Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚೈನೀಸ್ ಟೊಮೆಟೊ ಎಗ್ ರೈಸ್
ಯಾವತ್ತೂ ಪುಳಿಯೊಗರೆ, ಚಿತ್ರಾನ್ನ, ಪುಳಿಯೊಗರೆ ಈ ಅಡುಗೆಗಳನ್ನು ತಿಂದು ಬೇಜಾರಾಗಿದೆಯೇ ಹಾಗಾದರೆ ಟೊಮೆಟೊ ಎಗ್ ರೈಸ್ ಟ್ರೈ ಮಾಡಿ. ಇದು ಚೈನೀಸ್ ಶೈಲಿಯ ಅಡುಗೆಯಾಗಿದೆ. ಈ ಚೈನೀಸ್ ಅಡುಗೆಯನ್ನು ನಮ್ಮ ರುಚಿಗೆ ತಕ್ಕಂತೆ ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಇದನ್ನು ಅರ್ಧ ಗಂಟೆಯ ಒಳಗೆ ಮಾಡಬುದಾದರಿಂದ ಬ್ರೇಕ್ ಫಾಸ್ಟ್ ಗೆ ಸೂಕ್ತವಾದ ಅಡುಗೆಯಾಗಿದೆ. ಈ ಅಡುಗೆಯನ್ನು ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

ಸಾಮಾಗ್ರಿಗಳು
ಟೊಮೆಟೊ 2(ಕತ್ತರಿಸಿದ್ದು)
ಟೊಮೆಟೊ ಕೆಚಪ್ 4 ಚಮಚ
ಮೊಟ್ಟೆ 4(ಬೇಯಿಸಿ, ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ 2
ಹಸಿ ಮೊಟ್ಟೆ 2
ಬಾಸುಮತಿ ಅಕ್ಕಿ 2 ಕಪ್
ಎಣ್ಣೆ 3 ಚಮಚ
ಬೆಳ್ಳುಳ್ಳಿ2 ಚಮಚ
ರುಚಿಗೆ ತಕ್ಕ ಉಪ್ಪು
ಕರಿ ಮೆಣಸಿನ ಪುಡಿ ಅರ್ಧ ಚಮಚ
ಚಿಕ್ಕ ಈರುಳ್ಳಿ 8
ಸೋಯಾ ಸಾಸ್ 2 ಚಮಚ
ಜೋಳದ ಪುಡಿ 2 ಚಮಚ
ವಿನಿಗರ್
ಕೊತ್ತಂಬರಿ ಸ್ವಲ್ಪ
ತಯಾರಿಸುವ ವಿಧಾನ:
* ಅನ್ನವನ್ನು ಮಾಡಿಡಬೇಕು.
* ಎಣ್ಣೆಯನ್ನು ಸ್ವಲ್ಪ ದೊಡ್ಡ ಬಾಣಲೆಗೆ ಹಾಕಿ ಅದರಲ್ಲಿ ಬೆಳ್ಳುಳ್ಳಿ ಹಾಗೂ ಚಿಕ್ಕ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ , ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
* ಈಗ ರುಚಿಗೆ ಉಪ್ಪು, ಕರಿ ಮೆಣಸಿನ ಪುಡಿ 2 ನಿಮಿಷ ಹುರಿಯಿರಿ, ನಂತರ ಹಸಿ ಮೊಟ್ಟೆಯನ್ನು ಹಾಕಿ ಫ್ರೈ ಮಾಡಿ.
* ನಂತರ ಮೊಟ್ಟೆಯ ಚೂರುಗಳನ್ನು ಹಾಕಿ. ಸೌಟ್ ನಿಂದ ಆಡಿಸಿ.
* ಇದೇ ಸಮಯದಲ್ಲಿ ಜೋಳದ ಹಿಟ್ಟಿಗೆ ವಿನಿಗರ್ 1ಚಮಚ ಹಾಕಿ ಸ್ಚಲ್ಪ ನೀರು ಹಾಕಿ ಮಿಶ್ರ ಮಾಡಿ, ನಂತರ ಇದನ್ನು ಅನ್ನದ ಜೊತೆ ಹಾಕಿ ಮಿಶ್ರಣ ಮಾಡಿ. ನಂತರ ಟೊಮೆಟೊ ಕೆಚಪ್, ಸೋಯಾ ಸಾಸ್ ಹಾಕಿ, ಸೌಟ್ ನಿಂದ ಎರಡು ನಿಮಿಷ ಆಡಿಸಿ ನಂತರ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚೈನೀಸ್ ಟೊಮೆಟೊ ಎಗ್ ರೈಸ್ ರೆಡಿ.



Click it and Unblock the Notifications
