Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಶಿರಸಿಭವನ ಉದ್ಘಾಟನೆ : ಲಾಡು ಸಮಾರಾಧನೆ
ಶಿರಸಿ ಭವನದ ಬೇಸನ್ ಲಾಡು ಹಂಚಲು ದಟ್ಸ್ ಕನ್ನಡಕ್ಕೆ ಇದಕ್ಕಿಂತ ಅತ್ಯುತ್ತಮ ಸುಸಂದರ್ಭ ಲಭಿಸಲಾರದು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಗೌರವ ದಕ್ಕಿರುವ ಹಿನ್ನೆಲೆಯಲ್ಲಿ ಈ ಕನ್ನಡ ಅಂತರ್ಜಾಲ ತಾಣದ ಓದುಗರಿಗೆ ಮತ್ತು ಸಮಸ್ತ ಕನ್ನಡಿಗರಿಗೆ ಶಿರಸಿ ಭವನದಲ್ಲಿ ತಯಾರಿಸಲಾಗಿರುವ ಬೇಸನ್ ಚಿರೋಟಿರವೆ ಲಾಡು ಹಂಚಲು ಬಯಸುತ್ತದೆ. ಓದುಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
* ತೇಜಸ್ವಿನಿ ಹೆಗಡೆ, ಬೆಂಗಳೂರು
ಈ ಲಾಡು ಕಡಲೇಹಿಟ್ಟು(ಬೇಸನ್) ಹಾಗೂ ಚಿರೋಟಿರವೆಯ ಮಿಶ್ರಣದಿಂದ ಮಾಡುವುವಂಥದ್ದು. ಹಾಗಾಗಿಯೇ ಇದಕ್ಕೆ ಬೇಸನ್‌ಚಿರೋಟಿರವೆ ಲಾಡು ಎಂದು ಹೇಳುತ್ತೇವೆ. ಕೇವಲ ಕಡಲೇಹಿಟ್ಟಿನ ಲಾಡುಗಳನ್ನೂ ಮಾಡಬಹುದು. ಆದರೆ ಚಿರೋಟಿರವೆಯ ಮಿಶ್ರಣ ಲಾಡಿಗೆ ಹೊಸ ಸ್ವಾದವನ್ನು ನೀಡುತ್ತದೆ. ಮಾಡುವುದೂ ಕಷ್ಟವೇನಲ್ಲ, ಎಲ್ಲಾ ಲಾಡುಗಳಂತೆಯೇ.
ಬೇಕಾಗುವ ಸಾಮಗ್ರಿಗಳು
ಚಿರೋಟಿ ರವೆ - 1 ಲೋಟ
ಕಡಲೇಹಿಟ್ಟು - 1 ಲೋಟ
ತುಪ್ಪ - 3/4 ಲೋಟ
ಸಕ್ಕರೆ - 2 1/2 ಲೋಟ
ಏಲಕ್ಕಿ ಪುಡಿ - 3/4 ಚಮಚ.
ದ್ರಾಕ್ಷಿ ಹಾಗೂ ಗೋಡಂಬಿ ಚೂರುಗಳು. (ನಿಮಗೆ ಬೇಕಿದ್ದಷ್ಟು ಹಾಕಬಹುದು. ಸಾಮಾನ್ಯವಾಗಿ ಈ ಪ್ರಮಾಣಕ್ಕೆ 15 ದ್ರಾಕ್ಷಿ ಹಾಗೂ ಗೋಡಂಬಿ ಚೂರುಗಳನ್ನು ಹಾಕಿದರೆ ಒಳ್ಳೆಯದು. ಬೇಕಿದ್ದರೆ ಕೇಸರಿ ಎಳೆಯನ್ನೂ ಸೇರಿಸಬಹುದು.)
ಮಾಡುವ ವಿಧಾನ
ತುಪ್ಪವನ್ನು ಸಮಪ್ರಮಾಣದಲ್ಲಿ ಚಿರೋಟಿರವೆ ಹಾಗೂ ಕಡಲೇಹಿಟ್ಟಿಗೆ ಹಾಕಿ ಸಣ್ಣ ಉರಿಯಲ್ಲಿ ಪರಿಮಳ ಬರುವಷ್ಟು ಹೊತ್ತು ಬೇರೆಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು.
ಸಕ್ಕರೆಗೆ ಸುಮಾರು 1 ಲೋಟದಷ್ಟು ನೀರುಹಾಕಿ, ಪಾಕವನ್ನು ಬರಿಸಿಟ್ಟುಕೊಳ್ಳಬೇಕು. ಪಾಕ ಸರಿಯಾಗಿ ಬಂದಿದೆಯೇ ಇಲ್ಲವೇ ಎಂದು ನೋಡಿಕೊಳ್ಳುವುದು ಅತ್ಯಾವಶ್ಯಕ. ಹಾಗೆ ನೋಡಲು, 2-3 ಹನಿ ಪಾಕವನ್ನು ಸ್ವಲ್ಪ ನೀರಿಗೆ ಹಾಕಿದಾಗ ಅದು ಮುದ್ದೆಗಟ್ಟಬೇಕು. ಹಾಗೆ ಅದು ಮುದ್ದೆಗಟ್ಟಲು ಬಂದರೆ ಪಾಕ ಸರಿಯಾಗಿದೆ ಎಂದರ್ಥ.
ಪಾಕ ಬಂದಕೂಡಲೇ ಗ್ಯಾಸ್ ಆರಿಸಿಬಿಡಿ. ನಂತರ ಹುರಿದಿಟ್ಟುಕೊಂಡಿದ್ದ ಚಿರೋಟಿರೆವೆ ಹಾಗೂ ಕಡಲೇಹಿಟ್ಟನ್ನು ಸಕ್ಕರೆ ಪಾಕಕ್ಕೆ ಹಾಕಿ ಚೆನ್ನಾಗಿ ಕಲಕಿ, ಅದಕ್ಕೆ ಏಲಕ್ಕಿಪುಡಿ, ಗೋಡಂಬಿ ಹಾಗೂ ದ್ರಾಕ್ಷಿ ಚೂರುಗಳು, ಬೇಕಿದ್ದರೆ ಕೇಸರಿ ಎಳೆಗಳನ್ನು ಸೇರಿಸಿ 15 ನಿಮಿಷ ಹಾಗೇ ಮುಚ್ಚಿಡಬೇಕು. ಆನಂತರ ತುಸು ಬೆಚ್ಚಗಿರುವಾಗಲೇ ಸ್ವಲ್ಪ ಸ್ವಲ್ಪವನ್ನೇ ತೆಗೆದುಕೊಂಡು ಹುಡಿಮಾಡಿ ಉಂಡೆ ಕಟ್ಟಬೇಕು.
ಈಗ ಘಮಘಮಿಸುವ ರುಚಿಕರ ಬೇಸನ್‌ಚಿರೋಟಿರವೆ ಲಾಡು ತಿನ್ನಲು ರೆಡಿ. ಮೇಲಿ ಹೇಳಿರುವ ಪ್ರಮಾಣಗಳನ್ನು ಹಾಕಿದರೆ ಸುಮಾರು 10 ರಿಂದ 15 ಬೇಸನ್ ಲಾಡುಗಳನ್ನು ತಯಾರಿಸಬಹುದು.



Click it and Unblock the Notifications