Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಇದು ಮಸಾಲೆ ಅಲ್ಲ ದಾವಣಗೆರೆ ಬೆಣ್ಣೆ ದೋಸೆ

ಇದು ಮಸಾಲೆ ದೋಸೆಯೆ ತರಹವೆ ಇದ್ದರು ಇದರಲ್ಲಿ ಆಲೂ ಬಾಜಿಯನ್ನು ಬೇರೆ ಇಂದು ಬಟ್ಟಲಿನಲ್ಲಿ ಕೊಡುತ್ತಾರೆ ದೋಸೆಯನ್ನು ಬೆಣ್ಣೆ ಅಥವಾ ತುಪ್ಪ ಹಾಕಿ ತಯಾರಿಸಲಾಗುತ್ತದೆ. ಇದಕ್ಕೆ ಕೊಡುವ ಚಟ್ನಿ ಖಾರವಾಗಿದ್ದು ಈ ದೋಸೆ ಇದರಲ್ಲಿ ನೆಚ್ಚಿಕೊಂಡು ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಈ ರುಚಿಯಾದ ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ ನೋಡಿ ಇಲ್ಲಿದೆ.
ದೋಸೆಗೆ ಬೇಕಾಗುವ ಸಾಮಾಗ್ರಿಗಳು:
1. ಅಕ್ಕಿ 4 ಕಪ್ (ನೀರಿನಲ್ಲಿ5 ಗಂಟೆ ನೆನೆ ಹಾಕಬೇಕು)
2. ಉದ್ದಿನ ಬೇಳೆ 1 ಕಪ್
3. ಕಡಲೆ ಪುರಿ 1/2 ಕಪ್
4. ಮೆಂತೆ 1 ಚಮಚ
5. ಸಕ್ಕರೆ 1 ಚಮಚ
6. ಉಪ್ಪು ರುಚಿಗೆ ತಕ್ಕಷ್ಟು
7. ಒಂದು ಚಿಟಿಕೆ ಅಡುಗೆ ಸೋಡಾ
ಮಸಾಲ:
ಬೇಯಿಸಿದ ಮತ್ತು ಕಿವುಚಿದ ಆಲೂಗೆಡ್ಡೆ 2
ಈರುಳ್ಳಿ 1, ತುಪ್ಪದಲ್ಲಿ ಕರಿದಿದ್ದು
ಉಪ್ಪು ರುಚಿಗೆ ತಕ್ಕಷ್ಟು
ಚಟ್ನಿ :
ತೆಂಗಿನ ತುರಿ 1 ಕಪ್
4 ಹಸಿ ಮೆಣಸು
1 ಚಮಚ ಸಕ್ಕರೆ
ಶುಂಠಿ, ಚಿಕ್ಕ ತುಂಡು
ಕೊತ್ತಂಬರಿ ಸೊಪ್ಪು
ಹುರಿಗಡಲೆ 3 ಚಮಚ
ಚಿಟಿಕೆ ಇಂಗು
ಎಣ್ಣೆ ಒಂದು ಚಮಚ
1/2 ಚಮಚ ಸಾಸಿವೆ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1.ನಾಳೆ ಬೆಳಗ್ಗೆ ದೋಸೆ ಮಾಡಬೇಕೆಂದು ಇದ್ದರೆ ರಾತ್ರಿಯೆ ದೋಸೆಯ ಸಾಮಾಗ್ರಿಗಳನ್ನ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಅರೆದು ಇಡಬೇಕು.
2. ಬೆಳಿಗ್ಗೆ ತೆವೆಗೆ ಬೆಣ್ಣೆ ಸವರಿ ತೆಳ್ಳಗೆ ದೋಸೆ ಹಿಟ್ಟನ್ನು ಹುಯ್ಯಬೇಕು, ಅದು ಗರಿಯಾಗುವಾಗ ಅದರ ಎರಡು ಬದಿಗೆ ಬೆಣ್ಣೆ ಹಾಕಿ ಒಮ್ಮೆ ಎರಡೂ ಕಡೆ ಮಗುಚಿ ಹಾಕಿದರೆ ದೋಸೆ ರೆಡಿ.
3. ಮಸಾಲೆಯ ಸಾಮಾಗ್ರಿಗಳನ್ನು ಮಿಶ್ರ ಮಾಡಿದರೆ ಬಾಜಿ ರೆಡಿ.
4. ಚಟ್ನಿ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಅರೆಯಬೇಕು, ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ ಈ ಚಟ್ನಿಯನ್ನು ಅದರಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಕುದಿಸಬೇಕು, ಚಟ್ನಿ ರೆಡಿ.
ದೋಸೆಯನ್ನು ತಿನ್ನವಾಗ ಸ್ವಲ್ಪ ಬೆಣ್ಣೆಯನ್ನು ಬದಿಯಲ್ಲಿ ಇಟ್ಟು ನಂತರ ಚಟ್ನಿ ಮತ್ತು ಮಸಾಲ ಜೊತೆ ಸೇರಿಸಿ ತಿಂದರೆ ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
