Latest Updates
-
ಛತ್ ಪೂಜೆ 2026: ದೀರ್ಘ ಉಪವಾಸದ ನಡುವೆಯೂ ಆರೋಗ್ಯವಾಗಿರಲು ಈ ಸರಳ ಫಿಟ್ನೆಸ್ ಟಿಪ್ಸ್ ಫಾಲೋ ಮಾಡಿ! -
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್ -
ಹಬ್ಬದ ಸಂಭ್ರಮದಲ್ಲಿ ಬೀದಿಬದಿ ಆಹಾರ ಸೇವಿಸುವ ಮುನ್ನ ಎಚ್ಚರ: ಆರೋಗ್ಯ ಸುರಕ್ಷತೆಗೆ ಇಲ್ಲಿದೆ 5 ಸರಳ ಸೂತ್ರಗಳು -
ಬಿಗ್ ಬಾಸ್ ಕನ್ನಡ 13: ಈ ವಾರ ಯಾರೂ ಎಲಿಮಿನೇಟ್ ಇಲ್ಲ! ಕಿಚ್ಚ ಸುದೀಪ್ ನೀಡಿದ ಅಚ್ಚರಿಯ ಟ್ವಿಸ್ಟ್ ಏನು? -
ದೀಪಾವಳಿ ನಂತರ ದೆಹಲಿಯಲ್ಲಿ ದಟ್ಟ ಹೊಗೆ: ಮಕ್ಕಳ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ!
ಮಕ್ಕಳು ಸರಿಯಾಗಿ ತಿನ್ನುತ್ತಿಲ್ಲ ಎಂಬ ಚಿಂತೆ ಬಿಡಿ!
ತುಂಬಾ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಇದರಿಂದ ಅವರ ಆರೋಗ್ಯ ಎಲ್ಲಿ ಹಾಳಾಗುತ್ತದೆಯೊ ಎಂಬ ಚಿಂತೆ ಪೋಷಕರನ್ನು ಕಾಡುತ್ತಿರುತ್ತದೆ. ಈ ಚಿಂತೆ ಹೋಗಲಾಡಿಸಲು ಸರಳ ಉಪಾಯವೆಂದರೆ ಅಧಿಕ ಪೋಷಕಾಂಶವಿರುವ ಆಹಾರ ಕೊಡುವುದು. ಆವಾಗ ಸ್ವಲ್ಪ ಆಹಾರ ತಿಂದರೂ ಅಧಿಕ ಪೋಷಕಾಂಶ ದೇಹವನ್ನು ಸೇರುತ್ತದೆ. ಅಂತಹ ಆಹಾರಗಳಲ್ಲಿ ಒಂದು ರಾಗಿ-ಅಕ್ಕಿ ದೋಸೆ. ಅದನ್ನು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* 1 ಕಪ್ ರಾಗಿ ಹಿಟ್ಟು
* 1 ಕಪ್ ಅಕ್ಕಿ ಹಿಟ್ಟು
* 1 ಕಪ್ ಉದ್ದಿನ ಬೇಳೆ
* ಒಂದು ಹಿಡಿಯಷ್ಟು ಅವಲಕ್ಕಿ ( 20 ನಿಮಿಷ ನೀರಿನಲ್ಲಿ ನೆನೆ ಹಾಕಿರಬೇಕು)
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ದೋಸೆ ಹಿಟ್ಟು:
1. ಉದ್ದಿನ ಬೇಳೆ ಮತ್ತು ಅವಲಕ್ಕಿ ಅರೆಯಬೇಕು.
2.ಒಂದು ಪಾತ್ರೆಯಲ್ಲಿ ಅಕ್ಕಿ ಮತ್ತು ರಾಗಿ ಹಿಟ್ಟು ಹಾಕಿ ಅದಕ್ಕೆ ನುಣ್ಣಗೆ ಅರೆದ ಉದ್ದಿನ ಬೇಳೆ, ಅಲವಕ್ಕಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ , ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಈ ಮಿಶ್ರಣ ತುಂಬಾ ಗಟ್ಟಿಯಾಗಲಿ ಅಥವಾ ತೆಳ್ಳಗಾಗಲಿ ಇರಬಾರದು.
3.ದೋಸೆ ಹಿಟ್ಟು ತಯಾರಾದ ನಂತರ ಪಾತ್ರೆಯ ಬಾಯಿ ಮುಚ್ಚಿ ಬೇಸಿಗೆಯಲ್ಲಿಯಾದರೆ 6-7 ಗಂಟೆ, ಚಳಿಗಾಲದಲ್ಲಿಯಾದರೆ 24 ಗಂಟೆ ಕಾಲ ಇಡಬೇಕು.
ಹೀಗೆ ಕಲೆಸಿಡುವ ಪಾತ್ರೆ ಸ್ವಲ್ಪ ದೊಡ್ಡದಿರಲಿ, ಇಲ್ಲದಿದ್ದರೆ ಹಿಟ್ಟು ಉಬ್ಬಿ ಚೆಲ್ಲಿ ಹೋಗುವುದು.
ದೋಸೆ:
ನಂತರ ಕಾವಲಿಯನ್ನು ಬಿಸಿ ಮಾಡು ಅದಕ್ಕೆ ಎಣ್ಣೆ ಹಾಕಿ ದೋಸೆ ಹುಯ್ಯಬೇಕು. ದೋಸೆ ಬೆಂದ ನಂತರ ಒಮ್ಮೆ ಮಗುಚಿ ಹಾಕಿ 20 ಸೆಕಂಡ್ ಬಿಸಿ ಮಾಡಿ ನಂತರ ತೆಗೆದರೆ ರುಚಿಕರವಾದ ರಾಗಿ, ಅಕ್ಕಿ ಹಿಟ್ಟಿನ ದೋಸೆ ರೆಡಿ.
ಇದನ್ನು ಸಬ್ಜಿ ಜೊತೆ ತಿನ್ನಲು ಕೊಟ್ಟರೆ ಮಕ್ಕಳಿಗೆ ಇಷ್ಟವಾಗುವುದು. ಇದನ್ನು ಚಟ್ನಿ ಜೊತೆ ಕೂಡ ತಿನ್ನಬಹುದು.



Click it and Unblock the Notifications
