Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆಲೂ ಮಟರ್ ಪರೋಟದ ರೆಸಿಪಿ
ಚಪಾತಿ ಸಾಮಾನ್ಯವಾದ ಅಡುಗೆಯಾಗಿದೆ. ಆದರೆ ಅದಕ್ಕೇನಾದರೂ ಸೇರಿಸಿ ಮಾಡಿದರೆ ವಿಶೇಷ ಅಡುಗೆಯಾಗುತ್ತದೆ. ಆಲೂ ಮಟರ್ ಪರೋಟ ತಿನ್ನಲು ತುಂಬಾ ರುಚಿಕರವಾಗಿದ್ದು, ಇದನ್ನು ಮಾಡುವುದು ಕೂಡ ಸುಲಭ.
ಈ ಆಲೂ ಮಟರ್ ಪರೋಟವನ್ನು ಮಾಡುವ ವಿಧಾನ ಸರಳವಾಗಿದ್ದು ರ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಆಲೂಗೆಡ್ಡೆ 2 (ಬೇಯಿಸಿದ್ದು)
* ಹಸಿರು ಬಟಾಣಿ 1 ಕಪ್ (ಬೇಯಿಸಿದ್ದು)
* ರುಚಿಗೆ ತಕ್ಕ ಉಪ್ಪು
* ಈರುಳ್ಳಿ 1 (ಕತ್ತರಿಸಿದ್ದು)
* ಶುಂಠಿ ಪೇಸ್ಟ್ 1 ಚಮಚ
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಗರಂ ಮಸಾಲ 2 ಚಮಚ
* ಹಸಿ ಮೆಣಸಿನಕಾಯಿ 2
* ಅರಿಶಿಣ ಪುಡಿ ಅರ್ಧ ಚಮಚ
* ಎಣ್ಣೆ
* ರುಚಿಗೆ ತಕ್ಕ ಉಪ್ಪು
ಇತರ ಸಾಮಾಗ್ರಿಗಳು:
ಚಪಾತಿಗೆ ಬೇಕಾಗುವ ಸಾಮಾಗ್ರಿಗಳು
ತಯಾರಿಸುವ ವಿಧಾನ:
* ಚಪಾತಿಗೆ ತಕ್ಕ ಹಿಟ್ಟನ್ನು ಕಲೆಸಬೇಕು.
* ಬಾಣಲೆಯಲ್ಲಿ ಎಣ್ಣೆ ಹಾಕಿ ಎಣ್ಣೆಯನ್ನು ಬಿಸಿ ಮಾಡಬೇಕು. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ 2 ನಿಮಿಷ ಬಿಸಿ ಮಾಡಬೇಕು.
* ನಂತರ ಇದಕ್ಕೆ ಬೇಯಿಸಿ ಹಿಸುಕಿದ ಆಲೂಗೆಡ್ಡೆ ಮತ್ತು ಬಟಾಣಿ ಹಾಕಿ ಅರಿಶಿಣ ಪುಡಿ ಸೇರಿಸಿ ಮಿಶ್ರಣ ಮಾಡಬೇಕು. ನಂತರ ಗರಂ ಮಸಾಲ ಹಾಕಿ 2 ನಿಮಿಷ ಸೌಟ್ ನಿಂದ ತಿರುಗಿಸುತ್ತಾ ಹುರಿಯಬೇಕು. ನಂತರ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ತಣ್ಣಗಾಗಲು ಇಡಬೇಕು.
* ಈಗ ಚಪಾತಿಗೆ ತಟ್ಟಿ ಅದರ ಮಧ್ಯದಲ್ಲಿ ಸ್ವಲ್ಪ ಮಿಶ್ರಣವನ್ನು ಹಾಕಿ ಮಡಚಿ ಮತ್ತೊಮ್ಮೆ ತಟ್ಟಬೇಕು.
* ತವಾವನ್ನು ಉರಿಯಲ್ಲಿಟ್ಟು ಅದರಲ್ಲಿ ಎಣ್ಣೆಯನ್ನು ಉಜ್ಜಿ. ನಂತರ ತಟ್ಟಿದ ಚಪಾತಿಯನ್ನು ಇದರಲ್ಲಿ ಹಾಕಿ ಬೇಯಿಸಿದರೆ ಆಲೂ ಮಟರ್ ಪರೋಟ ರೆಡಿ.



Click it and Unblock the Notifications
