Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆರೋಗ್ಯಕರ ಬ್ರೇಕ್ ಫಾಸ್ಟ್ -ಎಗ್ ಸೂಫ್ಲೆ
ಬೆಳಗಿನ ಬ್ರೇಕ್ ಫಾಸ್ಟ್ ಗೆ ಮೊಟ್ಟೆಯಿಂದ ತಯಾರಿಸಿದ ತಿಂಡಿ ತುಂಬಾ ಅರೋಗ್ಯಕರವಾದ ಆಹಾರವಾಗಿದೆ. ಮೊಟ್ಟೆಯಿಂದ ಅನೇಕ ಬಗೆಯ ಬ್ರೇಕ್ ಫಾಸ್ಟ್ ಅಡುಗೆಗಳನ್ನು ತಯಾರಿಸಬಹುದು ಉದಾಹರಣೆಗೆ ಆಮ್ಲೇಟ್.
ಇಲ್ಲಿ ನಾವು ಮೊಟ್ಟೆಯಿಂದ ತಯಾರಿಸುವ ಎಗ್ ಸೂಫ್ಲೆ ಎಂಬ ವಿಶೇಷ ಅಡುಗೆಯ ರೆಸಿಪಿ ನೀಡಿದ್ದೇವೆ. ಇದೊಂದು ಮೈಕ್ರೋವೇವ್ ಅಡುಗೆಯಾಗಿದೆ.

ಬೇಕಾಗುವ ಸಾಮಾಗ್ರಿಗಳು:
ಮೊಟ್ಟೆ 4
ಹಾಲು 1 ಕಪ್
ಫ್ರೆಶ್ ಕ್ರೀಮ್ 2 ಚಮಚ
ಚೀಸ್ 50 ಗ್ರಾಂ
ಅಣಬೆ 1 ಪ್ಯಾಕೆಟ್
ಪಾಲಾಕ್ ಸೊಪ್ಪು 1 ಕಟ್ಟು
ಬೆಣ್ಣೆ
ಕರಿ ಮೆಣಸಿನ ಪುಡಿ 1 ಚಮಚ
ಮೈದಾ 2 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಒಂದು ಬಟ್ಟಲಿನಲ್ಲಿ ಮೊಟ್ಟೆ ಒಡೆದು ಹಾಕಬೇಕು. ನಂತರ ಅದಕ್ಕೆ ಫ್ರೆಶ್ ಕ್ರೀಮ್, ಹಾಲು, ಚೀಸ್ ಹಾಕಿ 5 ನಿಮಿಷದವರೆಗೆ ಚೆನ್ನಾಗಿ ಕದಡಬೇಕು.
2. ಈ ಮಿಶ್ರಣವನ್ನು 100 ಡಿಗ್ರಿ ಉಷ್ಣತೆಯಲ್ಲಿ 1 ನಿಮಿಷ ಬಿಸಿ ಮಾಡಿ. ನಂತರ ಉರಿಯಿಂದ ತೆಗೆದು ಮತ್ತೊಮ್ಮೆ ಕಲೆಸಿ.
3. ಬೆಣ್ಣೆ ಸ್ವಲ್ಪ ಹಾಕಿ ಪಾಲಾಕ್ ಸೊಪ್ಪನ್ನು ಮತ್ತು ಅಣಬೆಯನ್ನು ಉರಿಯಿರಿ. ನಂತರ ಅದನ್ನು ಮಿಶ್ರಣದ ಜೊತೆ ಹಾಕಬೇಕು. ನಂತರ ಅದಕ್ಕೆ ಕರಿ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕಲೆಸಬೇಕು.
4. ಮೈಕ್ರೋವೇವ್ ಅನ್ನು 350 ಡಿಗ್ರಿಗೆ ಮೊದಲೇ ಬಿಸಿ ಮಾಡಿಡಬೇಕು.
5. ಈಗ ಬೇಕಿಂಗ್ ಕಪ್ ಅನ್ನು ಜೋಡಿಸಿ ಅದರಲ್ಲಿ ಬೆಣ್ಣೆಯನ್ನು ಸವರಿ. ಈಗ ಒಂದು ಸ್ಪೂನ್ ಮಿಶ್ರಣವನ್ನು ಮೈದಾ ಹಿಟ್ಟಿನಲ್ಲಿ ಹೊರಳಾಡಿಸಿ ನಂತರ ಕಪ್ ಗೆ ಹಾಕಬೇಕು. ಈ ರೀತಿ ಎಲ್ಲಾ ಕಪ್ ಗಳಿಗೆ ಹಾಕಬೇಕು.
6. ಈಗ 60% ಉಷ್ಣತೆಯಲ್ಲಿ 20 ನಿಮಿಷ ಬೇಯಿಸಿದರೆ ರುಚಿಯಾದ ಎಗ್ ಸೂಫ್ಲೆ ರೆಡಿ.



Click it and Unblock the Notifications
