Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರುಚಿಕರವಾದ ರಾಜ್ಮಾ ಚಪಾತಿ ರೆಸಿಪಿ
ಚಪಾತಿಯನ್ನು ಬರೀ ಗೋಧಿ ಹಿಟ್ಟಿನಿಂದ ತಯಾರಿಸುವುದಕ್ಕಿಂತ ಅದರಲ್ಲಿ ತರಕಾರಿಗಳನ್ನು ಹಾಕಿ ಮಾಡಿದರೆ ಚಪಾತಿ ತಿನ್ನಲು ಮತ್ತಷ್ಟು ರುಚಿಯಾಗಿರುತ್ತದೆ. ಅಲ್ಲದೆ ಈ ಅಡುಗೆಯನ್ನು ಬ್ರೇಕ್ ಫಾಸ್ಟ್ ಗೆ ಮಾತ್ರವಲ್ಲ ಮಕ್ಕಳ ಲಂಚ್ ಬಾಕ್ಸಿಗೂ ಹಾಕಿ ಕಳುಹಿಸಿಬಹುದು.
ಮಕ್ಕಳು ಸಾಮಾನ್ಯವಾದ ಅಡುಗೆ ತಿನ್ನುವುದಕ್ಕಿಂತ ಸ್ವಲ್ಪ ವಿಭಿನ್ನವಾಗಿ ಮಾಡಿದ ಅಡುಗೆಯನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ. ಈ ಆಹಾರ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು:
* ರಾಜ್ಮಾ 1 ಕಪ್
* ಈರುಳ್ಳಿ 2
* ಟೊಮೆಟೊ ಪೇಸ್ಟ್ ಅರ್ಧ ಕಪ್
* ಹಸಿ ಮೆಣಸಿನಕಾಯಿ 3
* ಶುಂಠಿ ಪೇಸ್ಟ್ ಅರ್ಧ ಚಮಚ
* ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ
* ಖಾರದ ಪುಡಿ 1 ಚಮಚ
* ಅರಿಶಿಣ ಪುಡಿ ಅರ್ಧ ಚಮಚ
* ಜೀರಿಗೆ ಅರ್ಧ ಚಮಚ
* ರುಚಿಗೆ ತಕ್ಕ ಉಪ್ಪು
* ತುಪ್ಪ 2 ಚಮಚ
* ಎಣ್ಣೆ
ಚಪಾತಿಗೆ:
* ಗೋಧಿ ಹಿಟ್ಟು 2 ಕಪ್
* ರುಚಿಗೆ ತಕ್ಕ ಉಪ್ಪು
* ಎಣ್ಣೆ 2 ಚಮಚ
* ನೀರು 2 ಕಪ್
ತಯಾರಿಸುವ ವಿಧಾನ:
1. ಒಂದು ಬಟ್ಟಲಿನಲ್ಲಿ ಗೋಧಿಹಿಟ್ಟು, ರುಚಿಗೆ ತಕ್ಕ ಉಪ್ಪು ನೀರು ಮತ್ತು ಎಣ್ಣೆ ಹಾಕಿ ಚಪಾತಿಯ ಹದದಲ್ಲಿ ಕಲೆಸಿಡಬೇಕು.
2. ಈಗ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಬೇಕು. ಜೀರಿಗೆ ಶಬ್ದ ಮಾಡುವಾಗ ಕತ್ತರಿಸಿದ ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ನಂತರ ಹಸಿಮೆಣಸಿನಕಾಯಿ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಖಾರದ ಪುಡಿ, ಟೊಮೆಟೊ ಪೇಸ್ಟ್ ಹಾಕಿ ಕುದಿಸಬೇಕು, ನಂತರ ಅದರಲ್ಲಿ ಬೇಯಿಸಿದ ರಾಜ್ಮಾ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ತಣ್ಣಗಾಗಲು ಇಡಬೇಕು.
4. ನಂತರ ಚಪಾತಿಗೆ ತಟ್ಟಿ ಅದರ ಮೇಲೆ ಈ ರಾಜ್ಮಾ ಗ್ರೇವಿಯನ್ನು ಹಾಕಿ, ನಂತರ ಚಪಾತಿಯನ್ನು ಮಡಚಿ ಮತ್ತೊಮ್ಮೆ ಮೆಲ್ಲನೆ ಚಪಾತಿಗೆ ಲಟ್ಟಿಸಿ.
5. ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ತುಪ್ಪ ಸವರಿ ಅದರರಲ್ಲಿ ಈ ರಾಜ್ಮಾ ಚಪಾತಿಯನ್ನು ಬೇಯಿಸಿ. ಈಗ ರೆಡಿಯಾದ ರಾಜ್ಮಾ ಚಪಾತಿಯನ್ನು ಚಟ್ನಿ ಜೊತೆ ಸವಿಯಿರಿ.



Click it and Unblock the Notifications
