Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಶ್ರಮವಿಲ್ಲದೆ ಮಾಡಿ ಸವಿಯಿರಿ ಸಿಹಿ ಅವಲಕ್ಕಿ

ಹಳೆ ಮೈಸೂರು ಕಡೆ ಒಂದು ಮಾತಿದೆ. ಅರ್ಜೆಂಟೂ ಅಂದ್ರೆ, ಉಪ್ಪಿಟ್ಟು ಕೆದಕು, ಇನ್ನೂ ಅರ್ಜೆಂಟಾದ್ರೆ ಅವಲಕ್ಕಿ ನೆನೆಸು.
ಅವಲಕ್ಕಿಯಲ್ಲಿ ಹಲವು ಬಗೆ ತಿಂಡಿ ಮಾಡ್ತಾರೆ. ಅವಲಕ್ಕಿ ಬಾತ್, ಖಾರದ ಅವಲಕ್ಕಿ, ಅವಲಕ್ಕಿಒಗ್ಗರಣೆ, ಸಿಹಿ ಅವಲಕ್ಕಿ, ಮೊಸರವಲಕ್ಕಿ, ಅವಲಕ್ಕಿ ಬಿಸಿಬೇಳೆ ಬಾತ್ ಇತ್ಯಾದಿ ಇತ್ಯಾದಿ.
ಈ ಪೈಕಿ ಮೊಸರವಲಕ್ಕಿ ಹಾಗೂ ಸಿಹಿ ಅವಲಕ್ಕಿ ಮಾಡೋದು ಸುಲಭ ಅಂದ್ರೆ ಸುಲಭ. ಏಕೆಂದರೆ ಇಲ್ಲಿ ಒಲೆ ಹಚ್ಚುವ ಗೋಜೆ ಇಲ್ಲ.
ಮೊಸರವಲಕ್ಕಿ : ನಿಮಗೆ ಅಗತ್ಯವಿರುವಷ್ಟು ಅವಲಕ್ಕಿಯನ್ನು ಚೆನ್ನಾಗಿ ನೀರಲ್ಲಿ ತೊಳೆದು, ಅರ್ಧಗಂಟೆ ನೆನೆಸಿಟ್ಟು, ನೀರನ್ನೆಲ್ಲಾ ಹಿಂಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೊಸರು ಹಾಕಿದರೆ ಮೊಸರವಲಕ್ಕಿ ರೆಡಿ. ಟೈಮಿದ್ದರೆ, ರುಚಿಗೆ ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆಯನ್ನೂ ಹಾಕ್ಕೋಬಹುದು.
ಸಿಹಿ ಅವಲಕ್ಕಿ
ಬೇಗಾಗುವ ಪದಾರ್ಥ : ಕಾಲು ಕೆಜಿ ಗಟ್ಟಿ ಅವಲಕ್ಕಿ, ಅರ್ಧ ಅಚ್ಚು ಬೆಲ್ಲ, ಒಂದು ಹೋಳಿನಷ್ಟು ತೆಂಗಿನಕಾಯಿ, ನಾಲ್ಕಾರು ಏಲಕ್ಕಿ, ಒಂದೆರಡು ಚಮಚ ಸಕ್ಕರೆ.
ಮಾಡುವ ವಿಧಾನ : ಗಟ್ಟಿ ಅವಲಕ್ಕಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು, ಪಾತ್ರೆಯಲ್ಲಿ ಹಾಕಿ ಭರ್ತಿ ನೀರು ಹಾಕಿ ಅರ್ಧಗಂಟೆ ನೆನೆಸಿಡಿ. ಅವಲಕ್ಕಿ ಮೆತ್ತಗಾದ ಬಳಿಕ, ನೀರನ್ನು ಹಿಂಡಿ, ನೆಂದ ಅವಲಕ್ಕಿಯನ್ನು ಬೇರೆ ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಇದಕ್ಕೆ (ಸಣ್ಣಗೆ ತುರಿದ) ಕಾಯಿತುರಿ, ಹೆರೆದ ಬೆಲ್ಲ, ನುಣ್ಣಗೆ ಕುಟ್ಟಿದ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಮೇಲೆ ಒಂದೆರಡು ಚಮಚ ಸಕ್ಕರೆ ಹಾಕಿದರೆ. ರುಚಿಯಾದ ದಿಢೀರ್ ತಿನಿಸು ಸಿಹಿಅವಲಕ್ಕಿ ರೆಡಿ.



Click it and Unblock the Notifications
