Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಭಾರತೀಯ ಶೈಲಿಯಲ್ಲಿ ಫ್ರೆಂಚ್ ಟೋಸ್ಟ್
ನಾವು ಭಾರತೀಯರು ವಿದೇಶಿ ಮೂಲದ ಕೆಲವೊಂದು ಅಡುಗೆಗಳನ್ನು ನಮ್ಮ ಶೈಲಿಯಲ್ಲಿ ತಯಾರಿಸಲು ಪ್ರಯತ್ನಿಸುತ್ತೇವೆ. ಅದು ನೂಡಲ್ಸ್ ಆಗಿರಬಹುದು, ಫ್ರೆಂಚ್ ಟೋಸ್ಟ್ , ಮ್ಯಾಗಿ ಈ ರೀತಿಯ ಯಾವುದೇ ಆಹಾರಗಳಾಗಿರಬಹುದು, ಇಂತಹ ಆಹಾರಗಳನ್ನು ನಮ್ಮ ಶೈಲಿಯಲ್ಲಿ ಮಾಡಿ ತಿನ್ನಲು ಇಷ್ಟಪಡುತ್ತೇವೆ.
ಅದರಲ್ಲೂ ಫ್ರೆಂಚ್ ಟೋಸ್ಟ್ ಅನ್ನು ಭಾರತೀಯ ಶೈಲಿಯಲ್ಲಿ ತಯಾರಿಸಿದರೆ ತುಂಬಾ ರುಚಿಕರವಾಗಿದ್ದು ಇದನ್ನು ಮಾಡುವ ವಿಧಾನ ಇಲ್ಲಿ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
ಮೊಟ್ಟೆ 4
ಹಾಲು 2 ಚಮಚ
ಚಿಕ್ಕ ಈರುಳ್ಳಿ 2
ಟೊಮೆಟೊ 1 (ಕತ್ತರಿಸಿದ್ದು)
ದುಂಡು ಮೆಣಸು 1
ಕೊತ್ತಂಬರಿ ಪುಡಿ 1 ಚಮಚ
ಚಾಟ್ ಮಸಾಲ ಅರ್ಧ ಚಮಚ
ರವೆ 1/4 ಕಪ್
ಬ್ರೆಡ್ ತುಂಡು 6
ರುಚಿಗೆ ತಕ್ಕ ಉಪ್ಪು
ಬೆಣ್ಣೆ 1 ಚಮಚ
ತಯಾರಿಸುವ ವಿಧಾನ:
1. ಮೊಟ್ಟೆಯನ್ನುಒಡೆದು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಹಾಲು ಹಾಕಿ ಚೆನ್ನಾಗಿ ಕದಡಬೇಕು.
2. ನಂತರ ಆ ಮಿಶ್ರಣಕ್ಕೆ ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಚಾಟ್ ಮಸಾಲ ಮತ್ತು ರುಚಿಗೆ ತಕ್ಕ ಉಪ್ಪು ಹಾಕಬೇಕು. ನಂತರ 2-3 ನಿಮಿಷ ಕದಡಬೇಕು.
3. ನಂತರ ಇದಕ್ಕೆ ಕತ್ತರಿಸಿದ ದುಂಡು ಮೆಣಸಿನ ಕಾಯಿ, ಈರುಳ್ಳಿ, ಟೊಮೆಟೊ ಹಾಕಬೇಕು.
4. ಈಗ ಬ್ರೆಡ್ ತುಂಡುಗಳನ್ನು ಈ ಮಿಶ್ರಣದಲ್ಲಿ ಅದ್ದಿ, ನಂತರ ರವೆಯಲ್ಲಿ ಹೊರಳಾಡಿಸಬೇಕು. ನಂತರ ತವಾದಲ್ಲಿ ಹಾಕಿ ಬ್ರೆಡ್ ನ ಎರಡೂ ಬದಿಯನ್ನು ಫ್ರೈ ಮಾಡಿದರೆ ರುಚಿಯಾದ ಫ್ರೆಂಚ್ ಟೋಸ್ಟ್ ರೆಡಿ.



Click it and Unblock the Notifications
