Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಲೂ ಪ್ಯಾಜ್ ಪರಾಟ
ಉತ್ತರ ಭಾರತೀಯರಲ್ಲಿ ಪರಾಟ ಅತಿ ಹೆಚ್ಚು ಇಷ್ಟಪಟ್ಟು ಮಾಡುವ ತಿಂಡಿ. ಮಾಂಸಾಹಾರಿಗಳು ಮತ್ತು ಸಸ್ಯಾಹಾರಿಗಳು ಇಬ್ಬರೂ ಇದನ್ನು ಮಾಡುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದಂತಿರುತ್ತದೆ. ಇದನ್ನು ಗೋಧಿ ಹಿಟ್ಟು ಬಳಸಿ ತಯಾರು ಮಾಡುತ್ತಾರೆ.
ಹಲವು ರೀತಿಯ ಪರೋಟಗಳನ್ನು ಮಾಡಬಹುದು. ಪರೋಟಗಳ ಒಳ ಹೂರಣ ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಹೆಚ್ಚು ಮಂದಿ ಇಷ್ಟಪಡುವುದು ಆಲೂ ಪರೋಟ. ಇಲ್ಲಿದೆ ನೋಡಿ ಆಲೂ ಪರೋಟ ಮಾಡುವ ವಿಧಾನ.

1. ಆಲೂಗಡ್ಡೆ- 3-4 (ಕತ್ತರಿಸಿಕೊಳ್ಳಿ)
2. ಈರುಳ್ಳಿ- 2-3 (ಕತ್ತರಿಸಿಕೊಳ್ಳಿ)
3. ಅರಿಶಿಣ ಪುಡಿ- 1 ಟೀಚಮಚ
4. ಅಚ್ಚಖಾರದ ಪುಡಿ- 1 ಟೀಚಮಚ
5. ಜೀರಿಗೆ- 1/2 ಚಮಚ
6. ಉಪ್ಪು- ರುಚಿಗೆ ತಕ್ಕಷ್ಟು
7. ಎಣ್ಣೆ- 1/2 ಕಪ್
8. ಗೋಧಿ ಹಿಟ್ಟು- 1 1/2 ಕಪ್
9. ನೀರು
ಮಾಡುವ ವಿಧಾನ
1. ಆಲೂಗಡ್ಡೆಯನ್ನು ಕುಕ್ಕರಿನಲ್ಲಿಟ್ಟು ಬೇಯಿಸಿಕೊಳ್ಳಿ.
2. ಗೋಧಿ ಹಿಟ್ಟನ್ನು ಕಲಸಿ ನೆನೆಯಲು ಬಿಡಿ.
3. ಬಾಣಲಿಯಲ್ಲಿ ಎಣ್ಣೆಯನ್ನು ಹಾಕಿ ಕಾದ ನಂತರ ಜೀರಿಗೆ ಹಾಕಿ.
4. ನಂತರ ಇದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದಕ್ಕೆ ಉಪ್ಪು ಮತ್ತು ಅರಿಶಿಣ ಪುಡಿ ಸೇರಿಸಿ.
5. ಬೇಯಿಸಿಕೊಂಡ ಆಲೂಗಡ್ಡೆಯನ್ನು ಚೆನ್ನಾಗಿ ಪುಡಿಮಾಡಿ ಇದರೊಂದಿಗೆ ಸೇರಿಸಿ.
6.ಕಲಸಿಟ್ಟ ಗೋಧಿಯ ಹಿಟ್ಟನ್ನು ಉಂಡೆಗಳಾಗಿ ಮಾಡಿಕೊಂಡು ಅದರೊಳಗೆ ಈ ಹೂರಣವನ್ನು ಇಟ್ಟು ಚಪಾತಿಯಂತೆ ಲಟ್ಟಿಸಿಕೊಳ್ಳಿ.
7. ನಂತರ ಹೆಂಚಿನ ಮೇಲೆ ಎಣ್ಣೆ ಹಾಕಿ ಎರಡೂ ಬದಿಯಲ್ಲೂ ತಿರುವಿ ಹಾಕಿ ಸುಡಿ.
ಆಲೂ ಪರಾಟವನ್ನು ದಾಲ್ ಅಥವ ಮೊಸರು ಅಥವ ಮಾವಿನಕಾಯಿ ಉಪ್ಪಿನಕಾಯಿಯೊಂದಿಗೆ ಬಡಿಸಿ.



Click it and Unblock the Notifications
