Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆಚಾರಿ ಪನ್ನೀರ್ ಪಲಾವ್ ರೆಸಿಪಿ
ಪಲಾವ್ ಅನ್ನು ಒಂದೇ ರುಚಿಯಲ್ಲಿ ಮಾಡುವ ಬದಲು ಈ ಆಚಾರಿ ಪಲಾವ್ ಟ್ರೈ ಮಾಡಿ ನೋಡಿ. ಬಾಸುಮತಿ ಅಕ್ಕಿ ಮತ್ತು ಪನ್ನೀರ್ ಹಾಕಿ ತಯಾರಿಸುವ ಈ ಆಚಾರಿ ಪನ್ನೀರ್ ತಿನ್ನಲು ಸ್ವಾದಿಷ್ಟವಾಗಿರುತ್ತದೆ. ಸಾಮಾನ್ಯವಾಗಿ ಪಲಾವ್ ಮಾಡುವಾಗ ಅನ್ನ ಹಾಗೂ ಪಲಾವ್ ಸಾಮಾಗ್ರಿಗಳನ್ನು ಜೊತೆಯಲ್ಲಿ ಹಾಕಿ ತಯಾರಿಸುತ್ತೇವೆ.
ಈ ಪಲಾವ್ ಮಾಡುವಾಗ ಅನ್ನವನ್ನು ಸಪರೇಟ್ ಮಾಡಿ ನಂತರ ತಯಾರಿಸಲಾಗುವುದು. ಆಚಾರಿ ಪಲಾವ್ ಮಾಡುವ ರೆಸಿಪಿ ಈ ಕೆಳಗೆ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
ಬಾಸುಮತಿ ಅಕ್ಕಿ 2 ಕಪ್
ಬೇಯಿಸಿದ ಬಟಾಣಿ ಮತ್ತು ತರಕಾರಿ (1/4 ಕಪ್)
ಚಕ್ಕೆ 1
ಏಲಕ್ಕಿ 2
ಲವಂಗ 2
ಚಿಟಿಕೆಯಷ್ಟು ಕೇಸರಿ
ದೊಡ್ಡ ಜೀರಿಗೆ ಅರ್ಧ ಚಮಚ
ಹಾಲು 1 ಚಮಚ
ಪಲಾವ್ ಎಲೆ 1
ತುಪ್ಪ3 ಚಮಚ
ರುಚಿಗೆ ತಕ್ಕ ಉಪ್ಪು
ಆಚಾರಿ ತಯಾರಿಕೆಗೆ
ಪನ್ನೀರ್ 2 ಕಪ್
ಮೊಸರು ಅರ್ಧ ಕಪ್
ಅರಿಶಿಣ ಪುಡಿ ಅರ್ಧ ಚಮಚ
ಹಸಿ ಮೆಣಸಿನಕಾಯಿ ಪೇಸ್ಟ್ 1 ಚಮಚ
ಮೆಂತೆ 1 ಚಮಚ
ಜೀರಿಗೆ 1 ಚಮಚ
ಎಣ್ಣೆ 1 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಅಕ್ಕಿಯನ್ನು ಉದುರು-ಉದುರಾಗಿ ಇರುವಂತೆ ಬೇಯಿಸಿ ಒಂದು ತಣ್ಣಗಾಗಲು ಇಡಿ.
2. ಒಂದು ಚಿಕ್ಕ ಬಟ್ಟಲಿನಲ್ಲಿ ಹಾಲು ಕಾಕಿ ಅದರಲ್ಲಿ ಕೇಸರಿಯನ್ನು ಹಾಕಿ ಕಲೆಸಿಡಿ.
3. ನಂತರ ಮೊಸರು, ಹಸಿ ಮೆಣಸಿನಕಾಯಿ, ಅರಿಶಿಣ ಪುಡಿ, ಸಾಸಿವೆ, ಮೆಂತೆ, ಜೀರಿಗೆ ಹಾಕಿ ಚೆನ್ನಾಗಿ ರುಬ್ಬಿ, ನಂತರ ಇದಕ್ಕೆ ಎಣ್ಣೆ ಸೇರಿಸಿ. ಸಾಸಿವೆ ಎಣ್ಣೆ ಸೇರಿಸಿದರೆ ಒಳ್ಳೆಯದು.
4. ನಂತರ ಸ್ವಲ್ಪ ಮಸಾಲೆಯನ್ನು ಪನ್ನೀರ್ ಜೊತೆ ಮಿಶ್ರಣ ಮಾಡಿ ಪನ್ನೀರ್ ಅನ್ನು ಬಾಣಲಿಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
5. ಈಗ ಪಾತ್ರೆಯನ್ನು ಬಿಸಿ ಮಾಡಿ ತುಪ್ಪ ಹಾಕಬೇಕು. ತುಪ್ಪ ಬಿಸಿಯಾದಾಗ ರುಚಿಗೆ ತಕ್ಕ ಉಪ್ಪು ಮತ್ತು ಉಳಿದ ಮಸಾಲೆಯನ್ನು ಹಾಕಿ 2 ನಿಮಿಷ ಹುರಿಯಬೇಕು. ನಂತರ ಬೇಯಿಸಿದ ಅನ್ನ ಮತ್ತು ಪನ್ನೀರ್ ತುಂಡುಗಳನ್ನು ಹಾಕಿ 2-3 ನಿಮಿಷ ಸೌಟ್ ನಿಂದ ತಿರುಗಿಸಬೇಕು. ನಂತರ ಉರಿಯಿಂದ ತೆಗೆದು ಹಾಲಿನಲ್ಲಿ ಕಲೆಸಿದ ಕೇಸರಿಯನ್ನು ಹಾಕಿದರೆ ರುಚಿಕರವಾದ ಆಚಾರಿ ಪನ್ನೀರ್ ಪಲಾವ್ ರೆಡಿ.



Click it and Unblock the Notifications
