Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಆರೋಗ್ಯಕರ ವೆಜಿಟೇಬಲ್ ಮಯೋನೈಸ್ ಸ್ಯಾಂಡ್‌ವಿಚ್!
ಬ್ರೇಕ್‌ಫಾಸ್ಟ್‌ಗಾಗಿ ಆರೋಗ್ಯಕರ ಮತ್ತು ಸರಳ ರೆಸಿಪಿಯನ್ನು ಅರಸುತ್ತಿರುವಿರಾ? ನಿಮಗಾಗಿ ನಾವಿಂದು ಅತಿ ಸರಳವಾದ ರೆಸಿಪಿಯನ್ನು ನೀಡುತ್ತಿದ್ದೇವೆ. ಬೆಳಗ್ಗಿನ ಸಮಯದಲ್ಲಿ ಏನಾದರೂ ವಿಶೇಷವಾದುದನ್ನು ಮಾಡುವುದು ಸ್ವಲ್ಪ ಕಷ್ಟದ ಕೆಲಸವೇ. ಅದರಲ್ಲೂ ನೀವು ಉದ್ಯೋಗದಲ್ಲಿರುವ ಮಹಿಳೆಯಾಗಿದ್ದರೆ ಮತ್ತು ಶಾಲೆಗೆ ಹೋಗುವ ಮಗು ನಿಮ್ಮ ಬಳಿ ಇದ್ದರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗಿನ ಉಪಹಾರಕ್ಕೆ ಎಗ್ ಸಲಾಡ್
ಮಯೋನೈಸ್ ಮನೆಯಲ್ಲಿ ಸದಾ ಲಭ್ಯವಿರುವಂತಹ ಒಂದು ಸಾಮಾಗ್ರಿಯಾಗಿದೆ. ಇದು ತುಂಬಾ ರುಚಿಕರವಾಗಿದ್ದು ತಯಾರಿಸಲು ಸರಳವಾಗಿದೆ. ಹಾಗಾಗಿ ನಿಮ್ಮ ಬ್ರೇಕ್‌ಫಾಸ್ಟ್ ಮೆನುವಿಗಾಗಿ ಸರಳವಾದ ವೆಜಿಟೇಬಲ್ಮಯೋನೈಸ್ ಸ್ಯಾಂಡ್‌ವಿಚ್ ರೆಸಿಪಿಯನ್ನು ಇಲ್ಲಿ ನೀಡುತ್ತಿದ್ದೇವೆ. ಈ ಸ್ಯಾಂಡ್ ವಿಚ್ ತಯಾರಿಸಲು ಸುಲಭ ಹಾಗೂ ಕೊಂಡೊಯ್ಯಲು ತುಂಬಾ ಸುಲಭವಾಗಿದೆ ಮತ್ತು ಇದನ್ನು ತಯಾರಿಸಲು ಹೆಚ್ಚಿನ ಸಮಯವನ್ನು ನೀವು ತೆಗೆದುಕೊಳ್ಳಬೇಕಾಗಿಲ್ಲ.
ಹಾಗಿದ್ದರೆ ಮತ್ತೇಕೆ ತಡ, ಈ ಸರಳವಾದ ಮಯೋನೈಸ್ ಸ್ಯಾಂಡ್‌ವಿಚ್ ರೆಸಿಪಿಯನ್ನು ತಯಾರಿಸಿ ಮತ್ತು ಆರೋಗ್ಯಪೂರ್ಣ ಬ್ರೇಕ್‌ಫಾಸ್ಟ್ ನಿಮ್ಮದಾಗಲಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗ್ಗಿನ ಉಪಹಾರಕ್ಕಾಗಿ ಟೇಸ್ಟೀ ಈರುಳ್ಳಿ ದೋಸೆ
ಪ್ರಮಾಣ: 4 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾಗುವ ಸಮಯ: 10 ನಿಮಿಷಗಳು
ಸಾಮಾಗ್ರಿಗಳು:
.ಬ್ರೆಡ್ ಸ್ಲೈಸ್ - 10
.ಮಯೋನೈಸ್ - 1/2 ಕಪ್
.ಸಿಲೆರಿ - 1 (ತುರಿದದ್ದು)
.ಕ್ಯಾರೇಟ್ - 1 (ತುರಿದದ್ದು)
.ಲೆಟ್ಯೂಸ್ ಎಲೆಗಳು - 5-6
.ಕ್ಯಾಪ್ಸಿಕಂ - 1 (ಚೆನ್ನಾಗಿ ತುಂಡರಿಸಿದ್ದು)
.ಉಪ್ಪು - ರುಚಿಗೆ ತಕ್ಕಷ್ಟು
.ಕಾಳುಮೆಣಸಿನ ಹುಡಿ - 1ಸ್ಪೂನ್
.ಟ್ಯಾಬಸ್ಕೋ ಸಾಸ್ - 1/2 ಸ್ಪೂನ್
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗ್ಗಿನ ರುಚಿಕರ ತಿನಿಸು ವ್ರೇಪ್
ಮಾಡುವ ವಿಧಾನ:
1.ಸಿಲೆರಿ, ಕ್ಯಾಪ್ಸಿಕಂ, ಕ್ಯಾರೇಟ್, ಉಪ್ಪು, ಕಾಳುಮೆಣಸಿನ ಹುಡಿ ಮತ್ತು ಟಾಬಸ್ಕೋ ಸಾಸ್ ಅನ್ನು ಮಯೋನೈಸ್‌ನೊಂದಿಗೆ ಮಿಶ್ರ ಮಾಡಿಕೊಳ್ಳಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
2.ಬ್ರೆಡ್ ಸ್ಲೈಸ್‌ಗಳ ಬದಿಗಳನ್ನು ಕತ್ತರಿಸಿ.
3.ಸ್ಲೈಸ್‌ನ ಮೇಲೆ ಲೆಟ್ಯೂಸ್ ಎಲೆಗಳನ್ನು ಹರಡಿಸಿ.
4.ಲೆಟ್ಯೂಸ್ ಎಲೆಗಳ ಮೇಲೆ ಮಯೋನೈಸ್ ಮಿಶ್ರಣವನ್ನು ಬೇಕಾದಷ್ಟು ಪ್ರಮಾಣದಲ್ಲಿ ಸವರಿ.
5.ಇನ್ನೊಂದು ಬ್ರೆಡ್ ಸ್ಲೈಸ್‌ನೊಂದಿಗೆ ಸ್ಲೈಸ್ ಅನ್ನು ಮುಚ್ಚಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪನ್ನೀರ್ ಸ್ಯಾಂಡ್ ವಿಚ್
6.ಹೆಚ್ಚು ಸ್ಯಾಂಡ್‌ವಿಚ್‌ಗಳನ್ನು ಮಾಡಲು ಈ ವಿಧಾನವನ್ನು ಪುನರಾವರ್ತಿಸಿ.
ನಿಮ್ಮ ತರಕಾರಿ ಮಯೋನೈಸ್ ಸ್ಯಾಂಡ್‌ವಿಚ್ ರೆಸಿಪಿ ಬಡಿಸಲು ಸಿದ್ಧವಾಗಿದೆ.



Click it and Unblock the Notifications
