ ಹುರಿದಿಟ್ಟ ರವೆ ಸೇರಿಸಿ ಬೇಯಿಸಿ. ರವೆ ಬೇಯಲು ಆರಂಭವಾದ ತಕ್ಷಣ ಬೇಯಿಸಿಕೊಂಡ ಹೆಸರು ಬೇಳೆ ಸೇರಿಸಿ. ಇದನ್ನು ಒಂದು ಹದಕ್ಕೆ ಬರುವವರೆಗೆ ಕಲಸಿ. ಸಿದ್ಧವಾದ ನಂತರ ಅದಕ್ಕೆ ಕರಿಬೇವಿನ ಎಲೆ ಮತ್ತು ತುಪ್ಪವನ್ನು ಸೇರಿಸಬಹುದು.



Click it and Unblock the Notifications
