Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಬ್ಬಕ್ಕಿ ಇಡ್ಲಿ ಮಾಡ್ವೆಯಂತೆ ಬಾರಕ್ಕಾ

ಸಾಮಗ್ರಿ:
ಅಕ್ಕಿಯನ್ನು ತೊಳೆದು, ಒಣಗಿಸಿ ರವೆಯಂತೆ ಮಿಷನ್ನಿಗೆ ಹಾಕಿಸಿರುವ ಅಕ್ಕಿರವೆ 1 1/2 ಲೋಟ , ಸಣ್ಣ ಸಬ್ಬಕ್ಕಿ 1/2 ಲೋಟ, ಗಟ್ಟಿಯಾದ ಹುಳಿಮೊಸರು 2 ಲೋಟ, ಕಲ್ಲುಪ್ಪು - 2 1/2 ಚಮಚ, ಕಡಲೇಬೇಳೆ 2 ಚಮಚ, ಹೆಚ್ಚಿಕೊಂಡ ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು, ಹಸಿ ತೆಂಗಿನಕಾಯಿತುರಿ 2-3 ಚಮಚ, ಅಡಿಗೆ ಸೋಡಾ 1/2 ಚಮಚ, ಎಣ್ಣೆ 3 ಚಮಚ, ಸಾಸಿವೆ 1 ಚಮಚ , ಸೀಳಿದ ಹಸಿರು ಮೆಣಸಿನಕಾಯಿ 5, ಕತ್ತರಿಸಿದ ಗೋಡಂಬಿ ಅರ್ಧ ಹಿಡಿಯಷ್ಟು.
ವಿಧಾನ :
ರಾತ್ರಿ 10 ಗಂಟೆಗೆ ಸಬ್ಬಕ್ಕಿ, ಅಕ್ಕಿರವೆ, ಉಪ್ಪು ಹಾಗೂ ಕಡಲೇಬೇಳೆಯನ್ನು ಮೊಸರಿನೊಂದಿಗೆ ಕಲಸಿರಿ. ಬೆಳಗಿನವರೆಗೆ ನೆನೆಯಲಿ. ಹುದುಗುಬಂದ ಹಿಟ್ಟಿಗೆ ಕೊತ್ತಂಬರಿಸೊಪ್ಪು, ಕರಿಬೇವಿನ ಸೊಪ್ಪು, ತೆಂಗಿನಕಾಯಿ ಮತ್ತು ಸೋಡಾ ಸೇರಿಸಿ ಕಲಸಿರಿ. ಎಣ್ಣೆ ಬಿಸಿಮಾಡಿ ಸಾಸಿವೆ ಮತ್ತು ಹಸುರು ಮೆಣಸಿನಕಾಯಿಯ ಒಗ್ಗರಣೆ ಹಾಕಿರಿ. ನಂತರ ಅದಕ್ಕೆ ಗೋಡಂಬಿ ಸೇರಿಸಿ, ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಇದನ್ನು ಹಿಟ್ಟಿನ ಮೇಲೆ ಸುರಿದು ಚೆನ್ನಾಗಿ ಕದಕಿರಿ. ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಹಿಟ್ಟನ್ನು ಸುರಿದು ಹಬೆಯಲ್ಲಿ ಬೇಯಿಸಿರಿ. ಈ ಇಡ್ಲಿಯೊಂದಿಗೆ ನೆಂಚಿಕೆಗೆ ನಿಮ್ಮ ನಾಲಗೆ ರುಚಿ ಮತ್ತು ಅಡುಗೆ ಮನೆಯಲ್ಲಿ ಆವತ್ತಿನ ದಿನ ಮಾಡಲು ಸಾಧ್ಯವಾಗುವ ಯಾವುದೇ ಚಟ್ನಿ ಒಪ್ಪುತ್ತದೆ. ಕೆಂಪು ಮೆಣಸಿನಕಾಯಿ ಮತ್ತು ಕಡಲೆಬೇಳೆ, ಕಾಯಿ ಬೆರೆತ ಚಟ್ನಿ ಆದರೆ ಇನ್ನೂ ಚೆನ್ನಾಗಿರುತ್ತದೆ.
ಅಕ್ಕಿರವೆ ಮಾಡಿಕೊಳ್ಳುವ ಬಗೆ :
ಸ್ವಲ್ಪ ದಪ್ಪನೆ ಅಕ್ಕಿಯನ್ನು ಆರಿಸಿ, ತೊಳೆದು ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ನೀರು ಬಸಿದು ಅಕ್ಕಿಯನ್ನು ಬಟ್ಟೆಯ ಮೇಲೆ ಹರಡಿ, ನೆರಳಿನಲ್ಲಿ ಒಣ ಹಾಕಬೇಕು. ಅಕ್ಕಿಯಲ್ಲಿನ ನೀರು ಒಣಗಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಬೇಕು.



Click it and Unblock the Notifications
