Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಖತ್ ಸ್ಪೈಸಿ ಈ ಆಲೂ ರೋಟಿ ರೋಲ್

ಆಲೂ ರೋಟಿ ರೋಲ್ ಗೆ ಏನೇನು ಬೇಕು?
ರೋಟಿಗೆ: 2 ಕಪ್ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು, ಎಣ್ಣೆ, ನೀರು
ಪಲ್ಯಕ್ಕೆ: * 2-3 ಬೇಯಿಸಿದ ಆಲೂಗಡ್ಡೆ
* ಈರುಳ್ಳಿ
* ಕ್ಯಾರೆಟ್, ಕ್ಯಾಪ್ಸಿಕಂ
* ಹಸಿರು ಮೆಣಸಿನಕಾಯಿ
* ಬಟಾಣಿ
* ಉಪ್ಪು, ಅರಿಶಿಣ, ಕೆಂಪು ಮೆಣಸಿನಕಾಯಿ ಪುಡಿ
* ಚಾಟ್ ಮಸಾಲಾ, ಜೀರಿಗೆ, ಕರಿಬೇವು
ಆಲೂ ರೋಟಿ ರೋಲ್ ತಯಾರಿಸುವ ವಿಧಾನ:
1. ಬಿಸಿ ನೀರು ಮತ್ತು ಸ್ವಲ್ಪ ಎಣ್ಣೆಯನ್ನು ಬಳಸಿ ಚಪಾತಿ ಹಿಟ್ಟಿನಂತೆ ಕಲೆಸಿಕೊಳ್ಳಬೇಕು.
2. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಅದಕ್ಕೆ ಕರಿಬೇವು, ಜೀರಿಗೆ ಹಾಕಿ ಹುರಿಯಬೇಕು. ನಂತರ ಅದಕ್ಕೆ ಈರುಳ್ಳಿ ಹಾಕಿ ಚಿಕ್ಕದಾಗಿ ಕತ್ತರಿಸಿದ ತರಕಾರಿ ಮತ್ತು ಬಟಾಣಿಯನ್ನು ಬೆರೆಸಿ ತರಕಾರಿ ಸ್ವಲ್ಪ ಮೆತ್ತಗಾಗುವವರೆಗೂ ಹುರಿಯಬೇಕು.
3. ನಂತರ ಈ ಮಿಶ್ರಣಕ್ಕೆ ಅರಿಶಿಣ, ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಚಾಟ್ ಮಸಾಲಾ ಹಾಕಿ ಚೆನ್ನಾಗಿ ಬೆರೆಸಬೇಕು.
4. ಬೇಯಿಸಿದ ಆಲೂಗಡ್ಡೆಗಳನ್ನು ಚೆನ್ನಾಗಿ ಹಿಸುಕಿ ಈ ಮಿಶ್ರಣದೊಂದಿಗೆ ಬೆರೆಸಬೇಕು. ಇದನ್ನು 2-3 ನಿಮಿಷ ಚೆನ್ನಾಗಿ ಹುರಿದು ನಂತರ ಉರಿಯನ್ನು ಆರಿಸಬೇಕು.
5. ರೋಟಿಯನ್ನು ತವೆ ಮೇಲೆ ಬೇಯಿಸಿ ( ರೋಟಿಗೆ ಎಣ್ಣೆ ಬದಲು ತುಪ್ಪ ಹಾಕಿದರೆ ರುಚಿ ಹೆಚ್ಚು)
6. ರೋಟಿ ಮಧ್ಯೆ ಈ ಆಲೂ ಮಿಶ್ರಣ ಹಾಕಿ ಸುರುಳಿ ಸುತ್ತಿದರೆ ಆಲೂ ರೋಟಿ ರೋಲ್ ರೆಡಿ. ಇದರೊಂದಿಗೆ ಟೊಮೆಟೊ ಕೆಚಪ್ ಬೆರೆಸಿ ತಿಂದರೆ ಇನ್ನೂ ರುಚಿ.



Click it and Unblock the Notifications
