Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರುಚಿಯಾದ ವೆಜಿಟೇಬಲ್ ಚೀಸ್ ಸ್ಯಾಂಡ್‌ವಿಚ್!
ಸ್ಯಾಂಡ್‌ವಿಚ್ ಅನ್ನು ಸುಮಾರಾಗಿ ಎಲ್ಲರ ಮನೆಯಲ್ಲಿ ತಯಾರಿಸುತ್ತಾರೆ. ರುಚಿಕರವಾದ ಬ್ರೆಡ್ ರೆಸಿಪಿಯನ್ನು ವಿಧ ವಿಧವಾಗಿ ತಯಾರಿಸಿ ಬೆಳಗ್ಗಿನ ಬ್ರೇಕ್‌ಫಾಸ್ಟ್ ಅನ್ನು ವೈವಿಧ್ಯಮಯವನ್ನಾಗಿಸುತ್ತಾರೆ. ಟೋಸ್ಟ್‌ನಿಂದ ಹಿಡಿದು ಸ್ಯಾಂಡ್‌ವಿಚ್‌ವರೆಗೆ ನಿಮ್ಮ ಬ್ರೇಕ್‌ಫಾಸ್ಟ್ ಅನ್ನು ನೀವು ಯಮ್ಮಿಯನ್ನಾಗಿ ಮಾಡಿಕೊಳ್ಳಬಹುದು.
ಸ್ಯಾಂಡ್‌ವಿಚ್ ಅನ್ನು ಕಡಿಮೆ ಸಾಮಾಗ್ರಿಯೊಂದಿಗೆ ಸರಳವಾಗಿ ತಯಾರಿಸಬಹುದು. ಉದಾಹರಣೆಗೆ ರುಚಿಕರವಾದ ಬ್ರೇಕ್‌ಫಾಸ್ಟ್ ರೆಸಿಪಿ ತಯಾರಿಸಲು ಮೊಟ್ಟೆ ಅಥವಾ ಆಲೂಗಡ್ಡೆ ಮಿಶ್ರಣವನ್ನು ಸೇರಿಸಬಹುದು.

ಅದರಲ್ಲೂ ವೆಜಿಟೇಬಲ್ ಸ್ಯಾಂಡ್‌ವಿಚ್ ತುಂಬಾ ರುಚಿಯಾದ ಒಂದು ಖಾದ್ಯವಾಗಿದೆ. ಇಲ್ಲಿದೆ ನಿಮಿಷಗಳಲ್ಲಿ ತಯಾರುಮಾಡಬಹುದಾದ ವೆಜಿಟೇಬಲ್ ಸ್ಯಾಂಡ್‌ವಿಚ್. ಇದರಲ್ಲಿ ಬಳಸಲಾಗುವ ಮಸಾಲೆ ಹಾಗೂ ಕರಗುವ ಚೀಸ್ ಸ್ಯಾಂಡ್‌ವಿಚ್‌ಗೆ ವಿಶೇಷ ರುಚಿ ನೀಡಿ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಇಲ್ಲಿದೆ ಮಾಡುವ ವಿಧಾನ ಜಸ್ಟ್ ನೋಡಿ...
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕರ ವೆಜಿಟೇಬಲ್ ಮಯೋನೈಸ್ ಸ್ಯಾಂಡ್‌ವಿಚ್!
ಪ್ರಮಾಣ: 3-4
ಸಿದ್ಧತಾ ಸಮಯ: 15 - 20 ನಿಮಿಷಗಳು
ಸಾಮಾಗ್ರಿಗಳು:
1.ಬಿಳಿ ಬ್ರೆಡ್ ತುಂಡುಗಳು - 4-8
2.ಚೀಸ್ ಸ್ಲೈಸ್‌ಗಳು - 4
3.ಈರುಳ್ಳಿ - 1 (ಕತ್ತರಿಸಿದ್ದು)
4.ಕ್ಯಾಪ್ಸಿಕಂ - 1/2 (ಕತ್ತರಿಸಿದ್ದು)
5.ಟೊಮೇಟೋ - 1 (ಕತ್ತರಿಸಿದ್ದು)
6.ಹಸಿಮೆಣಸು - 2 (ಕತ್ತರಿಸಿದ್ದು)
7.ಮೆಣಸಿನ ಹುಡಿ - 1/2 ಸ್ಪೂನ್
8.ಚಾಟ್ ಮಸಾಲಾ - 1 ಸ್ಪೂನ್
9.ಲಿಂಬೆ ರಸ - 1 ಸ್ಪೂನ್
10.ಉಪ್ಪು - ರುಚಿಗೆ ತಕ್ಕಷ್ಟು
11.ಬೆಣ್ಣೆ - 1 ಸ್ಪೂನ್
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗಿನ ಉಪಹಾರಕ್ಕೆ ಎಗ್ ಸಲಾಡ್
ಮಾಡುವ ವಿಧಾನ:
1. ಪಾತ್ರೆಯಲ್ಲಿ ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು ಮತ್ತು ಟೊಮೇಟೋವನ್ನು ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ.
2.ಮೆಣಸಿನ ಹುಡಿ, ಲಿಂಬೆ ರಸ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ಪಕ್ಕದಲ್ಲಿಡಿ.
3.ಬ್ರೆಡ್ ಬದಿಗಳನ್ನು ಕತ್ತರಿಸಿ. ಚೀಸ್‌ನ ಒಂದು ಸ್ಲೈಸ್ ಅನ್ನು ತೆಗೆದುಕೊಂಡು ಬ್ರೆಡ್ ಮೇಲೆ ಹರಡಿ.
4.ಚಟ್‌ಪಟಾ ವೆಜಿಟೇಬಲ್ ಮಿಕ್ಸ್ ಅನ್ನು ಸೇರಿಸಿ ಮತ್ತು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ.
5.ಇದೀಗ ಬ್ರೆಡ್‌ನ ಸುತ್ತಲೂ ಬೆಣ್ಣೆ ಸವರಿ ಗ್ರಿಡ್‌ನಲ್ಲಿಡಿ. ಉಳಿದ ಬ್ರೆಡ್ ಸ್ಲೈಸ್‌ಗೆ ಇದೇ ವಿಧಾನವನ್ನು ಅನುಸರಿಸಿ.
ಬಿಸಿ ಬಿಸಿಯಾದ ಚೀಸ್ ಸ್ಯಾಂಡ್‌ವಿಚ್ ಅನ್ನು ಟೊಮೇಟೋ ಕೆಚಪ್‌ನೊಂದಿಗೆ ಸವಿಯಲು ನೀಡಿ.



Click it and Unblock the Notifications
