Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕ್ಯಾಪ್ಸಿಕಂ ಚೀಸ್ ಪರೋಟ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
* ಮೈದಾ 3-4 ಕಪ್
* ದುಂಡು ಮೆಣಸಿನ ಕಾಯಿ 2 (ಕ್ಯಾಪ್ಸಿಕಂ)
* ಕತ್ತರಿಸಿದ ಈರಳ್ಳಿ 1
* ಹಸಿಮೆಣಸಿನ ಕಾಯಿ 3-4(ಕತ್ತರಿಸಿದ್ದು)
* ಗರಂ ಮಸಾಲ ಅರ್ಧ ಚಮಚ
* ಜೀರಿಗೆ ಅರ್ಧ ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
* ಅರಿಶಿಣ ಪುಡಿ 1 ಚಮಚ
* ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕ ಉಪ್ಪು
* ಎಣ್ಣೆ
* ಅಡುಗೆ ಸೋಡಾ
* ಚೀಸ್ 1 ಕಪ್ (ತುರಿದ ಚೀಸ್)
ತಯಾರಿಸುವ ವಿಧಾನ:
1. ಮೈದಾವನ್ನು ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಕಿ ಪರೋಟಕ್ಕೆ ಕಲೆಸುವ ಹದದಲ್ಲಿ ಕಲೆಸಬೇಕು. ಹೀಗೆ ಕಲೆಸುವಾಗ ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ. ನಂತರ ಮಸ್ಲೀನ್ ಬಟ್ಟೆಯನ್ನು ನೆನೆಸಿ ಅದರಿಂದ ಬಟ್ಟೆ ಸುತ್ತಿ ಇಡಬೇಕು.
2. ನಂತರ ಬಾಣಲೆಯನ್ನು ಬಿಸಿ ಮಾಡಿ ಎಣ್ಣೆ ಹಾಕಿ , ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ ನಂತರ ಈರುಳ್ಳಿ ಹಾಕಿ ಈರುಳ್ಳಿ ಕಂದುಬಣ್ಣ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ ನಂತರ ಕ್ಯಾಪ್ಸಿಕಂ ಮೆತ್ತಗಾಗುವವರೆಗೆ ಹುರಿಯಬೇಕು. ಈ ರೀತಿ ಬೇಯಿಸುವಾಗ ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿ ಇಡಬೇಕು. ನಂತರ ಕತ್ತರಿಸಿದ ದುಂಡು ಮೆಣಸಿನ ಕಾಯಿ ಹಾಕಿ ಮಿಶ್ರ ಮಾಡಬೇಕು. ನಂತರ ಗರಂ ಮಸಾಲ, ಕೆಂಪು ಮೆಣಸಿನ ಪುಡಿಯನ್ನು ಬೇಯಿಸಿದ ಕ್ಯಾಪ್ಸಿಕಂಗೆ ಹಾಕಿ ಮಿಶ್ರ ಮಾಡಿ ಒಂದು ನಿಮಿಷದವರೆಗೆ ಬಿಸಿ ಮಾಡಿ. ನಂತರ ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ.
3. ಈ ಕ್ಯಾಪ್ಸಿಕಂ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿಟ್ಟು ಕೊಳ್ಳಬೇಕು.
4. ಈಗ ಪರೋಟಕ್ಕೆ ಕಲೆಸಿದ್ದರಿಂದ ಚಿಕ್ಕ ಉಂಡೆ ಕಟ್ಟಿ (ಉಳಿದ ಮಿಶ್ರಣದಿಂದ ಪರೋಟ ಮಾಡಲು ಚಿಕ್ಕ ಗಾತ್ರದಲ್ಲಿ ಉಂಡೆ ಕಟ್ಟಿ ಇಡಿ) ಅದರಿಂದ ಪರೋಟಕ್ಕೆ ಲಟ್ಟಿಸಿ ಅದರ ಮೇಲೆ ಈ ಕ್ಯಾಪ್ಸಿಕಂ ಮಸಾಲ ಮತ್ತು ಚೀಸ್ ಹರಡಿ ನಂತರ ಮತ್ತೊಂದು ತೆಳು ಪರೋಟ ಮಾಡಿ ಮಸಾಲೆ ಹಾಕಿರುವ ಪರೋಟದ ಮೇಲೆ ಹಾಕಿ ಈ ಪರೋಟದ ತುದಿಯನ್ನು ಕೈಯಿಂದ ಪ್ರೆಸ್ ಮಾಡಿ ಮುಚ್ಚಬೇಕು.
5. ಈಗ ತವಾ ಬಿಸಿ ಮಾಡಿ ಅದರಲ್ಲಿ ಒಂದು ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಈ ಪರೋಟ ಹಾಕಿ, ಪರೋಟದ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಬೇಕು. ಪರೋಟ ಕಂದು ಬಣ್ಣ ಬರುವಾಗ ತೆಗೆದರೆ ರುಚಿಕರವಾದ ಕ್ಯಾಪ್ಸಿಕಂ ಚೀಸ್ ಪರೋಟ ರೆಡಿ.



Click it and Unblock the Notifications
