Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬ್ರೇಕ್ ಫಾಸ್ಟ್ ಗೆ ಎಗ್ ಲೆಸ್ ಪಾನ್ ಕೇಕ್

ಬೇಕಾಗುವ ಸಾಮಾಗ್ರಿಗಳು:
* ತುರಿದ ಆಲೂಗೆಡ್ಡೆ 4 (ಬೇಯಿಸಿದ ಆಲೂಗೆಡ್ಡೆ)
* ಈರುಳ್ಳಿ 3
* ಮೈದಾ 1 ಕಪ್
* ಕರಿಮೆಣಸಿನ ಪುಡಿ 1/4 ಚಮಚ
* ರುಚಿಗೆ ತಕ್ಕ ಉಪ್ಪು
* ನೀರು ಅಥವಾ ಹಾಲು 1/2 ಕಪ್
* ಎಣ್ಣೆ 1 ಚಮಚ
* ಅಡುಗೆ ಸೋಡಾ ಚಿಟಿಕೆಯಷ್ಟು
* ಬೇಕಿಂಗ್ ಪೌಡರ್ 1/2 ಚಮಚ
ತಯಾರಿಸುವ ವಿಧಾನ:
1. ತುರಿದ ಆಲೂಗೆಡ್ಡೆ, ಈರುಳ್ಳಿ, ಮೈದಾ ಹಿಟ್ಟು, ರುಚಿಗೆ ತಕ್ಕ ಉಪ್ಪು, ಅಡುಗೆ ಪೌಡರ್ (ಬೇಕಿಂಗ್ ಪೌಡರ್) ಮತ್ತು ಬೇಕಿಂಗ್ ಸೋಡಾ ಹಾಕಿ ಮಿಶ್ರಣ ಮಾಡಬೇಕು. ನಂತರ ಹಾಲು ಅಥವಾ ನೀರನ್ನು ಹಾಕಿ ಮಿಶ್ರಣ ಮಾಡಬೇಕು. ಕಲೆಸಿದ ಮಿಶ್ರ ಗಟ್ಟಿಯಾಗಿರಬೇಕು ಮತ್ತು ಈ ಮಿಶ್ರಣವನ್ನು ತುಂಬಾ ಹೊತ್ತು ಕಲೆಸಬೇಡಿ.
2. ಈಗ ತವಾವನ್ನು ಬಿಸಿ ಮಾಡಿ ಅದಕ್ಕೆ ೊಂದು ಚಮಚ ಎಣ್ಣೆ ಹಾಕಿ ಒಂದು ಸೌಟು ತುಂಬಾ ಹಿಟ್ಟನ್ನು ತೆಗೆದುಕೊಂಡು ತವಾದಲ್ಲಿ ಹಾಕಬೇಕು. ನಂತರ ದೋಸೆಗೆ ಮಾಡುವಂತೆ ಸೌಟುನಿಂದ ಮಿಶ್ರವನ್ನು ಸ್ವಲ್ಪ ಅಗಲ ಮಾಡಿ, ಆದರೆ ತುಂಬಾ ತೆಳ್ಳಗೆ ಮಾಡಬೇಡಿ. ಪಾನ್ ಕೇಕ್ ನ ಎರಡೂ ಬದಿ ಕಂದು ಬಣ್ಣ ಬಂದ ಮೇಲೆ ತೆಗೆದರೆ ಎಗ್ ಲೆಸ್ ಪಾನ್ ಕೇಕ್ ರೆಡಿಯಾಗಿರುತ್ತದೆ.
ಆಲೂಗೆಡ್ಡೆಯಿಂದ ತಯಾರಿಸಿದ ಈ ಪಾನ್ ಕೇಕ್ ಅನ್ನು ಗ್ರೇವಿ, ತೆಂಗಿನ ಕಾಯಿ ಚಟ್ನಿ ಅಥವಾ ಜಾಮ್ ಜೊತೆ ತಿನ್ನಬಹುದು.



Click it and Unblock the Notifications
