Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಪ್ಪಟ ಕನ್ನಡ ಮಣ್ಣಿನ ಖಾದ್ಯ: ರಾಗಿ ದೋಸೆ
ಇಷ್ಟು ದಿನ ಕರ್ನಾಟಕವನ್ನು ರಾಗಿ ಮುದ್ದೆ ಮಾತ್ರ ಪ್ರತಿನಿಧಿಸುತ್ತಿತ್ತು. ಈಗ ಆ ಸಾಲಿಗೆ ಅಪ್ಪಟ ಕನ್ನಡ ಮಣ್ಣಿನ ರಾಗಿ ದೋಸೆ ಸಹ ಸೇರಿದೆ. ಈಗಾಗಲೇ ವಿದ್ಯಾರ್ಥಿ ಭವನ್ ಮಸಾಲೆ ದೋಸೆ, ಕೃಷ್ಣ ಭವನ್ ಬೆಣ್ಣೆ ಮಸಾಲೆ, ಜನಾರ್ದನ ಈರುಳ್ಳಿ ದೋಸೆ, ದ್ವಾರಕಾ ಹೋಟೆಲ್ ಖಾಲಿ ದೋಸೆ, ರಾಮಕೃಷ್ಣ ರಾಗಿ ದೋಸೆ, ಶಾಂತಿ ಸಾಗರ್ ಸೆಟ್ ದೋಸೆ....ಈ ಎಲ್ಲಾ ದೋಸೆಗಳನ್ನು ಸವಿದರೂ ರಾಗಿ ದೋಸೆ ಮಾತ್ರ ಸದಾ ಕಾಡುತ್ತಿರುತ್ತದೆ. ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವವರು ರಾಗಿ ದೋಸೆಯನ್ನು ಮತ್ತಷ್ಟು ಇಷ್ಟಪಡುತ್ತಿದ್ದಾರೆ.
*ಶ್ರೀರಕ್ಷಾ, ಬೆಂಗಳೂರು
ಬೇಕಾಗುವ ಸಾಮಗ್ರಿಗಳು
ರಾಗಿ: 100ಗ್ರಾಂ
ಮೊಸರು:10 ಗ್ರಾಂ
ಶುಂಠಿ: 5 ಗ್ರಾಂ
ಹಸಿ ಮೆಣಸಿನಕಾಯಿ:2
ಇಂಗು: 2 ಗ್ರಾಂ ಅಥವಾ ಒಂದು ಚಿಟಿಕೆ
ಉಪ್ಪು: ರುಚಿಗೆ ತಕ್ಕಷ್ಟು
ಮೈದಾ: 10 ಗ್ರಾಂ
ಅಕ್ಕಿ ಹಿಟ್ಟು: 5 ಗ್ರಾಂ
ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ: 10 ಗ್ರಾಂ
ತಯಾರಿಸುವ ವಿಧಾನ
5 ರಿಂದ 6 ಗಂಟೆಗಳ ಕಾಲ ರಾಗಿಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಒರಳು ಕಲ್ಲು ಅಥವಾ ಮಿಕ್ಸಿ ಅಥವಾ ಗ್ರೈಂಡರ್‌ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಸಣ್ಣಗೆ ಹೆಚ್ಚಿಕೊಂಡ ಶುಂಠಿ, ಮೊಸರು,ಹಸಿ ಮೆಣಸಿನಕಾಯಿ, ಇಂಗು,ಉಪ್ಪು, ಮೈದಾ,ಅಕ್ಕಿ ಹಿಟ್ಟು,ಈರುಳ್ಳಿಯನ್ನು ರುಬ್ಬಿಕೊಂಡ ರಾಗಿ ಹಿಟ್ಟಿಗೆ ಸೇರಿಸಿ.
ಉರಿಯುವ ಒಲೆಯ ಮೇಲೆ ಕಾವಲಿ ಇಟ್ಟು, ಕಾವಲಿಗೆ ಬೆಣ್ಣೆ ಅಥವಾ ಎಣ್ಣೆಯನ್ನು ಸವರಿ, ಒಂದು ಸೌಟಿನಷ್ಟು ಹಿಟ್ಟನ್ನು ಹೆಂಚಿನ ಮೇಲೆ ಹಾಕಿ ಮಗಚುವಕೈಯಲ್ಲಿ ಎರಡೂ ಬದಿ ಬೇಯಿಸಿದರೆ, ರಾಗಿ ದೋಸೆ ರೆಡಿ. ದೋಸೆ ಜತೆ ಈರುಳ್ಳಿ ಸಾಂಬರ್ ಅಥವಾ ತೆಂಗಿನಕಾಯಿ ಚಟ್ನಿ ಒಳ್ಳೇ ಕಾಂಬಿನೇಷನ್.



Click it and Unblock the Notifications
