Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ?
ಬೆಳಗಿನ ಉಪಹಾರಕ್ಕೆ ರುಚಿಯಾದ ಎಲೆಕೋಸಿನ ಪಲಾವ್ ರೆಸಿಪಿ
ಎಲೆಕೋಸು ಬ್ರಸ್ಸಿಕಾ ಕುಟುಂಬ ವರ್ಗಕ್ಕೆ ಸೇರಿರುವ ತರಕಾರಿಯಾಗಿದ್ದು ತಂಪಿನ ಹವಾಮಾನ ಇದರ ಕೃಷಿಗೆ ತಕ್ಕುದಾದುದು. ಎಲೆಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದ್ದು ಇದು ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಕೊಬ್ಬನ್ನು ಕರಗಿಸುವ ಅಂಶಗಳನ್ನು ಒಳಗೊಂಡಿದೆ. ಇದು ವೈದ್ಯಕೀಯ ಅಂಶಗಳನ್ನು ಹೇರಳವಾಗಿ ಒಳಗೊಂಡಿದ್ದು ನ್ಯೂಟ್ರಿಶಿಯಸ್ ಅಂಶಗಳಿಂದ ಸಮೃದ್ಧ ತರಕಾರಿ ಎಂದೆನಿಸಿದೆ.
ತೂಕ ಇಳಿಕೆ, ಮೆದುಳು ಸಂಬಂಧಿ ಕಾಯಿಲೆ, ಮೂಳೆಯ ಆರೋಗ್ಯ ಹೀಗೆ ದೇಹದ ಸರ್ವ ಅಂಗಕ್ಕೂ ಅತ್ಯುತ್ತಮ ಔಷಧಿ ಎಂದೆನಿಸಿರುವ ಕ್ಯಾಬೇಜ್ (ಎಲೆಕೋಸು) ಜೀರ್ಣಾಂಗ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದನ್ನು ಬೇಯಿಸಿ ಇಲ್ಲವೇ ಹಸಿಯಾಗಿ ಕೂಡ ತಿನ್ನಬಹುದಾಗಿದ್ದು ನಿಮ್ಮ ದೈನಂದಿನ ಆಹಾರ ಪ್ರಕ್ರಿಯೆಯಲ್ಲಿ ಕ್ಯಾಬೇಜ್ ಅನ್ನು ಸೇರಿಸುವುದು ಅತ್ಯಗತ್ಯವಾಗಿದೆ. ಕ್ಯಾಬೇಜ್‌ನಲ್ಲಿರುವ ವಿಟಮಿನ್ ಇ ಅಂಶವು ತ್ವಚೆ, ಕೂದಲು ಮತ್ತು ಕಣ್ಣಿನ ಆರೋಗ್ಯಕ್ಕೆ ಹೆಚ್ಚು ಮುಖ್ಯವಾಗಿದೆ. ಇನ್ನು ಕ್ಯಾಲ್ಶಿಯಂ, ಮೆಗ್ನೇಶಿಯಮ್ ಮತ್ತು ಪೊಟ್ಯಾಶಿಯಮ್ ಅನ್ನು ಹೇರಳವಾಗಿ ತನ್ನಲ್ಲಿ ಒಳಗೊಂಡಿರುವ ಕ್ಯಾಬೇಜ್ ಸಮೃದ್ಧ ಜೀವನಕ್ಕೆ ಅತೀ ಮುಖ್ಯ. ಮುಂಬಯಿ ಶೈಲಿಯ ಟೊಮೇಟೊ ಪಲಾವ್ ರೆಸಿಪಿ

ಇಂತಹ ಸಮೃದ್ಧ ತರಕಾರಿಯನ್ನು ನಿತ್ಯವೂ ಸೇವಿಸುವುರಿಂದ ಹೆಚ್ಚಿನ ರೋಗಗಳನ್ನು ನಿಯಂತ್ರಣದಲ್ಲಿಡಬಹುದಾಗಿದೆ. ನಿಮ್ಮ ಬೆಳಗ್ಗಿನ ತಿಂಡಿಗೆ ಹೆಚ್ಚು ಪರಿಪೂರ್ಣ ಎಂದೆನಿಸಿರುವ ಎಲೆಕೋಸಿನ ಖಾದ್ಯಗಳು ಬಾಯಲ್ಲಿ ನೀರೂರಿಸುವಂಥದ್ದು. ಹಾಗಿದ್ದರೆ ಇಂದಿನ ಲೇಖನದಲ್ಲಿ ಎಲೆಕೋಸಿನ ಪಲಾವ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಸರಳ ವಿಧಾನದಲ್ಲಿ ಈ ಪಲಾವ್ ಅನ್ನು ಸಿದ್ಧಗೊಳಿಸಬಹುದಾಗಿದ್ದು ನಿಮ್ಮ ಹೊಟ್ಟೆಯನ್ನು ಇದು ಭರ್ತಿಗೊಳಿಸುವುದು ಖಂಡಿತ.
