Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದೋಸೆ ಕ್ಯಾಂಪ್ ನಲ್ಲಿ ಸಾದಾ ದೋಸೆ

ಬೆಂಗಳೂರಿನಲ್ಲಿ ಇತ್ತೀಚೆಗೆ ಗಳೂ ಜನಪ್ರಿಯತೆ ಗಳಿಸಿವೆ. ಅಂದಹಾಗೆ ದೋಸೆಯಲ್ಲಿ ಎಷ್ಟು ಬಗೆ ಇದೆ ಗೊತ್ತೆ?
ರಾಗಿ ದೋಸೆ, ಮಸಾಲೆ ದೋಸೆ, ಸಾದಾ ದೋಸೆ ಅಥವಾ ಖಾಲಿ ದೋಸೆ, ಸೆಟ್ ದೋಸೆ, ರವೆ ದೋಸೆ, ಈರುಳ್ಳಿ ದೋಸೆ, ಮೈದಾ ದೋಸೆ, ಅಡೆ ದೋಸೆ, ಅವರೆಕಾಳು ದೋಸೆ, ಮೆಂತ್ಯದ ದೋಸೆ, ನೀರು ದೋಸೆ, ಕಾಯಿ ದೋಸೆ..... ಬನ್ನಿ ನಾವೂ ಕೂಡ ವಿವಿಧ ಬಗೆಯ ದೋಸೆ ಮಾಡೋಣ.
ಸಾದಾ ಅಥವಾ ಖಾಲಿದೋಸೆ
ಬೇಕಾಗುವ ಪದಾರ್ಥ: ಕುಸುಬಲ ಅಕ್ಕಿ ಕಾಲು ಕೆ.ಜಿ. ಸಾಧಾರಣ ಅಕ್ಕಿ ಕಾಲು ಕೆ.ಜಿ., ಉದ್ದಿನ ಬೇಳೆ 125 ಗ್ರಾಂನಷ್ಟು, ಮೆಂತ್ಯ 2 ಚಮಚ, ಒಂದು ಹಿಡಿ ಅವಲಕ್ಕಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಮೊದಲು ಎರಡು ಬಗೆ ಅಕ್ಕಿ, ಉದ್ದಿನ ಬೇಳೆ, ಮೆಂತ್ಯ, ಅವಲಕ್ಕಿ ಎಲ್ಲವನ್ನೂ 6ರಿಂದ 8 ಗಂಟೆಗಳ ಕಾಲ ನೆನೆಸಿಡಿ. ರಾತ್ರಿ ಹೊತ್ತಿಗೆ ಮಿಕ್ಸರ್, ಗ್ರೆೃಂಡರ್ ಅಥವಾ ಒರಳಿನಲ್ಲಿ ಚೆನ್ನಾಗಿ ರುಬ್ಬಿ, ಉಪ್ಪು ಹಾಕಿ ಕಲೆಸಿ ಮುಚ್ಚಿಡಿ. (ನೆನಪಿರಲಿ, ದೊಡ್ಡ ಪಾತ್ರೆಯಲ್ಲಿ ಅರ್ಧದಷ್ಟು ಹಾಕಿಡುವುದು ಉತ್ತಮ. ಕಂಠ ಭರ್ತಿ ಇದ್ದರೆ, ಹುದುಗು ಹೆಚ್ಚಾಗಿ ಹಿಟ್ಟು ಹೊರ ಚೆಲ್ಲುತ್ತದೆ).
ಬೆಳಗ್ಗೆ ಹೊತ್ತಿಗೆ ಅದು ಸೊಗಸಾಗಿ ಹಾಗೂ ಹದವಾಗಿ ಹುದುಗಾಗಿರುತ್ತದೆ. ಆನಂತರ ಉರಿಯುವ ಒಲೆಯ ಮೇಲೆ ಕಾವಲಿ ಇಟ್ಟು, ಕಾವಲಿಗೆ ಎಣ್ಣೆ ಸವರಿ, ಒಂದು ಸೌಟಿನಷ್ಟು ಹಿಟ್ಟನ್ನು ಹೆಂಚಿನ ಮೇಲೆ ಹಾಕಿ ಮಗಚುವಕೈಯಲ್ಲಿ ಎರಡೂ ಬದಿ ಬೇಯಿಸಿದರೆ, ಸಾದಾ ದೋಸೆ ರೆಡಿ. ದೋಸೆ ಜತೆ ಈರುಳ್ಳಿ ಸಾಂಬರ್ ಅಥವಾ ತೆಂಗಿನಕಾಯಿ ಚಟ್ನಿ ಒಳ್ಳೇ ಕಾಂಬಿನೇಷನ್.



Click it and Unblock the Notifications
