Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳಗಿನ ತಿಂಡಿಗೆ ರಾಜ್ಮಾ ಪೂರಿ
ಪೂರಿಯನ್ನು ಬೆಳಗಿನ ತಿಂಡಿಗೆ ಮಾಡುವುದು ಸಹಜ. ಈ ಪೂರಿಯನ್ನು ಒಂದೇ ಬಗೆಯಲ್ಲಿ ತಯಾರಿಸುವುದಕ್ಕಿಂತ ಸ್ವಲ್ಪ ಭಿನ್ನ ಸಾಮಾಗ್ರಿಗಳನ್ನು ಹಾಕಿದರೆ ಅನೇಕ ರುಚಿಯ ಪೂರಿಯನ್ನು ತಿನ್ನಬಹುದು. ಪೂರಿಯಲ್ಲಿ ಹೊಸ ರುಚಿ ಟೇಸ್ಟ್ ಮಾಡಬಯಸುವವರು ರಾಜ್ಮಾ ಹಾಕಿ ತಯಾರಿಸಿದ ಪೂರಿಯನ್ನು ಟ್ರೈ ಮಾಡಬಹುದು. ರಾಜ್ಮಾ ಪೂರಿ (ರಾಜ್ ಪೂರಿ) ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
ಮೈದಾ 1 ಕಪ್
ರಾಜ್ಮಾ 2 ಕಪ್(ಬೇಯಿಸಿದ್ದು)
ಗರಂ ಮಸಾಲ ಒಂದು ಚಮಚ
ಜೀರಿಗೆ 1 ಚಮಚ
ಸ್ವಲ್ಪ ಚಕ್ಕೆ ಮತ್ತು ಲವಂಗ
ಶುಂಠಿ ಪೇಸ್ಟ್ 1 ಚಮಚ
ಹಾಲು 2 ಚಮಚ
ತುಪ್ಪ 1 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
1. ಒಂದು ಪಾತ್ರೆಯಲ್ಲಿ ಮೈದಾ ತೆಗೆದುಕೊಂಡು ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಬೇಕು.
2. ಈಗ ರಾಜ್ಮಾ ಜೊತೆ ಚಕ್ಕೆ, ಲವಂಗ, ಜೀರಿಗೆ, ಗರಂ ಮಸಾಲ, ಶುಂಠಿ ಪೇಸ್ಟ್ ಹಾಕಿ ಗಟ್ಟಿಯಾಗಿ ಅರೆದು ಮೈದಾ ಹಿಟ್ಟಿನ ಜೊತೆ ಹಾಕಿ ಕಲೆಸಬೇಕು.
3. ಒಂದು ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಬೇಕು.
4. ನಂತರ ಈ ಹಿಟ್ಟಿನಿಂದ ಪೂರಿಗೆ ತಟ್ಟುವ ರೀತಿಯಲ್ಲಿ ತಟ್ಟಬೇಕು. ನಂತರ ಚೆನ್ನಾಗಿ ಕಾದ ಎಣ್ಣೆಗೆ ಪೂರಿಯನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರವಾಗ ತೆಗೆದರೆ ರಾಜ್ಮಾ ಪೂರಿ ರೆಡಿ.



Click it and Unblock the Notifications