ಪಲಾವ್‌ಗೆ ಬೇಕಾಗುವ ಪದಾರ್ಥಗಳು:
* ಅಕ್ಕಿ - 1 ಕಪ್
* ಎಲೆ ಕೋಸು- 250 ಗ್ರಾಂ
* ಈರುಳ್ಳಿ - 4 (ಸಣ್ಣಗೆ ಕತ್ತರಿಸಿದಂತಹುದು)
* ಎಣ್ಣೆ - 1/2 ಕಪ್
* ಉಪ್ಪು- ರುಚಿಗೆ ತಕ್ಕಷ್ಟು
* ಕಪ್ ತೆಂಗಿನ ತುರಿ - 1/2 ಕಪ್
* ಹುರಿಗಡಲೆ - 4 ಚಮಚ
* ಮೆಣಸಿನಕಾಯಿ - 5 - 6
* ಸ್ವಲ್ಪ ಶುಂಠಿ
* ಕೊತ್ತಂಬರಿ - 1 ಚಮಚ
* ಕರಿಬೇವು- 1 ಚಮಚ
* ಸಾಸಿವೆ - 1 ಚಮಚ
* ಕಡಲೆ ಬೇಳೆ - 1 ಚಮಚ
* ಉದ್ದಿನ ಬೇಳೆ - 1 ಚಮಚ
* ಜೀರಿಗೆ - 1/2 ಚಮಚ
* ಗೋಡಂಬಿ - 7-8
ಮಾಡುವ ವಿಧಾನ
* ಮೊದಲಿಗೆ ಅನ್ನವನ್ನು ಉದುರುದುರಾಗಿ ಮಾಡಿಟ್ಟುಕೊಂಡು ಪೂರ್ಣ ತಣ್ಣಗಾಗಲು ಬಿಡಬೇಕು
* ಇನ್ನು ಹಸಿರು ಮೆಣಸಿನಕಾಯಿ, ಶುಂಠಿ, ತೆಂಗಿನ ತುರಿ, ಹುರಿಗಡಲೆಯನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು.
* ಪಾತ್ರೆಯೊಂದರಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಜೀರಿಗೆಯನ್ನು ಹಾಕಿ ಹುರಿಯಿರಿ
* ಕತ್ತರಿಸಿದ ಈರುಳ್ಳಿಯನ್ನು ಬೆರೆಸಿ ಗರಿ ಗರಿಯಾಗುವಂತೆ ಹುರಿಯಬೇಕು.
* ನಂತರ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಂಡಿದ್ದ ಎಲೆ ಕೋಸನ್ನು ಹಾಕಿ ಬೇಯುವವರೆಗು ಹುರಿಯಿರಿ.
* ತದನಂತರ ರುಬ್ಬಿಕೊಂಡ ಮಸಾಲೆಯನ್ನು ಇದಕ್ಕೆ ಬೆರೆಸಿ 10 ನಿಮಿಷ ಸಣ್ಣಗಿನ ಉರಿಯಲ್ಲಿ ಹುರಿಯಿರಿ
* ಈಗ ಅನ್ನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ 5 ನಿಮಿಷ ಹುರಿಯಬೇಕು
* ಕೊನೆಯಲ್ಲಿ ಕೊತ್ತಂಬರಿ, ಕರಿಬೇವು ಮತ್ತು ಹುರಿದ ಗೋಡಂಬಿಯನ್ನು ಅನ್ನದ ಮೇಲೆ ಉದುರಿಸಿದರೆ ಎಲೆಕೋಸಿನ ಪಲಾವ್ ಬ್ರೇಕ್ ಫಾಸ್ಟ್ ಗೆ ರೆಡಿಯಾಗಿರುತ್ತೆ



Click it and Unblock the Notifications
