Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಚಟ್ನಿ ಜೊತೆ ಸವಿಯಿರಿ ಗೊಜ್ಜು ಇಡ್ಲಿ
ಸಾಮಾನ್ಯವಾಗಿ ಪ್ಲೇನ್ ಇಡ್ಲಿ ಮಾಡಿ ಅದನ್ನು ಚಟ್ನಿ ಹಾಗೂ ಸಾಂಬರ್ ಜೊತೆ ತಿನ್ನುತ್ತೇವೆ. ಪ್ರತಿಬಾರಿಯೂ ಒಂದೇ ರುಚಿಯ ಇಡ್ಲಿ ತಿನ್ನುವ ಬದಲು ಈ ಗೊಜ್ಜು ಇಡ್ಲಿಯ ರುಚಿ ನೋಡಿ.
ಸಾಮಾನ್ಯವಾದ ಇಡ್ಲಿಗಿಂತ ಇದು ತುಂಬಾ ರುಚಿಕರವಗಿದ್ದು ಈ ಇಡ್ಲಿಯನ್ನು ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:
* ರವೆ 2 ಕಪ್
* ಮೊಸರು 1 ಕಪ್
* ಸಾಸಿವೆ 1 ಚಮಚ
* ಸ್ವಲ್ಪ ಕರಿಬೇವಿನ ಎಲೆ 7-8
* ಚಿಟಿಕೆ ಅಡುಗೆ ಸೋಡಾ
* ರುಚಿಗೆ ತಕ್ಕ ಉಪ್ಪು
ಇತರ ಸಾಮಗ್ರಿಗಳು:
* ಆಲೂಗೆಡ್ಡೆ 2-3 (ಬೇಯಿಸಿ ಹಿಸುಕಿದ್ದು)
* ಬಟಾಣಿ 1 ಕಪ್
* ಚಿಕ್ಕ ಈರುಳ್ಳಿ 2-3 (ಕತ್ತರಿಸಿದ್ದು)
* ಖಾರದ ಪುಡಿ 1 ಚಮಚ
* ಅರಿಶಿಣ ಪುಡಿ 1 ಚಮಚ
* ಕೊತ್ತಂಬರಿ ಪುಡಿ 1 ಚಮಚ
* ಬೀನ್ಸ್ (ಬೇಯಿಸಿದ್ದು)
* ಎಣ್ಣೆ
* ಉಪ್ಪು
ತಯಾರಿಸುವ ವಿಧಾನ:
1. ಒಂದು ಬಟ್ಟಲಿನಲ್ಲಿ ರವೆ, ಮೊಸರು, ಉಪ್ಪು ಹಾಕಿ ಚೆನ್ನಾಗಿ ಕದಡಿ ಗಟ್ಟಿಯಾದ ಹಿಟ್ಟು ಮಾಡಿ ಒಂದು ಗಂಟೆ ಕಾಲ ಇಡಬೇಕು.
2. ಈಗ ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ನಂತರ ಕಾದ ಎಣ್ಣೆಗೆ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಬೇಯಿಸಿ ಹಿಸುಕಿದ ಆಲೂಗೆಡ್ಡೆ, ಬಟಾಣಿ ಹಾಕಿ ಅದಕ್ಕೆ ಖಾರ ಪುಡಿ ಮತ್ತು ಅರಿಶಿಣ ಪುಡಿ , ಬೀನ್ಸ್ ಹಾಗು ರುಚಿಗೆ ತಕ್ಕ ಉಪ್ಪು ಹಾಕಿ ಗೊಜ್ಜು ರೀತಿ ತಯಾರಿಸಬೇಕು.
3. ಈಗ ಇಡ್ಲಿ ಪಾತ್ರೆಗೆ ಅರ್ಧದಷ್ಟು ನೀರು ಹಾಕಿ ಬಿಸಿ ಮಾಡಲು ಇಡಬೇಕು. ನೀರು ಬಿಸಿಯಾದಾಗ ಇಡ್ಲಿ ತಟ್ಟೆಯಲ್ಲಿರುವ ಗುಂಡಿಗಳಿಗೆ ಎಣ್ಣೆ ಸವರಿ ಅದರ ಅರ್ಧದಷ್ಟು ಇಡ್ಲಿ ಹಿಟ್ಟು ಹಾಕಿ ಬಂತರ ಈ ಗೊಜ್ಜನ್ನು ಅದರ ಮೇಲೆ ಉದುರಿಸಿ ನಂತರ ಹಿಟ್ಟು ಹಾಕಿ ಪುನಃ ಮೆಲೆ ಗೊಜ್ಜನ್ನು ಹಾಕಬೇಕು. ನಂತರ ಇಡ್ಲಿ ತಟ್ಟೆಯನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿದರೆ ರುಚಿಕರವಾದ ಗೊಜ್ಜು ಇಡ್ಲಿ ರೆಡಿ.
ಇದನ್ನು ತೆಂಗಿನಕಾಯಿ ಚಟ್ನಿ ಜೊತೆ ನೆಚ್ಚಿಕೊಂಡು ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
