Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕ್ಯಾಬೇಜ್ ರವೆ ಉಪ್ಪಿಟ್ಟು
ಕ್ಯಾಬೇಜ್ ಹಾಕಿ ಮಾಡುವ ಈ ರವೆ ಉಪ್ಪಿಟ್ಟು ರುಚಿಕರ ಮಾತ್ರವಲ್ಲ, ಆರೋಗ್ಯಕರ ಕೂಡ ಹೌದು. ಅಲ್ಲದೆ ಕ್ಯಾಬೇಜ್ ನಲ್ಲಿ ಗರ್ಭಿಣಿಯರಿಗೆ ಅವಶ್ಯಕವಾದ ಪೋಷಕಾಂಶ ಮತ್ತು ವಿಟಮಿನ್ಸ್ ಇರುವುದರಿಂದ ಗರ್ಭಿಣಿಯರು ತಮ್ಮ ಡಯಟ್ ನಲ್ಲಿ ಸೇರಿಸಬೇಕಾದ ಆಹಾರ ಇದಾಗಿದೆ.
ಇದನ್ನು ಎಣ್ಣೆ ಬದಲು ತುಪ್ಪ ಹಾಕಿ ಮಾಡಿದರೆ ಮತ್ತಷ್ಟು ರುಚಿಕರ. ಬನ್ನಿ ಕ್ಯಾಬೇಜ್ ಉಪ್ಪಿಟ್ಟು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ರವೆ 1 ಕಪ್
ಸಾಸಿವೆ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಉದ್ದಿನ ಬೇಳೆ ಅರ್ಧ ಚಮಚ
ಕಡಲೆ ಬೇಳೆ ಅರ್ಧ ಚಮಚ
ಒಣ ಮೆಣಸು 3
ಸ್ವಲ್ಪ ಕರಿಬೇವಿನ ಎಲೆ
ಕ್ಯಾಬೇಜ್(1/4 ಕಪ್)
ಟೊಮೆಟೊ 1
ಕ್ಯಾರೆಟ್ 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಗೋಡಂಬಿ 5-6 (ಚಿಕ್ಕ ಪೀಸ್ ಮಾಡಿದ್ದು)
ಎಣ್ಣೆ ಅಥವಾ ತುಪ್ಪ 2 ಚಮಚ
ರುಚಿಗೆ ತಕ್ಕ ಉಪ್ಪು
ಸಲಹೆ: ತುಪ್ಪದಲ್ಲಿ ಮಾಡಿದರೆ ಹೆಚ್ಚು ರುಚಿಕರ.
ತಯಾರಿಸುವ ವಿಧಾನ:
* ಮೊದಲು ಬಾಣಲೆಗೆ ಹಾಕಿ ರವೆಯನ್ನು ಫ್ರೈ ಮಾಡಿ ಇಡಿ.
* ನಂತರ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಉದ್ದಿನಬೇಳೆ, ಕಡಲೆಬೇಳೆ, ಜೀರಿಗೆ, ಕರಿ ಬೇವಿನ ಎಲೆ, ಒಣ ಮೆಣಸು ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೊಂದು ನಿಮಿಷ ಫ್ರೈ ಮಾಡಿ.
* ನಂತರ ಕತ್ತರಿಸಿದ ಕ್ಯಾಬೇಜ್, ಟೊಮೆಟೊ, ಕ್ಯಾರೆಟ್ ಹಾಕಿ 5-7 ನಿಮಿಷ ಫ್ರೈ ಮಾಡಿ, ನಂತರ ಗೋಡಂಬಿ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ, ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕುದಿಸಿ, ನೀರು ಕುದಿ ಬರುವಾಗ ರವೆಯನ್ನು ನಿಧಾನವಾಗಿ ಹಾಕಿ, ರವೆ ಹಾಕುವಾಗ ಸೌಟ್ ನಿಂದ ತಿರುಗಿಸುತ್ತಾ ಇದ್ದರೆ ರವೆ ಗಂಟು-ಗಂಟಾಗುವುದನ್ನು ತಡೆಯಬಹುದು. ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿದರೆ ಕ್ಯಾಬೇಜ್ ರವೆ ಉಪ್ಪಿಟ್ಟು ರೆಡಿ.



Click it and Unblock the Notifications
