Latest Updates
-
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ!
ನಾಲಿಗೆಯ ರುಚಿ ತಣಿಸುವ ಮಶ್ರೂಮ್ ಪಲಾವ್!
ಭಾರತೀಯ ಶೈಲಿಯಲ್ಲಿ ಮಾಡುವ ಮಶ್ರೂಮ್ ಪಲಾವ್ ನಿಮ್ಮ ಎಲ್ಲಾ ರೈಸ್ ಬಾತ್‌ಕ್ಕಿಂತಲೂ ಸ್ವಲ್ಪ ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಬಟಾಣಿ ಪಲಾವ್, ಪನ್ನೀರ್ ಪಲಾವ್, ಟೊಮೆಟೊ ಬಾತ್, ಮೆಂತ್ಯೆ ಬಾತ್ ಎಲ್ಲಕ್ಕಿಂತ ಮಶ್ರೂಮ್ ಪಲಾವ್ ಹೆಚ್ಚು ರುಚಿಯಾಗಿರುತ್ತೆ. ಆರೋಗ್ಯಕ್ಕೂ ಪೂರಕವಾಗಿರುವ ಮಶ್ರೂಮನ್ನು ಪಲಾವ್‌ನಲ್ಲಿ ಬಳಸಿದರೆ ಹೆಚ್ಚು ಸ್ವಾದಭರಿತವಾಗಿರುತ್ತೆ.
ಮಾಮೂಲಿ ಪಲಾವ್ ನಂತೆ ಹೆಚ್ಚು ಸಮಯವೂ ಬೇಕಿಲ್ಲ, ಚಕ್ ಅಂತ ಮಾಡಿ ಮುಗಿಸಬಹುದು. ಮಶ್ರೂಮ್ ಪಲಾವ್ ಮಾಡುವ ವಿಧಾನವನ್ನು ಬೋಲ್ಡ್ ಸ್ಕೈ ನಿಮಗಾಗಿ ಸಹಾಯ ಮಾಡಲಿದೆ
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಯಾದ ಕಡಲೆಹುಡಿ ಮೆಂತೆ ರೋಟಿ

ಮಾಡುವ ವಿಧಾನ
ಮಶ್ರೂಮ್ ಪಲಾವ್ ಗೆ ಬೇಕಾಗುವ ಪದಾರ್ಥ:
* 1 ಕಪ್ ಅಕ್ಕಿ
* 1 ಕಪ್ ಅಣಬೆ
* 4 ಈರುಳ್ಳಿ (ಸಾಂಬಾರು ಈರುಳ್ಳಿ)
* 2 ಲವಂಗ
* 1/2 ಇಂಚಿನ ಚೆಕ್ಕೆ
* 2 ಏಲಕ್ಕಿ
* 1 ಪಲಾವ್ ಎಲೆ
* 1 ಚಮಚ ಗರಂ ಮಸಾಲ
* 1 ಚಮಚ ಜೀರಿಗೆ ಪುಡಿ
* ಸ್ವಲ್ಪ ಎಣ್ಣೆ
* ರುಚಿಗೆ ತಕ್ಕಷ್ಟು ಉಪ್ಪು
ಮಶ್ರೂಮ್ ಪಲಾವ್ ತಯಾರಿಸುವ ವಿಧಾನ:
* ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು.
* ಸಾಂಬಾರು ಈರುಳ್ಳಿ ಸಣ್ಣಗೆ ಕತ್ತರಿಸಿ ಹಾಗೂ ಅದನ್ನು ಒಂದೆಡೆ ಇಟ್ಟುಕೊಳ್ಳಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಕರವಾದ ಕಡಲೆಕಾಳು ಪುಲಾವ್ ರೆಸಿಪಿ
* ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ, ಎಣ್ಣೆ ಸರಿ ಬಿಸಿ ಆದ ನಂತರ ಅದರಲ್ಲಿ ಈರುಳ್ಳಿ, ಲವಂಗ, ಚೆಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆ, ಹಾಗೂ ಸಣ್ಣದಾಗಿ ತುಂಡು ಮಾಡಿರುವ ಮಶ್ರೂಮ್ ಅನ್ನು ಹಾಕಿ.
* ತದನಂತರ ಜೀರಿಗೆ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ.
* ನಂತರ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಎರಡು ಕಪ್ ಬಿಸಿ ನೀರನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಈರುಳ್ಳಿಯ ಹಸಿರು ಭಾಗ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಮುಚ್ಚುಳ ಮುಚ್ಚಿ ಬೇಯಿಸಿದರೆ ಮಶ್ರೂಮ್ ಪಲಾವ್ ತಿನ್ನಲು ರೆಡಿಯಾಗಿರುತ್ತೆ.



Click it and Unblock the Notifications
