Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೊಸವರ್ಷಕ್ಕೆ ಹುಳಿ ಹಿಟ್ಟಿನ ಕೇಕ್ ಇಡ್ಲಿ

ಬೇಕಾದ ಪದಾರ್ಥಗಳು :
ಉಳಿದಿರುವ ಹುಳಿಹುಳಿ ಇಡ್ಲಿ ಹಿಟ್ಟು
ಕಡಲೇಬೇಳೆ 25 ಗ್ರಾಂ
ಹೆಸರುಬೇಳೆ 25 ಗ್ರಾಂ
ತೆಂಗಿನಕಾಯಿ ತುರಿ 1 ಬಟ್ಟಲು
ಹಸಿ ಮೆಣಸಿನಕಾಯಿ 4
ಹಸಿ ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಜೀರಿಗೆ
ತಯಾರಿಸುವ ಬಗೆ :
ಕಡಲೇಬೇಳೆ ಮತ್ತು ಹೆಸರುಬೇಳೆಯನ್ನು ಒಟ್ಟಿಗೆ ಸುಮಾರು ಒಂದು ಗಂಟೆಹೊತ್ತು ನೆನೆಸಬೇಕು. ತರಿತರಿಯಾದ ರವೆಯಾಗುವಂತೆ ಹದವಾಗಿ ರುಬ್ಬಿಕೊಳ್ಳಬೇಕು. ಆನಂತರ ಇದನ್ನು ಹುಳಿಇಡ್ಲಿ ಹಿಟ್ಟಿಗೆ ಬೆರಸಿ, ಉಪ್ಪು ಹಾಕಿ ಸ್ವಲ್ಪ ಸಮಯ ಬಿಡಿ. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ತುರಿದ ಶುಂಠಿ ಮತ್ತು ತೆಂಗಿನಕಾಯಿ ತುರಿಯನ್ನು ಸೇರಿಸಿ, ಚೆನ್ನಾಗಿ ಕಲಸಿಡಿ.
ಎರಡು ಚಮಚ ಎಣ್ಣೆ ಬಿಸಿಮಾಡಿಕೊಂಡು ಸಾಸಿವೆ ಹಾಗೂ ಹೆಚ್ಚಿಕೊಂಡ ಹಸಿರು ಮೆಣಸಿನಕಾಯಿ ಒಗ್ಗರಣೆ ತಯಾರಿಸಿ. ಇದನ್ನು ಕಾಲು ಚಮಚದಷ್ಟು ಅಡಿಗೆ ಸೋಡಾ ಜತೆಗೆ ಇಡ್ಲಿ ಹಿಟ್ಟಿನ ಮೇಲೆ ಸುರಿಯಿರಿ. ಚೆನ್ನಾಗಿ ಕಲಸಿ ಅಗಲವಾದ ಇಡ್ಲಿ ತಟ್ಟೆಗಳಲ್ಲಿ ಹಾಕಿ, ಹಬೆಯಲ್ಲಿ ಬೇಯಿಸಿರಿ. ಬಿಸಿಬಿಸಿಯಾದ ಕೇಕ್ ಇಡ್ಲಿಯನ್ನು ಈ ಕೆಳಗಿನ ಪುಡಿಯೊಂದಿಗೆ ಬಡಿಸಿರಿ.
ಪುಡಿ ತಯಾರಿಸುವ ವಿಧಾನ :
ಸ್ವಲ್ಪ ಸಾಸಿವೆ ಮೂರು ಚಮಚ ಜೀರಿಗೆ, ಎರಡು ಚಮಚ ಉದ್ದಿನಬೇಳೆ, ಸ್ವಲ್ಪ ಮೊಸರಿನಲ್ಲಿ ನೆನೆಸಿದ ಹಸಿ ಅಥವಾ ಒಣಮೆಣಸಿನಕಾಯಿ, ಕರಿಬೇವಿನ ಸೊಪ್ಪನ್ನು, ಬಣ್ಣ ಬದಲಾಗುವವರೆಗೆ ಹುರಿಯಿರಿ, ನಂತರ ತರತರಿಯಾಗಿ ಪುಡಿ ಮಾಡಿಕೊಳ್ಳಿರಿ.



Click it and Unblock the Notifications
