Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪೆಸರಟ್ಟು ದೋಸೆ ಆಂಧ್ರ ಸ್ಪೆಷಲ್
ಈವತ್ತು ನಾವು ನಿಮಗೆ ಆಂಧ್ರ ಶೈಲಿಯ ದೋಸೆ ಮಾಡುವುದನ್ನು ಹೇಳಿಕೊಡುತ್ತೇವೆ. ಪ್ರಯತ್ನಿಸಿ ನೋಡಿ. ಈ ದೋಸೆಯನ್ನು ತೆಂಗಿನ ಚಟ್ನಿಯೊಂದಿಗೆ ಸವಿಯಲು ಚೆನ್ನ.
ಈ ಪೆಸರಟ್ಟು ದೋಸೆ/ಹೆಸರುಕಾಳು ದೋಸೆಯ ವಿಶೇಷತೆಯೆಂದರೆ ಇದು ಪೌಷ್ಟಿಕಾಂಶಭರಿತವಾಗಿದ್ದು ತಿನ್ನಲು ರುಚಿಯಾಗಿರುತ್ತದೆ. ಹೆಸರುಕಾಳು ಬಳಸುವುದರಿಂದ ದೋಸೆ ಹಸಿರು ಬಣ್ಣದಲ್ಲಿರುತ್ತದೆ. ಕೆಲವರಿಗೆ ಬೆಳಗ್ಗೆ ತಿನ್ನಲು ಇದು ಖಾರದ ತಿಂಡಿ ಅನ್ನಿಸಬಹುದು. ಆದರೆ ಇದಕ್ಕೆ ಹಸಿಮೆಣಸಿನಕಾಯಿ ಹಾಕಿದ್ದರೂ ಇದು ಅಷ್ಟು ಖಾರವಿರುವುದಿಲ್ಲ.

ಬೇಕಾಗುವ ಸಾಮಗ್ರಿಗಳು
ಹೆಸರು ಕಾಳು- 2 ಕಪ್
ಅಕ್ಕಿ- 3 ಟೀಚಮಚ
ಈರುಳ್ಳಿ- 1 (ಕತ್ತರಿಸಿಕೊಳ್ಳಿ)
ಶುಂಠಿ- 1 ತುಂಡು
ಜೀರಿಗೆ- 1 1/2 ಟೀಚಮಚ
ಹಸಿಮೆಣಸಿನ ಕಾಯಿ- 5 (ಕತ್ತರಿಸಿಕೊಳ್ಳಿ)
ಉಪ್ಪು- ರುಚಿಗೆ ತಕ್ಕಷ್ಟು
ದೋಸೆಯ ಮೇಲೆ ಉದುರಿಸಲು ಈರುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಿ.
ಮಾಡುವ ವಿಧಾನ
1. ಮೊದಲಿಗೆ ಹೆಸರುಕಾಳು ಮತ್ತು ಅಕ್ಕಿಯನ್ನು 6 ಗಂಟೆಗಳ ಕಾಲ ನೆನೆಹಾಕಿ
2. ನಂತರ ಅದನ್ನು ದೋಸೆ ಮಾಡುವ ಹದಕ್ಕೆ ರುಬ್ಬಿಕೊಳ್ಳಿ. ಅರ್ಧ ರುಬ್ಬಿಕೊಂಡ ನಂತರ ಅದಕ್ಕೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಉಪ್ಪನ್ನು ಬೆರೆಸಿ.
3. ಇದಕ್ಕೆ ಜೀರಿಗೆ ಕಾಳುಗಳನ್ನು ಸೇರಿಸಿ ಕಲಸಿ.
4. ಹೆಂಚನ್ನು ಹಾಕಿ ಕಾಯಿಸಿ. ದೋಸೆ ಹಿಟ್ಟನ್ನು ಸಮವಾಗಿ ಹೆಂಚಿನ ಮೇಲೆ ಹಾಕಿ ಎಣ್ಣೆ ಹಾಕಿ.
5. ದೋಸೆ ಸ್ವಲ್ಪ ಬೆಂದ ನಂತರ ಕತ್ತರಿಸಿದ ಈರುಳ್ಳಿಯನ್ನು ಅದರ ಮೇಲೆ ಉದುರಿಸಿ. ದೋಸೆಯನ್ನು ತಿರುವಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಸುಮಾರು 8 ಸೆಕೆಂಡುಗಳ ಕಾಲ ಬೇಯಿಸಿ.
ನಿಮ್ಮ ಪೆಸರಟ್ಟು ದೋಸೆ ಈಗ ರೆಡಿ. ತೆಂಗಿನ ಚಟ್ನಿಯೊಂದಿಗೆ ಇದನ್ನು ಸವಿಯಲು ಸಿದ್ಧರಾಗಿ.



Click it and Unblock the Notifications
