Latest Updates
-
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ?
ತ್ವರಿತ ಬ್ರೇಕ್‌ಫಾಸ್ಟ್‌ಗಾಗಿ ಎಗ್ ಸಲ್ಮಾಯ್ ಸ್ಯಾಂಡ್‌ವಿಚ್!
ಬೆಳಗ್ಗಿನ ತಿಂಡಿಯನ್ನು ಸಿದ್ಧಪಡಿಸುವುದೆಂದರೆ ತಲೆನೋವಿನ ಕೆಲಸವೇ. ಬೆಳಗ್ಗಿನ ಉಪಹಾರ ರಾಜವೈಭೋಗದಂತಿರಬೇಕು ಎಂಬ ಮಾತಿದೆ. ಆದರೆ ಧಾವಂತದ ಬದುಕಿನಲ್ಲಿ ಇದು ಸಾಧ್ಯವಿಲ್ಲದ ಮಾತಾಗಿದೆ. ವೃತ್ತಿಯಲ್ಲಿರುವವರು ಹಾಗೂ ಮಕ್ಕಳಿಗೆ ಬ್ರೇಕ್‌ಫಾಸ್ಟ್ ಸೂಪರ್ ಫಾಸ್ಟ್ ಆಗಿರಬೇಕೆಂಬುದು ಫಾಸ್ಟ್ ಬದುಕಿಗೆ ಒಂದು ಉದಾಹರಣೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಎಗ್ ಚೀಸ್ ರೋಲ್ ರುಚಿಯಾದ ಬ್ರೇಕ್ ಫಾಸ್ಟ್
ತಿಂಡಿ ತಯಾರಿಸಲು ಮತ್ತು ಅದನ್ನು ತಿನ್ನಲು ತೆಗೆದುಕೊಳ್ಳುವ ಸಮಯ ಮಹತ್ವಪೂರ್ಣವಾಗಿರುವುದರಿಂದ ಪ್ರತಿಯೊಂದು ನಿಮಿಷ ಕೂಡ ತುಂಬಾ ಮೌಲ್ಯಯುತವಾಗಿರುತ್ತದೆ.

ಹಾಗಿದ್ದರೆ ಬೆಳಗ್ಗಿನ ತಿಂಡಿಗೆ ಫಾಸ್ಟ್ ಆಗಿ ತಯಾರಾಗುವುದು ಸ್ಯಾಂಡ್‌ವಿಚ್ ಅದರಲ್ಲೂ ಮೊಟ್ಟೆ ಹಾಗೂ ಸಲ್ಮಾಯ್ ಸ್ಯಾಂಡ್‌ವಿಚ್ ಅನ್ನು ಉಪಹಾರಕ್ಕಾಗಿ ತ್ವರಿತವಾಗಿ ತಯಾರಿಸಬಹುದು.
ಸಲ್ಮಾಯ್ ಹಾಗೂ ಮೊಟ್ಟೆ ಬೆರೆತ ಸ್ಯಾಂಡ್‌ವಿಚ್ ಅನ್ನು ನಿಮಿಷದಲ್ಲಿ ಸಿದ್ಧಪಡಿಸಬಹುದು. ಸಲ್ಮಾಯ್ ಬೇಯಿಸಿದ ಮಾಂಸ ಹಾಗೂ ಮೊಟ್ಟೆಯನ್ನು ಸುಲಭವಾಗಿ ಬೇಯಿಸಬಹುದು ಆದ್ದರಿಂದ ಇದನ್ನು ವೇಗವಾಗಿ ತಯಾರಿಸಬಹುದು.
ಹಾಗಿದ್ದರೆ ಇನ್ನೇಕೆ ತಡ, ಪ್ರೊಟೀನ್ ರಿಚ್ ಹಾಗೂ ಕಡಿಮೆ ಕೊಬ್ಬಿರುವ ಬ್ರೇಕ್ ಫಾಸ್ಟ್ ಅನ್ನು ತಯಾರಿಸಿ ಮತ್ತು ಸಮಯ ಉಳಿಸಿ.
