Latest Updates
-
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ!
ಯಮ್ಮೀ ಬ್ರೇಕ್‌ಫಾಸ್ಟ್‌ಗಾಗಿ ಟೇಸ್ಟೀ ಆಲೂಗಡ್ಡೆ ದೋಸೆ
ಈ ಮುಂಜಾನೆ ನೀವು ವಿಶೇಷವಾಗಿರುವುದನ್ನು ಖಂಡಿತ ಟ್ರೈ ಮಾಡಲೇಬೇಕು. ದಿನವೂ ಧಾವಂತದಲ್ಲಿ ಒಂದೇ ಬಗೆಯ ಬ್ರೇಕ್‌ಫಾಸ್ಟ್ ತಯಾರಿಸಿ ದಣಿದಿದ್ದೀರಾ? ನಿಮ್ಮ ನಾಲಗೆಯ ರುಚಿಯನ್ನು ಇನ್ನಷ್ಟು ಹೆಚ್ಚಿಸುವ ಈ ಆಲೂಗಡ್ಡೆ ದೋಸೆ ಖಂಡಿತ ನಿಮಗೆ ಇಷ್ಟವಾಗುತ್ತದೆ.
ಟೊಮೇಟೊ ಸಾಸ್‌ನೊಂದಿಗೆ ಸವಿಯಬಹುದಾದ ಈ ಆಲೂಗಡ್ಡೆ ದೋಸೆ ಸಖತ್ ಟೇಸ್ಟೀ ಮತ್ತು ಆರೋಗ್ಯಕಾರಿಯಾಗಿದೆ. ನಿಮ್ಮ ಹಸಿವನ್ನು ಇಂಗಿಸಿ ನಾಲಗೆಯಲ್ಲಿ ಆ ರುಚಿ ಇನ್ನೂ ಇರುವಂತೆ ಈ ದೋಸೆ ಮಾಡುತ್ತದೆ. ಸುಲಭವಾಗಿ ತಯಾರಿಸಬಹುದಾದ ಈ ದೋಸೆ ನಿಮ್ಮ ನಾಲಿಗೆಯ ರುಚಿಯನ್ನು ತಣಿಸುವುದರಲ್ಲಿ ಸಂಶಯವೇ ಇಲ್ಲ.
ಹಾಗಿದ್ದರೆ ಈ ದೋಸೆ ರೆಸಿಪಿಯನ್ನು ತಿಳಿದುಕೊಳ್ಳಬೇಕೆಂಬ ತುಡಿತ ನಿಮ್ಮಲ್ಲಿ ಹೆಚ್ಚುತ್ತಿದೆಯೇ? ಹಾಗಿದ್ದರೆ ಇಲ್ಲಿ ನಾವು ನೀಡಿರುವ ತಯಾರಿ ವಿಧಾನಗಳನ್ನು ನೋಡಿಕೊಳ್ಳಿ ಮತ್ತು ಆಲೂಗಡ್ಡೆ ದೋಸೆ ತಯಾರಿಸಿ ಮನೆಯವರ ಮೆಚ್ಚುಗೆ ಪಡೆಯಿರಿ.
ನಿಮ್ಮ ಬಾಯಿಯ ರುಚಿಯನ್ನು ಹೆಚ್ಚಿಸುವ ಗರಿ ಗರಿ ತರಕಾರಿ ದೋಸೆ!
ಪ್ರಮಾಣ: 4
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 25 ನಿಮಿಷಗಳು

ಸಾಮಾಗ್ರಿಗಳು:
*ಆಲೂಗಡ್ಡೆ - 2 (ಬೇಯಿಸಿ ಸಿಪ್ಪೆ ಸುಲಿದದ್ದು)
*ಮೈದಾ - 2 ಸ್ಪೂನ್
*ಹಸಿಮೆಣಸು - 2 (ಉದ್ದಕ್ಕೆ ಸೀಳಿದ್ದು)
*ಕೊತ್ತಂಬರಿ ಸೊಪ್ಪು - ಮುಷ್ಟಿಯಷ್ಟು
*ಎಣ್ಣೆ - 2 - 3 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
ನಿಮ್ಮ ಬಾಯಿಯ ರುಚಿಯನ್ನು ಹೆಚ್ಚಿಸುವ ಗರಿ ಗರಿ ತರಕಾರಿ ದೋಸೆ!
ಮಾಡುವ ವಿಧಾನ
1. ಮೊದಲಿಗೆ ನೀವು, ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಪಕ್ಕದಲ್ಲಿರಿಸಿ. ಒಂದು ಪಾತ್ರೆಗೆ ಅದನ್ನು ಹಾಕಿ ಇದಕ್ಕೆ ಮೈದಾ ಹಾಗೂ ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣವನ್ನು ಮಿಶ್ರಗೊಳಿಸಿ. ಇಡ್ಲಿ ಹಿಟ್ಟಿನಂತೆ ಸ್ವಲ್ಪ ದಪ್ಪನೆಯ ಹಿಟ್ಟನ್ನು ತಯಾರಿಸಿ. ಹಿಟ್ಟಿಗೆ ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಿ.
2. ತವಾ ಬಿಸಿ ಮಾಡಿಕೊಂಡು ಸ್ವಲ್ಪ ಎಣ್ಣೆ ಹಾಕಿ. ದೋಸೆ ಕೈಲನ್ನು ತೆಗೆದುಕೊಂಡು ಕಾವಲಿಯಲ್ಲಿ ದೋಸೆಯನ್ನು ಹುಯ್ಯಿರಿ. ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆಯನ್ನು ಹಾಕಿ. ದೋಸೆ ಚೆನ್ನಾಗಿ ಬೇಯುವಂತೆ ನೋಡಿಕೊಳ್ಳಿ. ದೋಸೆ ಬೇಯುತ್ತಿದ್ದಂತೆ ಸಟ್ಟುಗ ಬಳಸಿ ದೋಸೆಯನ್ನು ಕಾವಲಿಯಿಂದ ತೆಗೆಯಿರಿ.
ಹೀಗೆ ಇನ್ನಷ್ಟು ದೋಸೆಗಳನ್ನು ತಯಾರಿಸಿ ನಿಮ್ಮ ಬ್ರೇಕ್‌ಫಾಸ್ಟ್ ಅನ್ನು ಇನ್ನಷ್ಟು ರುಚಿಕರವಾಗಿ ನಿಮಗೆ ಮಾಡಬಹುದು. ದೋಸೆಯ ಮೇಲೆ ಸ್ವಲ್ಪ ಬೆಣ್ಣೆ ಹಾಕಿ ಇದನ್ನು ನಿಮಗೆ ಸವಿಯಬಹುದು.



Click it and Unblock the Notifications
