Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಎಗ್ ಚೀಸ್ ರೋಲ್ ರುಚಿಯಾದ ಬ್ರೇಕ್ ಫಾಸ್ಟ್
ದಿನದ ಆರಂಭವನ್ನು ಮೊಟ್ಟೆಯಿಂದ ಮಾಡುವುದು ಆರೋಗ್ಯಕ್ಕೆ ಉತ್ತಮ. ಮೊಟ್ಟೆಯಿಂದ ದೊರೆಯುವ ನೈಸರ್ಗಿಕ ಶಕ್ತಿಯು ನಿಮ್ಮನ್ನು ದಿನವಿಡೀ ಆರೋಗ್ಯಕರವಾಗಿರಿಸುತ್ತದೆ. ಮೊಟ್ಟೆಯನ್ನು ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಮೊಟ್ಟೆಯೊಂದಿಗೆ ಚೀಸ್ ಮತ್ತಷ್ಟು ಶಕ್ತಿಯನ್ನು ನಿಮಗೆ ಒದಗಿಸುತ್ತದೆ.
ಈ ಬೆಳಗ್ಗೆ ಬೋಲ್ಡ್ ಸ್ದೈ ನಿಮ್ಮ ಬ್ರೇಕ್ ಫಾಸ್ಟ್ ಚಿಂತೆ ನಿವಾರಿಸಲು ಎಗ್ ಚೀಸ್ ರೋಲ್ ರೆಸಿಪಿಯನ್ನು ನಿಮಗಾಗಿ ತಂದಿದೆ. ಇದು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಪೌಷ್ಟಿಕಾಂಶಭರಿತವಾದ ತಿಂಡಿ. ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ಬೇಕಾಗುವ ಸಾಮಾಗ್ರಿಗಳು
1. ಮೊಟ್ಟೆ- 2 (ಒಡೆದಿಟ್ಟುಕೊಳ್ಳಿ)
2. ಚೀಸ್- 8 ಸ್ಲೈಸ್
3. ಬ್ರೆಡ್- 8 ಸ್ಲೈಸ್
4. ಈರುಳ್ಳಿ- 1 (ಕತ್ತರಿಸಿಟ್ಟುಕೊಳ್ಳಿ)
5. ಜೋಳದ ಹಿಟ್ಟು- 2 ಟೀಚಮಚ
6. ಶುಂಠಿ- ಸ್ವಲ್ಪ
7. ಖಾರದ ಪುಡಿ- 1/2 ಟೀಚಮಚ
8. ಚಾಟ್ ಮಸಾಲ- 1/2 ಟೀಚಮಚ
9. ಬೆಣ್ಣೆ- 1 ಟೀಚಮಚ
10. ಎಣ್ಣೆ- 2 ಟೀಚಮಚ
11. ಲೆಟಿಸ್ ಎಲೆ- 4
ಮಾಡುವ ವಿಧಾನ
1. ಮೊದಲಿಗೆ ಲೆಟಿಸ್ ಎಲೆಗೆ ಬೆಣ್ಣೆ ಹಚ್ಚಿ ಒಂದು ಕಡೆ ಇಟ್ಟುಕೊಳ್ಳಿ.
2. ಒಂದು ಪಾತ್ರೆಯಲ್ಲಿ ಒಡೆದ ಮೊಟ್ಟೆಯನ್ನು ಹಾಕಿ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿಯನ್ನು ಸೇರಿಸಿ.
3.ಇವೆಲ್ಲವನ್ನೂ ಚೆನ್ನಾಗಿ ಕಲಸಿದ ನಂತರ ಅದಕ್ಕೆ ಚಾಟ್ ಮಸಾಲ ಹಾಕಿ ಒಂದು ಹದ ಬರುವವರೆಗೆ ಕಲಸಿ ಕೊಳ್ಳಿ.
4. ಈಗ ಜೋಳದ ಹಿಟ್ಟನ್ನು ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ನೀರು ಸೇರಿಸಿ ಕಲಸಿಟ್ಟುಕೊಳ್ಳಿ.
5. ಪ್ರತಿ ಸ್ಲೇಸ್ ಬ್ರೇಡ್ಡಿನ ಮೇಲೆ ಚೀಸ್ ಸ್ಲೇಸ್ ಗಳನ್ನು ಇಡಿ.
6. ಈಗ ಮಾಡಿಟ್ಟಿರುವ ಮೊಟ್ಟೆ ಮತ್ತಿತರ ವಸ್ತುಗಳ ಮಿಶ್ರಣವನ್ನು ಈ ಬ್ರೆಡ್ ಸ್ಲೈಸ್ ಗಳ ಮೇಲಿಟ್ಟು ಜೋಳದ ಹಿಟ್ಟನ್ನು ಬಳಸಿ ರೋಲ್ ಮಾಡಿ.
7. ಹೀಗೆ ಮಾಡಿಟ್ಟುಕೊಂಡ ರೋಲ್ ಗಳನ್ನು ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಂಡು ಮಂದ ಉರಿಯಲ್ಲಿಟ್ಟುಕೊಂಡು ರೋಲ್ ಗಳು ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
8. ಕರಿದ ನಂತರ ಅದನ್ನು ಲೆಟಿಸ್ ಎಲೆಗಳೊಂದಿಗೆ ಸೇರಿಸಿಡಿ.
ಎಗ್ ಚೀಸ್ ರೋಲ್ ಬಿಸಿಯಾಗಿದ್ದಾಗಲೇ ತಿನ್ನಬೇಕು. ಇದನ್ನು ಚಟ್ನಿ ಅಥವ ಟೊಮೊಟೊ ಸಾಸ್ ನೊಂದಿಗೆ ತಿನ್ನಲು ಹೆಚ್ಚು ರುಚಿಕರವಾಗಿರುತ್ತದೆ.



Click it and Unblock the Notifications