ಪ್ರಮಾಣ: 1
ಸಿದ್ಧತಾ ಸಮಯ: 5 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 5 ನಿಮಿಷಗಳು
ಸಾಮಾಗ್ರಿಗಳು:
. ಚಿಕನ್ ಸಲ್ಮಾಯ್ - 4 ತುಂಡುಗಳು
.ಮೊಟ್ಟೆಗಳು - 2
.ಆಲೀವ್ ಆಯಿಲ್ - 1 ಸ್ಪೂನ್
.ಕರಿಮೆಣಸು - 1/2 ಸ್ಪೂನ್
.ಕಡಿಮೆ ಕೊಬ್ಬುಳ್ಳ ಚೀಸ್ - 2 ತುಂಡುಗಳು
.ಬ್ರೌನ್ ಬ್ರೆಡ್ - 4 ತುಂಡುಗಳು
.ಇಂಗ್ಲೀಷ್ ಮಸ್ಟರ್ಡ್ ಸಾಸ್ - 1 ಸ್ಪೂನ್
.ಹಸಿಮೆಣಸು - 2 (ಕತ್ತರಿಸಿದ್ದು)
.ಉಪ್ಪು - ರುಚಿಗೆ ತಕ್ಕಷ್ಟು
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಆರೋಗ್ಯಕರ ಬ್ರೇಕ್ ಫಾಸ್ಟ್ -ಎಗ್ ಸೂಫ್ಲೆ
ಮಾಡುವ ವಿಧಾನ:
1.ಬೆಚ್ಚಗಿನ ನೀರಿನಲ್ಲಿ ಸಲ್ಮಾಯ್ ತುಂಡುಗಳನ್ನು ತೊಳೆಯಿರಿ.
2.ಇದು ಐದು ನಿಮಿಷಗಳನ್ನು ತೆಗೆದುಕೊಳ್ಳಬಹುದು.
3.ಪ್ಯಾನ್‌ನಲ್ಲಿ ಸ್ವಲ್ಪ ಆಲೀವ್ ಆಯಿಲ್‌ನೊಂದಿಗೆ ಸಲ್ಮಾಯ್ ಅನ್ನು ಬೇಯಿಸಿಕೊಳ್ಳಿ ಅಥವಾ ಅದನ್ನು ಬೇಯಿಸದೇ ಹಾಗೆಯೇ ಇಟ್ಟುಕೊಳ್ಳಿ.
4.ಚಪ್ಪಟೆ ಪ್ಯಾನ್‌ನಲ್ಲಿ ಆಲೀವ್ ಆಯಿಲ್ ಅನ್ನು ಬಿಸಿ ಮಾಡಿ; ಅದಕ್ಕೆ ಎರಡು ಮೊಟ್ಟೆಗಳನ್ನು ಒಡೆದು ಹಾಕಿ. ಉಪ್ಪು ಹಾಕಿ ಮತ್ತು ಹಸಿಮೆಣಸು ಸೇರಿಸಿ.
5.ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಹಾಗೂ 2-3 ನಿಮಿಷಗಳ ಕಾಲ ಬೇಯಿಸಿ.
6.ಬ್ರೌನ್ ಬ್ರೆಡ್‌ನ ಎರಡು ತುಂಡುಗಳನ್ನು ತೆಗೆದುಕೊಳ್ಳಿ ಮತ್ತು ಪ್ರತಿಯೊಂದರ ಮೇಲೆ ಚೀಸ್ ಹಾಕಿಕೊಳ್ಳಿ.
7.ಚೀಸ್‌ನ ಮೇಲೆ ಸಲ್ಮಾಯ್‌ಯ ಎರಡು ತುಂಡುಗಳನ್ನಿರಿಸಿ.
8.ಒಡೆದ ಮೊಟ್ಟೆಗಳನ್ನು ವಿಭಾಗಿಸಿ ಎರಡು ಭಾಗಗಳ ಮೇಲೆ ಇರಿಸಿ ಹಾಗೂ ಸಲ್ಮಾಯ್ ಮೇಲೆ ಇದನ್ನಿಡಿ.
9.ಉಪ್ಪು ಹಾಗೂ ಕರಿಮೆಣಸಿನ ಒಗ್ಗರಣೆಯನ್ನು ಮೊಟ್ಟೆಗೆ ಹಾಕಿ. ಮಸ್ಟರ್ಡ್ ಅನ್ನು ಇನ್ನುಳಿದ ಬ್ರೆಡ್ ತುಂಡುಗಳ ಮೇಲೆ ಸವರಿ.



Click it and Unblock the Notifications
