Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನಿಮ್ಮ ಬಾಯಿಯ ರುಚಿಯನ್ನು ಹೆಚ್ಚಿಸುವ ಗರಿ ಗರಿ ತರಕಾರಿ ದೋಸೆ!
ನಿಮ್ಮ ದಿನ ಯಾವಾಗಲೂ ಸ್ಪೆಶಲ್ ಹಾಗೂ ಸೂಪರ್ ಆಗಿರಬೇಕಾದಲ್ಲಿ ಏನು ಮಾಬೇಕು? ನಿಮ್ಮ ಬೆಳಗ್ಗಿನ ತಿಂಡಿ ಮಸ್ತಾಗಿರಬೇಕು. ಮತ್ತು ವಿಶಿಷ್ಟವಾಗಿರಬೇಕು. ಬೆಳಗ್ಗಿನ ಬ್ರೇಕ್‌ಫಾಸ್ಟ್ ಇಡೀ ದಿನದ ಚಟುವಿಟಿಕೆಗೆ ತುಂಬಾ ಪರಿಣಾಮಕಾರಿ.
ಹಾಗಿದ್ದರೆ ನಿಮ್ಮ ಇಡೀ ದಿನವು ಚಟುವಿಟಕೆ ಸೂಪರ್ ಆಗಿರಬೇಕೆಂಬುದು ನಿಮ್ಮ ಮನದಾಳದ ಆಸೆಯಾಗಿದ್ದರೆ ಇಲ್ಲಿ ನೀಡಿರುವ ಸಿಂಪಲ್ ರೆಸಿಪಿಯನ್ನು ನೀವು ಟ್ರೈ ಮಾಡಲೇಬೇಕು. ಇಂದು ಬೋಲ್ಡ್ ಸ್ಕೈ ನಿಮ್ಮೊಂದಿಗೆ ರುಚಿಯಾಗಿರುವ ಡಿಶ್ ಒಂದನ್ನು ಹಂಚಿಕೊಳ್ಳುತ್ತಿದೆ. ಅದುವೇ ತರಕಾರಿ ದೋಸೆ. ಗರಿಗರಿಯಾಗಿರುವ ಈ ದೋಸೆ ನಿಮ್ಮ ಸ್ವಾದದ ಮಟ್ಟವನ್ನು ಏರಿಸುತ್ತದೆ
ಇದಕ್ಕೆ ಬೇಕಾಗಿರುವುದು ವಿವಿಧ ತರಕಾರಿಗಳು ಮತ್ತು ದೋಸೆ ಹಿಟ್ಟು. ತರಕಾರಿಯನ್ನು ಬೇಯಿಸಿ ಒಂದೆಡೆ ಇಟ್ಟುಕೊಳ್ಳಬೇಕು ಮತ್ತು ಬೆಂದ ದೋಸೆಯ ಮೇಲೆ ಈ ತರಕಾರಿಗಳನ್ನು ಇಟ್ಟು ಟೇಸ್ಟೀ ದೋಸೆಯನ್ನು ಸವಿಯಬಹುದು.

ನೀರು ದೋಸೆಯನ್ನು ಚಿಕನ್ ಸುಕ್ಕಾ ಜೊತೆ ಸವಿಯಿರಿ!
ಪ್ರಮಾಣ: 1
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 5 ನಿಮಿಷಗಳು
ಸಾಮಾಗ್ರಿಗಳು:
*ದೋಸೆ ಹಿಟ್ಟು - 1 ಕಪ್
*ಸಾಸಿವೆ - 1/2 ಸ್ಪೂನ್
*ಕ್ಯಾರೇಟ್ - 50 ಗ್ರಾಮ್ಸ್ (ಕತ್ತರಿಸಿದ್ದು)
*ಬೆಲ್ ಪೆಪ್ಪರ್ - 1/2 (ಕತ್ತರಿಸಿದ್ದು)
*ಬಟಾಣಿ - ಮುಷ್ಟಿಯಷ್ಟು
*ಟೊಮೇಟೊ - 1/2 (ಕತ್ತರಿಸಿದ್ದು)
*ಹಸಿಮೆಣಸು - 2 (ಕತ್ತರಿಸಿದ್ದು)
*ಎಣ್ಣೆ - 1 ಸ್ಪೂನ್
*ಕರಿಬೇವು - 2 ಎಸಳು (ಕತ್ತರಿಸಿದ್ದು)
*ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
*ಮೊದಲಿಗೆ ತರಕಾರಿಗಳನ್ನು ಬೇಯಿಸಿಕೊಳ್ಳಿ; ಬಟಾಣಿ ಹಾಗೂ ಬೆಲ್ ಪೆಪ್ಪರ್ ಅನ್ನು ಕುಕ್ಕರ್‌ನಲ್ಲಿ 1 ವಿಶಲ್ ಬರುವವರೆಗೆ ಬೇಯಿಸಿ
ತರಕಾರಿಯಲ್ಲಿರುವ ನೀರನ್ನು ಬಸಿದುಕೊಳ್ಳಿ
*ಪ್ಯಾನ್‌ನಲ್ಲಿ 1/2 ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಹಾಗೂ ಇದಕ್ಕೆ ಸಾಸಿವೆ ಮತ್ತು ಹಸಿಮೆಣಸಿನ ಒಗ್ಗರಣೆ ನೀಡಿ
*ತರಕಾರಿಯನ್ನು ಈ ಒಗ್ಗರಣೆಗೆ ಸೇರಿಸಿ ಮತ್ತು ಚೆನ್ನಾಗಿ ತಿರುವಿಕೊಳ್ಳಿ
*ಇದನ್ನು ದೋಸೆ ಹಿಟ್ಟಿಗೆ ಸೇರಿಸಿ. ಟೊಮೇಟೊ ಮತ್ತು ಕರಿಬೇವಿನೆಸಳನ್ನು ಹಿಟ್ಟಿಗೆ ಸೇರಿಸಿ
*ಇನ್ನು ದೋಸೆ ಕೈಲನ್ನು ಬಳಸಿ ಎರೆಯಿರಿ
*ದೋಸೆ ಬೆಂದೊಡನೆ ಗರಿ ಗರಿಯಾಗಿ ದೋಸೆಯನ್ನು ಪ್ಯಾನ್‌ನಿಂದ ಇಳಿಸಿಕೊಳ್ಳಿ.
ದೋಸೆಯನ್ನು ಸಾಂಬಾರು ಚಟ್ನಿ ಅಥವಾ ಕೆಚಪ್ ಬಳಸಿ ಸೇವಿಸಿ. ಇದೊಂದು ನಿಮಗೆ ಯಮ್ಮೀ ಬ್ರೇಕ್‌ಫಾಸ್ಟ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications
